ಸರಸಂಬಾ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರಿ ನಿ. ಜಿಲ್ಲೆಗೆ ಮಾದರಿ

0
11

ಆಳಂದ: ಈ ಭಾಗದಲ್ಲಿ ಸಹಕಾರಿ ಕ್ಷೇತ್ರಗಳ ದಿವಾಳಿಯ ಅಂಚಿನಲ್ಲಿರುವ ಹೊತ್ತಿನಲ್ಲೇ ತಾಲೂಕಿನ ಗ್ರಾಮೀಣ ಭಾಗದ ಸೌಹಾರ್ದ ಸಹಕಾರಿ ನಿಯಮಿತವೊಂದು ಕೋಟ್ಯಂತರ ವಾಹಿವಾಟಿನ ಮೂಲಕ ಆರ್ಥಿಕ ಕ್ರಾಂತಿಯ ಮೂಲಕ ಈಗ ಹಳ್ಳಿಯಿಂದ ಪಟ್ಟಣಕ್ಕೂ ತನ್ನ ಶಾಖೆ ವಿಸ್ತರಿಸುವ ಮೂಲಕ ಜಿಲ್ಲೆಗೆ ಮಾದರಿ ಎನಿಸಿಕೊಂಡಿದೆ.

ತಾಲೂಕಿನ ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮೀ ಸೌಹಾರ್ದ ಸಹಕಾರ ನಿಮಿತವೇ ಇಂದು ಮಾದರಿಯಾದ ಸೌಹಾರ್ದ ಎಂಬ ಹೆಗ್ಗಳಿಕೆ ತನ್ನದಾಗಿಸಿದೆ.

Contact Your\'s Advertisement; 9902492681

ಕಳೆದ ೨೦೦೨ರಲ್ಲಿ ಸುಮಾರು ೪೦೦ ಜನ ಸದಸ್ಯರಿಂದ ೨ಲಕ್ಷ ರೂಪಾಯಿ ಶೇರು ಮೊತ್ತದೊಂದಿಗೆ ಹುಟ್ಟಿಕೊಂಡ ಸರಸಂಬಾದ ಶ್ರೀಧನಲಕ್ಷ್ಮೀ ಸಹಾರ್ದ ಸಹಕಾರವೂ ಇಂದು ೪ ಸಾವಿರ ಸದಸ್ಯರನ್ನು ಹೊಂದಿ ೧.೫ ಕೋಟಿ ರೂಪಾಯಿ ಶೇರು ಮೊತ್ತ ಹಾಗೂ ೮.೫. ಕೋಟಿ ರೂಪಾಯಿ ದುಡಿಯುವ ಬಂಡವಾಳದೊಂದಿಗೆ ಈಗ ಬರೋಬರಿ ೪೦ ಕೋಟಿ ರೂಪಾಯಿ ವಾರ್ಷಿಕ ಬಂಡವಾಳದ ವೈಹಿವಾಟಿಗೆ ತಲುಪಿದ್ದು, ೩೬,೧೪,೦೮೦ ವಾರ್ಷಿಕ ನಿವ್ವಳ ಲಾಭ ಹೊಂದಿಗೆ ಸಹಕಾರಿ ಕ್ಷೇತ್ರದ ನಿಜಾರ್ಥ ಕಲ್ಪಿಸಿಕೊಟ್ಟಿದೆ.

ಈಗಾಗಲೇ ಸರಂಬಾ, ಹಿರೋಳಿ ಮತ್ತು ಪಡಸಾವಳಿ ಈ ಮೂರು ಶಾಖೆಗಳು ವೈಹಿವಾಟಿನೊಂದಿಗೆ ಸೆ. ೨೮ರಂದು ಆಳಂದನಲ್ಲಿ ೪ನೇ ಶಾಖೆ ಉದ್ಘಾಟನೆ ನಡೆಯಲಿದೆ. ಶೀಘ್ರವೇ ಹೋಬಳಿ ಕೇಂದ್ರ ಮಾದನಹಿಪ್ಪರಗಾದಲ್ಲಿ ಅನುಮತಿ ಪಡೆದ ೫ನೇ ಶಾಖೆ ಕಾರ್ಯ ಪ್ರಗತಿಯಲಿದ್ದು, ಒಟ್ಟಾರೆ ಇದರ ಉದ್ದೇಶ ಶ್ರೀಸಾಮಾನ್ಯರಿಗೆ ನೆರವಾಗಿ ಆರ್ಥಿಕ ಕ್ರಾಂತಿಯನ್ನೇ ಕೈಗೊಳ್ಳಲು ಆಡಳಿತ ಮಂಡಳಿ ಹೆಜ್ಜೆಹಾಕಿದು ಗಮರ್ನಾ ಎನಿಸಿದೆ.

ಪ್ರಗತಿಗೆ ಕಾರಣ: ಈ ಸಹಕಾರ ಸಂಘವು ಜಿಲ್ಲೆಯಲ್ಲೇ ಅತಿ ಕಡಿಮೆ ಮತ್ತು ಸರಳ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ನೀಡಿದ್ದೇ ಇಂದು ಹೆಚ್ಚಿನ ವೈಹಿವಾಟಿಕೆ ಕಾರಣವಾಗಿ ಮಾದರಿ ಏನಿಸಿಕೊಂಡಿದೆ. ಇದರ ಶಾಖೆಗಳಲ್ಲಿ ಸದಸ್ಯರಿಗೆ ಹೆಚ್ಚಿನ ಸೇವೆ ಅನುಕೂಲಕ್ಕಾಗಿ ವಾರದ ರಜೆ ರಹಿತ ಕಾರ್ಯನಿರ್ವಹಿಸುವುದು ಮತ್ತೊಂದು ವಿಶೇಷವೇ ಆಗಿದೆ.

ಸೌಲಭ್ಯದಲ್ಲೂ ಎತ್ತಿದ ಕೈ: ಆಕಸ್ಮಾತ ಸದಸ್ಯರು ೨೫ ವರ್ಷ ಮೇಲ್ಟವರು ಮರಣ ಹೊಂದಿದರೆ ೨೫ ಸಾವಿರ ೫೦ವರ್ಷ ಮೇಲ್ಟವರು ಮೃತರಾದರೆ ೫೦ ಸಾವಿರ ಮರಣಾಂತರ ನಿಧಿ ಹೀಗೆ ವರ್ಷಕ್ಕೆ ೫ರಿಂದ ೬ಲಕ್ಷ ರೂಪಾಯಿ ನೀಡುತ್ತಿದೆ. ಅಲ್ಲದೆ, ಸದಸ್ಯರಿಗೆ ಎಲ್‌ಐಸಿ ಪ್ರಾಯೋಜಿತ ಮೈಕ್ರೋ ಇನ್ಸೂರೇನ್ಸ್ ಸೌಲಭ್ಯವಿದೆ. ಇದರಿಂದ ಶಾಖೆಗೂ ೧.೫೦ಲಕ್ಷ ರೂ ವಾರ್ಷಿಕ ಕಮಿಷನ್ ಬರುತ್ತಿದೆ. ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಶಾಖೆಯ ವ್ಯಾಪ್ತಿಯ ಗ್ರಾಮಗಳಲ್ಲಿ ೫ರಿಂದ೧೦ನೇ ತರಗತಿಯ ವರೆಗಿನ ಶಾಲೆಗಳಿಗೆ ಪ್ರತಿ ತರಗತಿಗೆ ೧.೫೦ ಸಾವಿರ ರೂ. ಪ್ರೋತ್ಸಾಧನ ಹಾಗೂ ೧೦ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ೧೦ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗೆ ೫ ಸಾವಿರ ಬಹುಮಾನ ನೀಡುತ್ತಾ ಬಂದಿದೆ.

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ೧೫೦ ಮಂದಿಗೆ ತಲಾ ೨೫ ಸಾವಿರ ರೂ.ಗಳು ಬಡ್ಡಿರಹಿತ ಸಾಲವನ್ನು ನೀಡಿ ಶೌಚಾಲಗಳನ್ನು ನಿರ್ಮಾಣಕ್ಕೆ ಪ್ರೋತ್ಸಾಹಿಸಿದೆ. ಸದಸ್ಯರಿಗೆ ಕಲ್ಯಾಣ ನಿಧಿಯೂ ಸ್ಥಾಪನೆ ಮಾಡಿದೆ.

ಸೆ. ೨೮ರಂದು ಬೆಳಗಿನ ೧೧:೪೫ಕ್ಕೆ ಆಳಂದನಲ್ಲಿ ನೂತನ ಶಾಖೆ ಉದ್ಘಾಟನೆ ಹಾಗೂ ೧೯ನೇ ವಾಷಿರ್ಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ.

ಶ್ರೀಸಾಮನ್ಯನ ಆರ್ಥಿಕ ವೃದ್ಧಿಯೇ ಗುರಿ: ಗ್ರಾಮೀಣ ಜನರಿಗೆ ಆರ್ಥಿಕ ಸ್ವಾವಲಂಭಿಗಳಾಗಿಸಿ ಸರ್ವೋತೋಮುಖ ಅಭಿವೃದ್ಧಿಯ ಕಲ್ಪಿಸುವ ಉದ್ದೇಶದೊಂದಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಟ್ಟಿದ್ದು, ಈ ಬಾರಿ ೯೦ ಲಕ್ಷ ರೂ.ನಿವ್ವಳ ಲಾಭ ಬಂದಿದೆ, ಸದಸ್ಯರಿಗೆ ಲಾಭದ ಜೊತೆಗೆ ಸಾಮಾಜಿಕ ಶೈಕ್ಷಣಿಕ ಕಾರ್ಯಗಳಿಗೂ ನಿಧಿ ಖರ್ಚು ಮಾಡಲಾಗುತ್ತಿದೆ. ಸದಸ್ಯರಲ್ಲಿ ಸಹಕಾರಿ ಕ್ಷೇತ್ರದ ಅರಿವಿನಿಂದಾಗಿ ನಾವು ಯಶಸ್ವಿಯತ್ತ ಸಾಗುತ್ತಿದ್ದೇವೆ. – ಮಹಾಂತಪ್ಪ ಆಲೂರೆ ಸರಸಂಬಾ, ಸಂಸ್ಥಾಪಕ ಅಧ್ಯಕ್ಷರು ಶ್ರೀಧನಲಕ್ಷ್ಮೀ ಸೌಹಾರ್ದ ಸಹಕಾರ ನಿ. ಸರಸಂಬಾ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here