ಸಮೂಹ ಅಭಿವೃದ್ಧಿಗೆ ಮಹಿಳೆಯರೇ ಕಾರಣ: ಸಿಇಓ ಡಾ. ದಿಲೀಷ್ ಶಶಿ

0
301

ಕಲಬುರಗಿ: ಒಂದು ಸಮೂಹ ಅಭಿವೃದ್ಧಿ ಆಗಬೇಕಾದರೆ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಅವರು ಅಭಿಪ್ರಾಯಪಟ್ಟರು.

ಗುರುವಾರ ಇಲ್ಲಿನ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಸಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಬಿ.ಸಿ (ಬ್ಯಾಂಕ್ ವ್ಯವಹಾರ ಮಿತ್ರ) ಸಖಿಯರಿಗೆ ಐ.ಐ.ಬಿ.ಫ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್, ಫೈನಾನ್ಸ) ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಸಸಿಗೆ ನೀರೇರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಎಲ್ಲಾ ರಂಗಯಲ್ಲಿಯೂ ಮಹಿಳೆಯರು ಮುಂದೆ ಬಂದು ಕೆಲಸ ಮಾಡಬೇಕು. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕಂಡು ಸಂತಸವಾಗುತ್ತಿದೆ. ನೀವು ಬೆಳವಣಿಗೆ ಕಾಣಲು ಒಂದು ಉತ್ತಮ ಅಡಿಪಾಯ ಲಭಿಸಿದೆ. ಅದನ್ನು ಬಳಸಿಕೊಂಡು ನೀವು ಹಾಗೂ ನಿಮ್ಮ ಸುತ್ತಮುತ್ತಲಿನ ಜನರನ್ನು ಸಹ ಮುಂದೆ ತೆಗೆದುಕೊಂಡಿ ಬನ್ನಿ ಎಂದು ಅವರು ಸಲಹೆ ನೀಡಿದರು.

ಇದೇ ವೇಳೆ ಸ್ವಸಹಾಯ ಸಂಘದ ಪರೀಕ್ಷೆಯಲ್ಲಿ ತೇರ್ಗಡೆಯಾದ 85 ಬಿ.ಸಿ ಸಖಿಯರಿಗೆ ಐ.ಐ.ಬಿ.ಫ್ ಪ್ರಮಾಣ ಪತ್ರ ಹಾಗೂ ಡಿಜೆಪೆ ಬಯೋಮೆಟ್ರಿಕ್ ಡಿವೈಸಗಳನ್ನು ಅವರು ವಿತರಿಸಿದರು. ಇದಕ್ಕೂ ಮುಂಚೆ ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ಮಾತನಾಡಿ ಬಿಸಿ ಸಖಿಯರಿಗೆ ಶುಭ ಕೋರಿ, ಸಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಸಹಾಯಕ ಮಹಾ ವ್ಯವಸ್ಥಾಪಕ ಇಂತೆಸಾರ ಹುಸೇನ್, ಜಿಲ್ಲಾ ಪಂಚಾಯತಿಯ ಡಿ.ಆರ್.ಡಿ.ಎ ಯೋಜನಾ ನಿರ್ದೇಶಕ ಜಗದೇವಪ್ಪ, ಆರ್.ಸೆ.ಟಿ (ಎಸ್.ಬಿ.ಐ) ಕಲಬುರಗಿಯ ನಿರ್ದೇಶಕ ಬಾಬುರಾವ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಬಿಸಿ ಸಖಿಯರು ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here