ಬಿತ್ತನೆ ಬೀಜ,ರಸಗೊಬ್ಬರ, ಕೀಟನಾಶಕ ಖರೀದಿಸುವಾಗ ರೈತರು ಎಚ್ಚರಿಕೆ ವಹಿಸಿ

0
18

ಚಿತ್ತಾಪುರ:ಬಿತ್ತನೆಯ ಬೀಜ,ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರಿದಿಸುವಾಗ ಮುನ್ನೆಚ್ಚರಿಕೆ ವಹಿಸಿ ಖರೀದಿಸಿ ಎಂದು ಸಹಾಯ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರ್ ರೈತರಿಗೆ ಮನವಿ ಮಾಡಿದರು.

ತಾಲೂಕಿನಲ್ಲಿ 2021-22ನೇ ಸಾಲಿನ ಹಿಂಗಾರು ಹಂಗಾಮಿ ಬಿತ್ತನೆಯ ಕಾರ್ಯ ಪ್ರಾರಂಭವಾಗುತ್ತಿದೆ.ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಚಿತ್ತಾಪುರ, ನಾಲವಾರ, ಮಾಡಬೂಳ, ಶಹಾಬಾದ್ ಮತ್ತು ಕಾಳಗಿಗಳಿಂದ ಅಥವಾ ಕೃಷಿ ಇಲಾಖೆಯಿಂದ ಅಧಿಕೃತವಾಗಿ ಪರವಾನಿಗೆ ಪಡೆದಂತಹ ಕೃಷಿ ಮಾರಾಟಗಾರರಿಂದಲೇ ಖಾಯಿಡಿಸಬೇಕು ಹಾಗೂ ಕಡ್ಡಾಯವಾಗಿ ಖರೀದಿಸಿದ ಪರಿಕರಕ್ಕೆ ರಸೀದಿಯನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ರೈತರು ಗಂಜ್ ವ್ಯಾಪಾರಿಗಳಿಂದ ಅಥವಾ ಬುಟ್ಟಿ ವ್ಯಾಪಾರಿಗಳಿಂದ ಯಾವುದೇ ಕಳಪೆ ಪರಿಕರಗಳನ್ನು ಖರೀದಿಸಬಾರದು. ಒಂದು ವೇಳೆ ಅನಧಿಕೃತವಾಗಿ ಯಾರಾದರೂ ತಾಲೂಕಿನಲ್ಲಿ ಬೀಜ,ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರುವುದು ಕಂಡುಬಂದಲ್ಲಿ ಇಲಾಖೆಯ ಗಮನಕ್ಕೆ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಾರ್ವಜನಿಕರಲ್ಲಿ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here