ವ್ಯಕ್ತಿ ಪರಿಪೂರ್ಣನಾಗಲು ಶಿಕ್ಷಕರೊಂದಿಗೆ ಸಂಪರ್ಕ ಮುಖ್ಯ: ಶಾಸಕ ರಾಜುಗೌಡ

0
21

ಸುರಪುರ: ಜಗತ್ತಿನಲ್ಲಿಯ ಯಾವುದೇ ವ್ಯಕ್ತಿಯೊಬ್ಬ ಪರಿಪೂರ್ಣನಾಗಲು ಶಿಕ್ಷಣ ಬೇಕು ಹಾಗು ಯಾವುದೇ ವ್ಯಕ್ತಿ ಪರಿಪೂರ್ಣನಾಗಲು ಶಿಕ್ಷಕರೊಂದಿಗಿನ ಸಂಪರ್ಕ ಮುಖ್ಯವಾಗಿದೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ಜಿಲ್ಲಾ ಪಂಚಾಯತ ಯಾದಗಿರಿ,ತಾಲೂಕು ಪಂಚಾಯತ ಸುರಪುರ,ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗು ಜ್ಯೋತಿ ಸಂಜೀವಿನಿ ಡಿಜಿಟಲ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಜಗತ್ತಿನಲ್ಲಿ ತಂದೆ ತಾಯಿಯರಂತೆ ನಮ್ಮೆಲ್ಲರನ್ನು ಪರಿಪೂರ್ಣ ಮನುಷ್ಯರನ್ನಾಗಿ ಮಾಡುವ ಏಕೈಕ ವ್ಯಕ್ತಿ ಎಂದರೆ ಶಿಕ್ಷಕರಾಗಿದ್ದಾರೆ.ಅಂತಹ ಶಿಕ್ಷಕರನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ದೇವಾಪು ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ರಾಷ್ಟ್ರ ನಿರ್ಮಾಣದ ಕಾರ್ಯ ಶಿಕ್ಷಕರ ಮೇಲಿದೆ.ಇಲ್ಲಿರುವ ಪ್ರತಿಯೊಬ್ಬರು ಶಿಕ್ಷಕರಿಂದಲೇ ಉತ್ತಮ ಸ್ಥಾನಗಳಿಗೆ ಬರಲು ಸಾಧ್ಯವಾಗಲಿದೆ.ನಾನು ಒಬ್ಬ ಸ್ವಾಮೀಜಿಯಾಗಲು,ರಾಜುಗೌಡ ಅವರು ಶಾಸಕರಾಗಲು ಶಿಕ್ಷಕರೆ ಕಾರಣರಾಗಿದ್ದಾರೆ.ಪ್ರತಿಯೊಬ್ಬ ವ್ಯಕ್ತಿಗೆ ಅಕ್ಷರದೊಂದಿಗಿನ ಸಂಬಂಧ ಅವಶ್ಯವಾಗಿದೆ.ಅದರಂತೆ ಶಿಕ್ಷಕರಾದ ತಮ್ಮಿಂದ ದೇಶದ ಭವಿಷ್ಯವಿದೆ ಹಾಗು ಪ್ರತಿ ಮಗುವಿನ ಭವಿಷ್ಯವಿದೆ ಅಂತಹ ಜವಬ್ದಾರಿಯ ಶಿಕ್ಷಕರು ತಾವಾಗಿದ್ದು ತಾವೆಲ್ಲರು ತಮ್ಮ ಜವಬ್ದಾರಿಯನ್ನು ಸರಿಯಾಗಿ ನಿಭಾಯಿಸುವಂತೆ ಆಶಿಸಿದರು.

ನಂತರ ಎಲ್ಲಾ ಶಿಕ್ಷಕರಿಗೆ ಸುರೇಶ ಸಜ್ಜನ್ ಅವರ ನೆರವಿನೊಂದಿಗೆ ಕೊಡಮಾಡಲಾಗುತ್ತಿರುವ ಜ್ಯೋತಿ ಸಂಜೀವಿನಿ ಡಿಜಿಟಲ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಯಿತು ಅಲ್ಲದೆ ನಿವೃತ್ತಿ ಹೊಂದಿದ ಎಲ್ಲಾ ಶಿಕ್ಷಕರಿಗೆ ಹಾಗು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು ಮತ್ತು ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ೬೨೫ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿ ಆಕಾಶ ಸಂಜಯ್ ಕರೆಕಲ್ ಮತ್ತು ಅವರ ಪೋಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್,ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಶಾಂತಗೌಡ ಪಾಟೀಲ್,ಡಿವೈಎಸ್ಪಿ ವೆಂಕಟೇಶ ಉಗಿಬಂಡಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ,ಮುಖಂಡರಾದ ಹೆಚ್.ಸಿ.ಪಾಟೀಲ್, ದೊಡ್ಡ ದೇಸಾಯಿ ದೇವರಗೋನಾಲ,ಭೀಮಣ್ಣ ಬೇವಿನಾಳ,ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಸೇರಿದಂತೆ ಎಲ್ಲಾ ಶಿಕ್ಷಣ ಸಂಘಟನೆಗಳ ಪದಾಧಿಕಾರಿಗಳು ವೇದಿಕೆ ಮೇಲಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ ಅಧ್ಯಕ್ಷತೆವಹಿಸಿ ಮಾತನಾಡಿದರು.ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು,ಶರಣು ದೇವರಗೋನಾಲ ವಂದಿಸಿದರು. ಎಲ್ಲಾ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಹಾಗು ತಾಲೂಕಿನ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here