ಸುರಪುರ:ತಾಲೂಕಿನ ವಿವಿಧ ಶಾಲೆಗಳಿಗೆ ಲೋಕಾಯುಕ್ತ ಪಿಐ ತಂಡ ಭೇಟಿ

0
31

ಸುರಪುರ: ಲೋಕಾಯುಕ್ತ ಎಸ್.ಪಿ. ಎ. ಆರ್. ಕರ್ನೂಲ್ ಅವರ ಆದೇಶದಂತೆ ಡಿಎಸ್ಪಿ ಮೊಮ್ಮದ್ ಇಸ್ಮಾಯಿಲ್ ಅವರ ಮಾರ್ಗದರ್ಶನದಲ್ಲಿ ಗುರುವಾರ ಮಧ್ಯಾಹ್ನ ರಂಗಂಪೇಟ, ತಿಮ್ಮಾಪುರ ಲಕ್ಷ್ಮಿಪುರ, ರುಕ್ಮಾಪುರ, ಕುಂಬಾರ ಪೇಟೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ೧೯ ತಡೆಗಟ್ಟುವ ಕುರಿತು ಮುಂಜಾಗೃತಾ ಕ್ರಮಗಳ ಪರಿಶೀಲನೆಗಾಗಿ ಲೋಕಾಯುಕ್ತ ಪಿಐ ಮತ್ತವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಪಿಐ ಅರುಣಕುಮಾರ ಅವರು,ಕೋವಿಡ್-೧೯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲಾ ಶಾಲೆಯ ಮುಖ್ಯಸ್ಥರು ಪಾಲಿಸಬೇಕು, ಶಾಲೆ ಆವರಣ, ವಿದ್ಯಾರ್ಥಿಗಳ ಕೊಠಡಿಗಳು, ಕಾರ್ಯಾಲಯ, ಸೇರಿದಂತೆ ಎಲ್ಲೆಡೆ ಸ್ಯಾನಿಟೈಸರ್ ಮಾಡಬೇಕು, ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಗಮನಹರಿಸಬೇಕು.

Contact Your\'s Advertisement; 9902492681

ಪ್ರತಿಯೊಬ್ಬ ವಿದ್ಯಾರ್ಥಿಯ ದೇಹದ ಉಷ್ಣಾಂಶವನ್ನು ಥರ್ಮಲ ಸ್ಕ್ಯಾನರ್ ನಿಂದ ಪರೀಕ್ಷಿಸಬೇಕು,ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸುವಂತೆ ತಿಳಿ ಹೇಳಬೇಕು ವಿದ್ಯಾರ್ಥಿಗಳಿಗೆ ಕೊರೋನ ರೋಗದ ಕುರಿತು ಇರುವ ಭಯವನ್ನು ಹೋಗಲಾಡಿಸಬೇಕು, ಜೊತೆಗೆ ಶಾಲಾ ಮತ್ತು ಕಾಲೇಜುಗಳಲ್ಲಿ ಕೋವಿಡ್ ಹರಡದಂತೆ ತಡೆಯಲು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ನಾಗರಾಜ, ಬಸವರಾಜ, ಮಲ್ಲಿಕಾರ್ಜುನ, ನಗರ ಹಾಗೂ ಗ್ರಾಮೀಣ ಪ್ರದೇಶದ ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here