ಅಂಚೆ ಕಚೇರಿ ಕಟ್ಟಡ ನಿರ್ಮಾಣ ಅನುಧಾನಕ್ಕೆ ಸಚಿವರ ಮೊರೆ

0
13

ಆಳಂದ: ಪಟ್ಟಣದಲ್ಲಿ ಅಂಚೆ ಇಲಾಖೆಯ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರಾತಿ ಕೈಗೊಳ್ಳಬೇಕು ಎಂದು ಸ್ಥಳೀಯ ಅಂಚೆ ಇಲಾಖೆಯ ಸಿಬ್ಬಂದಿಗಳ ಪರವಾಗಿ ನಾಗರಿಕರು ಒತ್ತಾಯಿಸಿದರು.

ಪಟ್ಟಣದಲ್ಲಿ ಶನಿವಾರ ಆಗಮಿಸಿದ್ದ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

Contact Your\'s Advertisement; 9902492681

ಪಟ್ಟಣದ ಹೃದಯ ಅಂಚೆ ಇಲಾಖೆಗೆ ಸ್ವಂತ ಜಾಗವಿದ್ದು, ಕಟ್ಟಡ ಇರುವಿಲ್ಲದೆ ಬಾಡಿಗೆ ಕಟ್ಟಡದಲ್ಲಿಕಾರ್ಯ ನಿರ್ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಮಂತ್ರಿಗಳಾದ ತಾವು ಅನುದಾನ ಒದಗಿಸಲು ಶ್ರಮಿಸಬೇಕು. ಸದ್ಯ ಪುರಸಭೆ ಮಳಿಗೆ ಮೇಲಂತಸ್ತಿನಲ್ಲಿ ಬಾಡಿಗೆಯಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ವಯಸ್ಕರರಿಗೆ ಕಚೇರಿ ಕೆಲಸಕ್ಕೆ ಮೇಲೆತ್ತಿ ಬರಲು ತೊಂದರೆ ಆಗುತ್ತಿದೆ ಎಂದು ೨೫ಕ್ಕೂ ಹೆಚ್ಚು ನಾಗರಿಕರು ಸಹಿ ಹಾಕಿದ ಮನವಿ ಸಲ್ಲಿಸಿದರು.

ವಿಮಾ ದೊರಕಿಸಲು ಮನವಿ: ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ಎಲ್ಲಾ ರೈತರಿಗೆ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಅಡಿಯಲ್ಲಿ ವಿಮಾ ಮೊತ್ತವನ್ನು ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ಘಟಕವು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮನವಿ ಸಲ್ಲಿಸಿ ಇದೇ ವೇಳೆ ಒತ್ತಾಯಿಸಿದರು. ಸೋಬಾಭಿನ್ ಮತ್ತು ತೊಗರಿಗೆ ಕ್ವಿಂಟಲ್‌ಗೆ ೮ ಸಾವಿರ ರೂ.ಗಳಂತೆ ಖರೀದಿಸಬೇಕು. ಕೇಂದ್ರ ಸರ್ಕಾರದ ೫೦ ಕೋಟಿ ಅನುದಾನ ನೀಡಿ ೧೫ರಿಂದ ೨೦ ಸಣ್ಣ ಕೆರೆಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಒದಗಿಸಬೇಕು. ೨೪ ಗಂಟೆ ವಿದ್ಯುತ್ ಸೇರಿ ನೀರಾವರಿ ಕಲ್ಪಿಸಿ ಬರಮುಕ್ತ ತಾಲೂಕನ್ನಾಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಕಾಳಗಿ, ಹಿರಿಯ ರೈತ ಮುಖಂಡ ಆಧಿನಾಥ ಹೀರಾ, ಶ್ರೀಶೈಲ ಪಾಟೀಲ, ಶಿವುಕುಮಾರ ಜಂಬಗಾ, ಮಲ್ಲಣ್ಣಾ ಕುಲಕರ್ಣಿ ಮತ್ತಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here