ಜೇವರ್ಗಿ :ತಾಲೂಕಿನ ವಿವಿಧ ಗ್ರಾಮಗಳ ರೈತರ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಸಾಲ ಕೊಡುವದರಲ್ಲಿ ಕಾರ್ಯದರ್ಶಿಗಳು ವಂಚಿಸುತ್ತಿದ್ದಾರೆ ,ರೈತರ ಪತ್ತಿನ ಸಹಕಾರ ಸಂಘಗಳಲ್ಲಿ ಹಳೆಯ ಸದಸ್ಯರು ಇದ್ದರು ಅವರನ್ನು ಪರಿಗಣಿಸದೆ ಹೊಸದಾಗಿ ಸದಸ್ಯತ್ವ ಪಡೆದ ರೈತರಿಗೆ ಸಾಲ ನೀಡುತ್ತಿದ್ದಾರೆ.
ಈಗಾಗಲೇ ನೆಲೋಗಿ, ಯಲಗೋಡ ಕರಕಿಹಳ್ಳಿ ಸಾತಖೇಡ ಸಹಕಾರಿ ಸಂಘಗಳ ಹೊಸ ರೈತ ಸದಸ್ಯರಿಗೆ ಕಾರ್ಯಕ್ರಮ ಆಯೋಜಿಸಿ ಸಾಲ ನೀಡುತ್ತಾರೆ. ಆದರೆ ಹಳೆಯ ರೈತ ಸದಸ್ಯರಿಗೆ ಅನ್ಯಾಯವಾಗಿದೆ
ಪದ್ಧತಿ ಪ್ರಕಾರ ಹಳೆಯ ಸದಸ್ಯರಿಗೆ ಸಾಲ ನೀಡಬೇಕು ನಂತರ ಹೊಸಬರಿಗೆ ನೀಡಬೇಕು. ಹಳೆಯ ಸದಸ್ಯರಿಗೆ ಸಾಲ ಕೇವಲ ಹತ್ತು ಸಾವಿರ ರೂಪಾಯಿಗಳು ಮಾತ್ರ ಸದ್ಯ ಹೊಸಬರಿಗೆ ಇಪ್ಪತೈದು ಸಾವಿರ ರೂಪಾಯಿ ಸಾಲ ನೀಡುತ್ತಾರೆ .
ತಮಗೆ ಬೇಕಾದವರಿಗೆ ಲಕ್ಷ ಲಕ್ಷ ಕೊಡುತ್ತಿದ್ದಾರೆ ! ರೈತರು ಅಂದ್ರೆ ಎಲ್ಲರೂ ಒಂದೇ ಇದರಲ್ಲಿ ಬಿಜೆಪಿ ಪಕ್ಷದ ರೈತರ ಸಾಲ ವಿತರಣೆ ಕಾರ್ಯಕ್ರಮ ಎನ್ನುವಂತೆ ಬಿಂಬಿಸಲಾಗುತಿದೆ. ಎಲ್ಲಾ ರೈತರಿಗೂ ಸರಿ ಸಮನಾಗಿ ಬಡ್ಡಿ ರಹಿತ ಸಾಲ ಕೊಡುವದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಮಾನ್ಯ ಕಲಬುರಗಿ ಮತ್ತು ಯಾದಗಿರಿ ರೈತರ ಜಿಲ್ಲಾ ಸಹಕಾರ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ನಿರ್ದೇಶಕರಿಗೂ ತಿಳಿಸುತ್ತ ,ಬಡ ರೈತನ ಬಾಳಿಗೆ ಆಸರೆ ಆಗಿ ನಿಮ್ಮ ರಾಜಕೀಯ ದೊಂಬರಾಟಕ್ಕೆ ರೈತನ ಬಾಳಿನ ಜೊತೆ ಚಲ್ಲಾಟ ಆಡಬೇಡಿ.
ಗ್ರಾಮೀಣ ರೈತರಿಗೆ ಆಸರೆಯಾಗಬೇಕಿದ್ದ ಸಹಕಾರಿ ಸಂಘಗಳು ಮುಳುವಾದರೆ ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ .