27ಕ್ಕೆ ಭಾರತ್ ಬಂದ್: ದಲಿತ ಸಂಘಟನೆಗಳಿಂದ ಬೆಂಬಲ

0
26

ಕಲಬುರಗಿ :ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೆಹಲಿಯ ರೈತ ಹೋರಾಟಗಾರರು ಇದೇ ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಗೆ ಕಲಬುರಗಿಯ ದಲಿತ ಸಂಘಟನೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ ಎಂದು ದಲಿತ ಸಂಘರ್ಷ ಸಮಿತಿ ಯ ರಾಜ್ಯ ಸಂಚಾಲಕ ಎಸ್. ಆರ್ ಕೊಲ್ಲುರ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗಿಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ಸಂಬಂಧಿತ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು, ದೇಶದಲ್ಲಿ ನಡೆಯುತ್ತಿರುವ ಖಾಸಗೀಕರಣ ವನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದ್ದರಿಂದ ಸಾಮಾನ್ಯ ಜನರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ, ಕೃಷಿ ಕಾಯ್ದೆಗಳು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಕರೆ ಕೊಟ್ಟಿರುವ ಬಂದ್ ಗೆ ಬೆಂಬಲ ನೀಡುತ್ತಿದ್ದೇವೆಂದು ಕೊಲ್ಲುರ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅರ್ಜುನ್ ಗೊಬ್ಬುರ್, ಮಹೇಶ್ ರಾಠೋಡ, ಪಾಂಡುರಂಗ ಮಾವೀನಕರ್, ಮಹಾದೇವ ಕೊಳಕುರ್, ಸುರೇಶ್ ಮೆಂಗನ್, ಮಾರುತಿ ಮಾಳಗಿ, ಸುಧಾಮ್ ಧನ್ನಿ, ಭೀಮಶ್ಯಾ ಖನ್ನಾ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here