ಸುರಪುರ: ತಾಲೂಕಿನ ದೇವಾಪುರ ಗ್ರಾಮದ ಬಳಿಯ ಗಾಳಿ ಮರಗಮ್ಮ ದೇವಸ್ಥಾನದ ಬಳಿಯಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಪೊಲೀಸ್ ಪೇದೆ ದಯಾನಂದ ಜಮಾದಾರ್ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ವಾಗಣಗೇರಾ ಗ್ರಾಮದವನೆಂದು ಹೇಳಲಾಗುತ್ತಿರುವ ಗೋಪಾಲ ಕಟ್ಟಿಮನಿ ಎನ್ನುವ ೨೨ ವರ್ಷದ ಯುವಕ ದೇವಾಪುರ ಬಳಿಯ ಬೀದರ ಬೆಂಗಳೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಗಾಳಿ ಮರಗಮ್ಮ ದೇವಸ್ಥಾನದ ಬಳಿಯಲ್ಲಿ ವಿಷ ಸೇವಿಸಿ ಒದ್ದಾಡುತ್ತಿರುವುದನ್ನು ನೋಡಿ ತಕ್ಷಣಕ್ಕೆ ಯುವಕನ ಬಳಿಗೆ ಹೋಗಿ ನೋಡಿದಾಗ ವಿಷ ಸೇವಿಸಿರುವುದನ್ನು ಗುರುತಿಸಿ ನಂತರ ೧೧೨ ಗೆ ಕರೆ ಮಾಡಿದಾಗ ಆಂಬುಲೆನ್ಸ್ ಬರಲು ತಡವಾಗುತ್ತಿರುವ ಬಗ್ಗೆ ತಿಳಿದಾಗ ತಕ್ಷಣಕ್ಕೆ ಅದೆ ದಾರಿಯಲ್ಲಿ ಹೋಗುತ್ತಿದ್ದ ಶಿವಣ್ಣ ಹುಲಿಕೇರಿ ಮಂಜಲಾಪುರ ಗ್ರಾಮದ ವ್ಯಕ್ತಿಯ ಕಾರಿನಲ್ಲಿ ಹತ್ತಿಸಿ ತಾವು ಜೊತೆಗೆ ದೇವಾಪುರ ಗ್ರಾಮದ ವಕೀಲ ಮುದಕಪ್ಪ ಶಿಕಾರಿ ಎನ್ನುವವರು ಸೇರಿ ಸುರಪುರ ತಾಲೂಕು ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿ ನಂತರ ಯುವಕನ ಕುಟುಂಬಸ್ಥರಿಗೆ ಮಾಹಿತಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆದರೆ ಯುವಕ ಯಾಕೆ ವಿಷ ಸೇವಿಸಿದ್ದ ಎನ್ನುವುದು ಇನ್ನಷ್ಟೆ ತಿಳಿದು ಬರಬೇಕಿದೆ.ಆದರೆ ಸಕಾಲಕ್ಕೆ ಮಾನವೀಯತೆ ಮೆರೆದ ಪೊಲೀಸ್ ಪೇದೆ ದಯಾನಂದ ಜಮಾದಾರ್ ಮತ್ತು ಶಿವಣ್ಣ ಹುಲಿಕೇರಿ ಮಂಜಲಾಪುರ ಮತ್ತು ವಕೀಲ ಮುದಕಪ್ಪ ಶಿಕಾರಿ ಅವರ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.