ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿರುವ ಮೋರಾರ್ಜಿ ವಸತಿ ಶಾಲೆಗೆ ಸ್ವಂತ ಕಟ್ಟಡ ಭಾಗ್ಯ ದೊರಕಿದ್ದು ಸೆ. 28 ರ ಮಂಗಳವಾರ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತವಾದಂತಹ ಶಾಲಾ ಕಟ್ಟಡವನ್ನು ಉದ್ಘಾಟಿಸುತ್ತಿದ್ದಾರೆ.
ಅಂದು ಮ. 3.30 ಗಂಟೆಗೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ಬಾಲಕ ಮತ್ತು ಬಾಲಕಿಯರ ವಸತಿ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಳ್ಳುವರು.
24 ಕೋಟಿ ರು ವೆಚ್ಚದಲ್ಲಿ ಭೂ ಸ್ವಾಧೀನ- ಸುಸಜ್ಜಿತ ಸಾಲಾ ಕಟ್ಟಡ ನಿರ್ಮಾಣ
10. 18 ಎಕರೆ ವಿಸ್ತೀರ್ಣದಲ್ಲಿದೆ ಶಾಲಾ ಕಟ್ಟಡ- ಮಕ್ಕಳ ಅಧ್ಯಯನಕ್ಕೆ ಅನುಕೂಲ
ನೆಲೋಗಿ ಗ್ರಾಮ ಕನ್ನಡ ನಾಡು ಕಂಡ ಹೆಸರಾಂತ ಮುಖ್ಯಮಂತ್ರಿ ದಿ. ಧರಂಸಿಂಗ್ ಅವರ ಜನ್ಮಸ್ಥಳ. ನೆಲೋಗಿ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ ಎಲ್ಲಾ ವರ್ಗದಲ್ಲಿರುವ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ ವಸತಿಯುತ ಮೋರಾರ್ಜಿ ಶಾಲೆ ಇಲ್ಲಿ ಮಂಜೂರಾಗಿದ್ದು ಇದೀಗ ಸ್ವಂತ ಕಟ್ಟಡದೊಂದಿಗೆ ಮಕ್ಕಳಿಗೆ ಇನ್ನೂ ಹತ್ತಿರವಾಗಲು ಹೊರಟಿದೆ.
10. 18 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ಮೊರಾರ್ಜಿ ಶಾಲಾ ಅಂಗಳದಲ್ಲಿ 250 ಬಾಲಕರು, ಬಾಲಕಿಯರಿಗಾಗಿ ಕಲಿಕಾ ಕೋಣೆಗಳು, ವಿe್ಞÁನ, ಗಣಿತ, ರಸಾಯನ ಸಾಸ್ತ್ರ, ಜೀವಶಾಸ್ತ್ರ ವಿಷಯಗಳ ಪ್ರಯೋಗಾಲಯಗಳು, ಬಾಲಕ- ಬಾಲಕಿಯರಿಗಾಗಿ ಪ್ರತ್ಯೇಕ ವಸತಿ ಸವಲತ್ತಿದೆ, ಜೊತೆಗೇ ಪ್ರತ್ಯೇಕÀ ಅಡುಗೆ ಹಾಗೂ ಊಟದ ಕೋಣೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಬೋಧಕರು, ಬೋಧಕೇತರ ಸಿಬ್ಬಂದಿ, ಶಾಲೆಯ ಪ್ರಾಚಾರ್ಯರಿಗಾಗಿ ಪ್ರತ್ಯೇಕ ವಸತಿ ವ್ಯವಸ್ಥೆ ಸಹ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಆಟವಾಡಲು ವಿಶಾಲ ಹಾಗೂ ಸುಸಜ್ಜಿತವಾದಂತಹ ಮೈದಾನದ ಸವಲತ್ತು ಸಹ ಕಲ್ಪಿಸಲಾಗಿದೆ.
32 ಸಾವಿರ ಚದರ ಅಡಿಯ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಮೋರಾರ್ಜಿ ವಸತಿ ಶಾಲೆಯ ಂಗಳದಲ್ಲಿ ಹಸಿರು ವನಸಿರಿ ಕಂಗೊಳಿಸುವಂತೆ ಮಾಡಲಾಗಿಎಯಲ್ಲದೆ ಮಕ್ಕಳು ನೆರಳಲ್ಲಿ ಆಟೋಟÀ ಆಡಿಕೊಂಡು ಪಾಠ ಕಲಿಯುವಂತಹ ಸವಲತ್ತು ಇರುವಂತೆ ನೋಡಿಕೊಳ್ಳಲಾಗಿದೆ. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು, ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಅವರ ನಿರಂತರ ಪ್ರಯತ್ನದಿಂದಾಗಿ ನೆಲೋಗಿ ಮೊರಾರ್ಜಿ ಶಾಲೆ ಸುಸಜ್ಜಿತವಾದಂತಹ ಹಾಗೂ ಸ್ವಂತ, ಭವ್ಯ ಕಟ್ಟಡವನ್ನು ಹೊಂದಿದಂತಾಗಿದೆ.
ಇದೀಗ ಈ ಶಾಲೆಗೆ ಭೂಮೀ ಸ್ವಾಧೀನ- ಕಟ್ಟಡ ವೆಚ್ಚ ಸೇರಿದಂತೆ 24 ಕೋಟಿ ರು ಮೊತ್ತದಲ್ಲಿ ಹೊಸ ಕಟ್ಟಡ, ವಿಶಾಲ ಮೈದಾನ, ಊಟ- ವಸತಿಯುತ ಸವಲತ್ತು ದೊರಕಿದೆ. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಈ ಶಾಲಾ ಕಟ್ಟವನ್ನು ನೆಲೋಗಿ ಮಕ್ಕಳಿಗೆ ಸೆ. 28 ರ ಮಂಗಳವಾರ ಅರ್ಪಣೆ ಮಾಡಲಾಗಿದ್ದಾರೆ.
ಅಂದು ಮ. 3. 30 ಗಂಟೆಗೆ ನೆಲೋಗಿ ಹೊಸ ಶಾಲಾ ಕಟ್ಟಡದಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವರೊಂದಿಗೆ ಕ್ಷೇತ್ರದ ಶಾಸಕರಾದ ಡಾ. ಅಜಯ್ ಸಿಂಗ್, ನೆಲೋಗಿ ಗ್ರಾಮದ ಹಿರಿಯರು, ಯುವಕರು, ಸಹೋದರರು- ಸಹೋದರಿಯರು, ಶಾಲೆಯ ಮಕ್ಕಳು, ಬೋಧಕೇ ಸಿಬ್ಬಂದಿ ಪಾಲ್ಗೊಳ್ಳುತ್ತಿದ್ದಾರೆ.