ಕಲಬುರಗಿ: ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ೮ನೇ ವಾರ್ಷಿಕ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಿದೆ. ಜಲವರ್ಣ, ತೈಲವರ್ಣ, ರೇಖಾಚಿತ್ರ, ಮಿಶ್ರಮಾಧ್ಯಮ, ಛಾಯಾಚಿತ್ರ, ಗ್ರಾಫಿಕ್ ಮತ್ತು ಶಿಲ್ಪ ಮಾಧ್ಯಮದ ಮೂಲಕಲಾಕೃತಿಗಳನ್ನು ಸ್ಪರ್ಧೆ ಮತ್ತು ಕಲಾ ಪ್ರದರ್ಶನಕ್ಕೆ ಕಳುಹಿಸಬಹುದಾಗಿದೆ ಎಂದು ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ ಪಿ. ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅತ್ಯುತ್ತಮವಾದ ಆರು ಕಲಾಕೃತಿಗಳಿಗೆ ತಲಾ ರೂ.೫,೦೦೦/- ನಗದು ಮತ್ತು ದೃಶ್ಯ ಬೆಳಕು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಲಾಸ್ಪರ್ಧೆ ಮತ್ತು ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸು ವವರು ಚಿತ್ರಕಲಾವಿದರ ವ್ಯಕ್ತಿ ಪರಿಚಯ ಮತ್ತು ಭಾವಚಿತ್ರದೊಂದಿಗೆ ಮೂಲ ಕಲಾಕೃತಿಗಳ ೬ಘಿ೮ ಅಳತೆಯ ಒಂದೇ ಮಾಧ್ಯಮಕ್ಕೆ ಸೇರಿದ ಎರಡು ಕಲಾಕೃತಿಗಳ ಛಾಯಾಚಿತ್ರಗಳನ್ನು ಮಾತ್ರ ಸ್ವೀಕರಿಸ ಲಾಗುವುದು ಎಂದು ತಿಳಿಸಿದ್ದಾರೆ.
ಸ್ಪರ್ಧೆಗೆ ಕಳುಹಿಸುವ ಚಿತ್ರಕಲಾಕೃತಿಗಳು ಗರಿಷ್ಠ ೬ಘಿ೬ ಅಡಿ ಅಳತೆ ಮೀರದಂತೆ ಇರಬೇಕು. ಮೂಲಕಲಾಕೃತಿಗಳ ಛಾಯಾ ಚಿತ್ರಗಳನ್ನು ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಗೆ ಅಕ್ಟೋಬರ್ ೧೫ ರೊಳಗೆ ತಲುಪುವಂತೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ಪರಶುರಾಮ ಪಿ, ಪ್ಲಾಟ್ ನಂ.೧೭, ಪ್ರಶಾಂತ ನಗರ (ಬಿ) ಕಲಬುರಗಿ. ಅಥವಾ ಮೊ.ನಂ. 9901360105ಗೆ ಸಂಪರ್ಕಿಸಬಹುದಾಗಿದೆ.