ಶರಣಪ್ಪ ಮಾದರ ಆತ್ಮಹತ್ಯೆಗೆ ಕಾರಣರಾದವರ ಬಂಧಿಸುವಂತೆ ಕುಟುಂಬಸ್ಥರ ಧರಣಿ

0
22

ಸುರಪುರ: ತಾಲೂಕಿನ ಹಾಲಗೆರಾ ಗ್ರಾಮದ ಶರಣಪ್ಪ ಮಾದರ ಎನ್ನುವ ಯುವಕ ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ,ಯುವಕನು ಆತ್ಮಹತ್ಯೆ ಮಾಡಿಕೊಳ್ಳಲು ಗ್ರಾಮದ ೮ ಜನರು ಕಾರಣರಾಗಿದ್ದಾರೆ ಎಂದು ಆರೋಪಿಸಿ ಮತ್ತು ಅವರನ್ನು ಬಂಧಿಸುವಂತೆ ಆಗ್ರಹಿಸಿ ನಗರದ ತಹಸೀಲ್ ಕಚೇರಿ ಮುಂದೆ ಸೋಮವಾರ ಬೆಳಿಗ್ಗೆ ಧರಣಿ ನಡೆಸಿದರು.

ಈ ಕುರಿತು ಧರಣಿಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಹಾಲಗೆರಾ ಗ್ರಾಮದ ಆದಪ್ಪ ಎನ್ನುವ ವ್ಯಕ್ತಿ ದೇವಪ್ಪ ಎನ್ನುವವರಿಗೆ ಸಂಬಂಧಿಸಿದ ಯುವತಿಯೊಬ್ಬಳನ್ನು ಪ್ರೇಮಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ.

Contact Your\'s Advertisement; 9902492681

ಆದರೆ ಆದಪ್ಪನಿಗೆ ಯುವತಿಯನ್ನು ಕರೆದುಕೊಂಡು ಹೋಗಲು ಇಲ್ಲಿ ಧರಣಿ ಮಾಡುತ್ತಿರುವ ಮಲ್ಲಮ್ಮ ಮಾದರ ಅವರ ಮಗನಾದ ಶರಣಪ್ಪ ಸಹಾಯ ಮಾಡಿದ್ದಾನೆ ಎಂದು ಅನುಮಾನಿಸಿ ದೇವಪ್ಪ ಮತ್ತಿತರರು ಸೇರಿ ಶರಣಪ್ಪ ಮಾದರಗೆ ಕಳೆದ ಅನೇಕ ದಿನಗಳಿಂದ ನಿತ್ಯವು ಕಿರಕುಳ ನೀಡಿದ್ದಾರೆ.ಅಲ್ಲದೆ ಇದೇ ೨೨ ನೇ ತಾರೀಖಿನಂದು ತೀವ್ರ ಹೊಡೆಬಡೆ ಮಾಡಿದ್ದಾರೆ,ಅಲ್ಲದೆ ನೀನೆ ವಿಷ ಕುಡಿಯಬೇಕೆಂದು ಬಲವಂತ ಮಾಡಿದ್ದಾರೆ.

ಇದರಿಂದಾಗಿ ನೊಂದ ಶರಣಪ್ಪ ಮಾದರ ೨೩ನೇ ತಾರೀಖು ವಿಷ ಕುಡಿದು ಸಾವನ್ನಪ್ಪಿದ್ದಾನೆ.ಆದ್ದರಿಂದ ಶರಣಪ್ಪನ ಸಾವಿಗೆ ಕಾರಣರಾದ ಎಲ್ಲಾ ೮ ಜನರನ್ನು ಬಂಧಿಸುವಂತೆ ಒತ್ತಾಯಿಸಿ ಧರಣಿ ಮಾಡುತ್ತಿದ್ದು,ಈ ಕುಟುಂಬಕ್ಕೆ ನ್ಯಾಯ ಕೊಡಿಸಲು ನಮ್ಮ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣ ಬೆಂಬಲಿಸಲಿದೆ ಎಂದು ತಿಳಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ಥೆದಾರ ಸೋಮನಾಥ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮೃತ ವ್ಯಕ್ತಿ ಶರಣಪ್ಪ ಮಾದರವರ ತಾಯಿ ಮತ್ತು ಸಹೋದರರು ಹಾಗು ಇತರೆ ಸಂಬಂಧಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here