ಶಹಾಬಾದ: ಪೌರ ಕರ್ಮಿಕರಿಗೆ ಸನ್ಮಾನ: ಚೆಕ್ ವಿತರಣೆ

0
99

ಶಹಾಬಾದ:ನಗರದ ಸೌಂದರ್ಯ ಮತ್ತು ಸ್ವಚ್ಛತೆ ಕಾಪಾಡುವ ಮೂಲಕ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರ ಸೇವೆ ವೈದ್ಯರು ಮತ್ತು ದೇವರಿಗಿಂತ ಮಿಗಿಲಾದುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಹೇಳಿದರು.

ಅವರು ಗುರುವಾರ ನಗರಸಭೆಯ ಸಭಾಂಗಣದಲ್ಲಿ ನಗರಸಭೆಯಿಂದ ಆಯೋಜಿಸಲಾದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ನಗರ ಹಾಗೂ ನಗರದ ಸಾರ್ವಜನಿಕರು ನಮ್ಮವರು ಎಂಬ ಭಾವನೆಯಿಂದ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ನಿಜವಾಗಲೂ ಕಾಯಕಯೋಗಿಗಳಾಗಿದ್ದಾರೆ.ಕಾರಣ ನಮ್ಮ ಮನೆಯ ಹೊಲಸನ್ನು ತೆಗೆಯಲು ಹಿಂದೇಟು ಹಾಕುವ ನಾವುಗಳಾದರೆ, ನಗರದ ಸಾರ್ವಜನಿಕರು ಚೆಲ್ಲಿದ ಹೊಲಸನ್ನು ತೆಗೆಯುವ ಮೂಲಕ ನಮ್ಮ ಆರೋಗ್ಯ ಕಾಪಾಡುತ್ತಿದ್ದಾರೆ.ಈ ನಿಟ್ಟಿನಲ್ಲಿ ಪೌರಕಾರ್ಮಿಕರು ವೈದ್ಯರು ಮತ್ತು ದೇವರಿಗಿಂತ ಮಿಗಿಲಾದವರು ಎಂದು ಹೇಳಿದರು.

ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ತಂದೆ-ತಾಯಿ, ಸಂಬಂಧಿಗಳನ್ನು ಮುಟ್ಟಲು ಮುಂದೆ ಬರದ ಸಮಯದಲ್ಲಿ ಪೌರಕಾರ್ಮಿಕರು ನಗರದ ಸ್ವಚ್ಛತೆಯೊಂದಿಗೆ ಮನೆಮನೆಗೆ ತೆರಳಿ ಜನರಿಗೆ ಒದಗಿಸಿರುವ ಸೇವೆ ದೊಡ್ಡದಿದೆ ಎಂದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ,ನಗರದ ಸೌಂದರ್ಯ ಮತ್ತು ಸ್ವಚ್ಛತೆ ಕೈಗೊಂಡರೆ ಅಧಿಕಾರಿಗಳಿಗೂ ಒಳ್ಳೆಯ ಪ್ರಶಂಸೆ ನಿಮ್ಮಿಂದ ಬರುತ್ತದೆ.ಒಂದು ವೇಳೆ ಕೆಲಸ ಮಾಡದೇ ಹೋದರೇ ನಿಮ್ಮಿಂದಲೇ ಕೆಟ್ಟ ಹೆಸರು ಬರುತ್ತದೆ. ಕುಡಿತಕ್ಕೆ ಒಳಗಾಗಬೇಡಿ.ಕುಡಿತ ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದರು.ಅಲ್ಲದೇ ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಹಾಗೂ 7000 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ,ಎಇಇಗಳಾದ ಪುರುಷೋತ್ತಮ,ಮುಜಾಮಿಲ್ ಅಲಂ,ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದ ರಾಜ್ಯ ಪರಿಷತ ಸದಸ್ಯ ಯಾಕೂಬ ಅಲಿ, ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಮುತ್ತಣ್ಣಾ ಭಂಡಾರಿ,ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ಪೌರಕಾರ್ಮಿಕರು ಸೇರಿದಂತೆ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ಇತರರು ಇದ್ದರು.

ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ ನಿರೂಪಿಸಿದರು, ಕಚೇರಿ ವ್ಯವಸ್ಥಾಪಕ ಶರಣಗೌಡ ಪಾಟೀಲ ಸ್ವಾಗತಿಸಿದರು, ನಾರಾಯಣರೆಡ್ಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here