ಸುರಪುರ: ದೇಶದಲ್ಲಿನ ರೈತರ ಅನೇಕ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಬಂದ್ ಬೆಂಬಲಿಸಿ ನಗರದಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಮುಖಂಡರು ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ರೈತರು ಅನೇಕ ಬೇಡಿಕೆಗಳಿಗಾಗಿ ಕಳೆದ ೧೦ ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸಿ ನೂರಾರು ರೈತರು ಸಾವನ್ನಪ್ಪಿದ್ದಾರೆ.ಆದರೆ ಕೇಂದ್ರ ಸರಕಾರ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ.ಅಲ್ಲದೆ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವುದಾಗಿ ಆಗ್ರಹಿಸಿದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ಥೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಸಂಚಾಲಕ ಉಸ್ತಾದ ವಜಾಹತ್ ಹುಸೇನ್,ತಾಲೂಕಾಧ್ಯಕ್ಷ ಸಂಗಣ್ಣ ಬಾಕ್ಲಿ,ತಿಪ್ಪಣ್ಣ ಪೊಲೀಸ್ ಪಾಟೀಲ್,ವೆಂಕಟೇಶ ಭಕ್ರಿ,ಶೌಕತ್ ಅಲಿ ಖುರೇಶಿ,ಶಾಂತು,ಎಮ್.ಡಿ.ಮಹಿಬೂಬ,ಅಲ್ತಾಫ್ ಸಗರಿ,ಮಲ್ಲನಗೌಡ ಬಾಚಿಮಟ್ಟಿ,ಉಮೇಶ ಕುಂಬಾರ ಸೇರಿದಂತೆ ಅನೇಕರಿದ್ದರು.