ಸುರಪುರ: ಭಾರತದ ಸ್ವಾತಂತ್ಯ್ರ ಚಳುವಳಿಗೆ ಕ್ರಾಂತಿಯ ಸ್ವರೂಪಕೊಟ್ಟು ಸ್ವಾತಂತ್ಯ್ರ ಚಳುವಳಿಯಲ್ಲಿ ನಿರ್ಣಾಯಕ ಪಾತ್ರವಹಿಸಿದವರಲ್ಲಿ ಭಗತ್‌ಸಿಂಗ ಕೂಡ ಒಬ್ಬರು ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ರಂಗಂಪೇಟೆಯ ಖಾದಿ ಕೇಂದ್ರ ಆವರಣದಲ್ಲಿ ಇಂದು ಆಯೋಜನೆ ಮಾಡಲಾಗಿದ್ದ ಶಾಹಿದ ಭಗತ್‌ಸಿಂಗ ಜನ್ಮ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯದಿಂದಲೆ ದೇಶ ಪ್ರೇಮ ಬೆಳಸಿಕೊಂಡಿದ್ದ ಭಗತ್‌ಸಿಂಗ ನೌಜವಾನ್ ಭಾರತಸಭಾ, ಕಿರ್ತಿ ಕಿಸಾನ್ ಪಾರ್ಟಿ, ಗಣತಂತ್ರವಾದಿ ಸಂಘ ಇವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸ್ವಾತಂತ್ಯ್ರ ಚಳುವಳಿಯಲ್ಲಿ ದುಮಕಿದರು ಎಂದರು.
ಕೆಂಭಾವಿ ಸಂಸ್ಥಾನ ಹಿರೆಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಮಾತನಾಡಿ ಜಲಿಯನ್ ವಾಲಾಭಾಗ ದುರಂತದಿಂದ ಬ್ರೀಟಿಶರ ವಿರುದ್ಧ ಕ್ರಾಂತಿಕಾರಕ ಚಳುವಳಿಗೆ ಹೊಸ ರೂಪ ಕೊಟ್ಟ ಭಗತ್‌ಸಿಂಗ್ ಅನೇಕ ಯುವಕರನ್ನು ತಯಾರಿಸಿ ಬ್ರೀಟಿಶರ ವಿರುದ್ಧ ಹೊರಾಟ ಮಾಡಿದ ಕೊನೆಗೆ ರಾಜಗುರು ಸುಖದೇವ ಅವರೊಂದಿಗೆ ದೇಶಕ್ಕಾಗಿ ಗಲ್ಲುಗಂಬಕ್ಕೆ ಹುತಾತ್ಮರಾದರು, ಅವರ ಸ್ವಾತಂತ್ಯ್ರ ಪ್ರೇಮ, ದೇಶ ಅಭಿಮಾನ, ಕ್ರಾಂತಿಕಾರಕ ಮನೋಭಾವ ಇಂದಿನ ಯುವಜನರಿಗೆ ಪ್ರೇರಣೆಯಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಭಗತ್ ಸಿಂಗ್ ಅವರ ಭಾವಿಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ವಿರೇಶ ಹಳಿಮನಿ, ಪ್ರಮುಖರಾದ ಹಣಮಂತ್ರಾಯ ದೇವತ್ಕಲ್, ಸಲಿಂ ಅಡ್ಡಡಗಿ, ಕೃಷ್ಣ ದೇವತ್ಕಲ್, ಗುರುಬಸಯ್ಯ ಹೆಮ್ಮಡಗಿ ಸೇರಿದಂತೆ ಇತರರಿದ್ದರು.