ಜೇವರ್ಗಿ : ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ದಲಿತ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಹೋಗದಂತೆ ಬಸ್ಸಿನಿಂದ ಕೂದಲು ಹಿಡಿದು ಎಳೆದಾಡಿ ಹೊಡೆದು ಬಿಡಿಸಲು ಬಂದ 9 ಜನರಿಗೆ ಸಿಕ್ಕಾಪಟ್ಟೆ ಹೊಡೆದು ಗಾಯಗೊಳಿಸಿದ ಘಟನೆಯು ನಮ್ಮಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ ? ಎನ್ನುವ ಪ್ರಶ್ನೆಯನ್ನು ಮೂಡಿಸುತ್ತದೆ. ಎಳೆದಾಡಿ ಹೊಡೆದಿರುವ ಮೇಲೆ ದೌರ್ಜನ್ಯದ ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು . ಇದು ನಮ್ಮ ದೇಶದ ಕಾನೂನು ಸುವ್ಯವಸ್ಥೆ ಅರಾಜಕತೆಯ ಪರಮಾವದಿಯಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರ ಗ್ರಾಮದಲ್ಲಿ ಮೂರು ವರ್ಷದ ಬಾಲಕ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗ್ರಾಮದ ಮುಖಂಡರು ಬಾಲಕನ ತಂದೆತಾಯಿಗಳಿಗೆ ದಂಡ ಹಾಕಿದ್ದನ್ನು ದೇವಸ್ಥಾನದ ಸ್ವಚ್ಛಗೊಳಿಸಲು ತಗಲುವ ವೆಚ್ಚವನ್ನು ಭರಿಸುವಂತೆ ಒತ್ತಾಯಿಸಿದವರ ಮೇಲೆ ಅಸ್ಪಶ್ಯತೆ ಆಚರಣೆ ಮಾಡಿದವರ ಮೇಲೆ ಕೇಸನ್ನು ದಾಖಲಿಸಿ ಉಗ್ರ ಶಿಕ್ಷೆ ಕೊಡಿಸಬೇಕು ಅದೇರೀತಿ ಪ್ರಸ್ತುತ ಶಿಕ್ಷಣ ಸಾಲಿನಲ್ಲಿ NEP ಎಂಬ ಕರಾಳ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿದ್ದು ಅದರಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮಾರಕವಾಗುತ್ತದೆ ರಾಷ್ಟ್ರೀಯ NEP ಹೊಸ ಶಿಕ್ಷಣ ನೀತಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಜೇವರ್ಗಿ ತಶಿಲ್ದಾರ ಮುಖಾಂತರ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಭೀಮರಾಯ ನಗನೂರ್ ಮಲ್ಲಣ್ಣ ಕೊಡಚಿ ಶ್ರೀಹರಿ ಕರ್ಕಿಹಳ್ಳಿ ಸಿದ್ದರಾಮ ಕಟ್ಟಿ. ರವಿ ಕುರಳಗೇರ. ಮಹೇಶ್ ಕೋಕಿಲ ದವಲಪ್ಪ ಮದನ್ ಶಿವಶರಣ ಮಾರಡಗಿ ಭಾಗಣ್ಣ ಸಿದ್ನಾಳ. ದೇವಿಂದ್ರ ಮುದವಾಳ ಶರಣಬಸಪ್ಪ ಲಕ್ನಾಪುರ ಬೀರಪ್ಪ ರೇವನೂರ್ ಸಿದ್ದು ಜನಿವಾರ ಸಂಗಪ್ಪ ಹರ್ನೂರ್ ಶ್ರೀಮಂತರ ನೂರ್ ಹಾಗೂ ಇನ್ನು ಅನೇಕ ದಲಿತ ಮುಖಂಡರು ಇದ್ದರು.