ಬಿ ಆರ್ ಪಾಟೀಲ ಹೇಳಿಕೆಗೆ ಹರ್ಷಾನಂದ ಗುತ್ತೇದಾರ ತಿರುಗೇಟು

0
707

ಆಳಂದ: ಸಂಘದ ಉದ್ದೇಶ ಅರಿಯದವರಿಂದ ಟೀಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘದ ಉದ್ದೇಶ ಅರಿಯದವರು ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರನ್ನು ಟೀಕಿಸುತ್ತಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ತಿರುಗೇಟು ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘ ಈ ಭಾಗದ ಸರ್ವತೋಮುಖ ಅಭಿವೃದ್ದಿಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ ಇದು ಸರ್ಕಾರದ ಅನುದಾನದಲ್ಲಿ ಈ ಪ್ರದೇಶದ ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಅವುಗಳಲ್ಲಿ ಗಣನೀಯ ಸಾಧನೆ ಮಾಡಲು ಕಾರ್ಯನಿರ್ವಹಿಸುತ್ತಿದೆ ಇದನ್ನು ಸಹಿಸದ ಕಲ್ಯಾಣ ಅಭಿವೃದ್ಧಿಯ ವಿರೋಧಿಗಳು ಕುಹಕದ ಮಾತುಗಳನ್ನು ಆಡಲು ಆರಂಭಿಸಿವೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಪ್ರದೇಶದವರು ಕೊಡುವವರಾಗಬೇಕೆ ಹೊರತು ಕೈ ಚಾಚುವರಾಗಬಾರದು ಈ ನಿಟ್ಟಿನಲ್ಲಿ ಹಲವಾರು ದಶಕಗಳ ಹಿಂದೆಯೇ ಸ್ವಾವಲಂಬನೆಯ ಕಲಿಸುತ್ತಾ ಈ ಭಾಗದಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದ ಶ್ರೇಯ ಬಸವರಾಜ ಪಾಟೀಲ ಸೇಡಂ ಅವರಿಗೆ ಸಲ್ಲುತ್ತದೆ. ಈ ಪ್ರದೇಶದಲ್ಲಿ ಶಿಕ್ಷಣ, ಜ್ಞಾನ, ತಂತ್ರಜ್ಞಾನ, ವಿಜ್ಞಾನ, ಸಂಸ್ಕøತಿ, ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆದು ಸ್ವಾವಲಂಬಿಗಳಾದರೇ ನಮ್ಮ ಪ್ರದೇಶ ಅಭಿವೃದ್ಧಿ ಹೊಂದಲಿದೆ ಎಂದು ತಿಳಿದು ಕಾರ್ಯನ್ಮೂಖರಾಗಿದ್ದಾರೆ ಅಂತಹ ವ್ಯಕ್ತಿಗಳ ಕಾರ್ಯದಲ್ಲಿಯೂ ಹುಳುಕು ಹುಡುಕುವುದು ಅವರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಛೇಡಿಸಿದ್ದಾರೆ.

ಕಡಿಮೆ ಬೆಲೆಯಲ್ಲಿ ವ್ಯವಸಾಯ ಮಾಡುವುದು, ಸಾವಯವ ಕೃಷಿ, ಗುಡಿ ಕೈಗಾರಿಕೆ, ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಕಲಿಸುವುದು ಸಂಘದ ಉದ್ದೇಶವಾಗಿದೆ. ಮಹತ್ತರ ಉದ್ದೇಶದ ಕೆಲಸದಲ್ಲಿಯೂ ಆರ್‍ಎಸ್‍ಎಸ್, ಸಿದ್ಧಾಂತ ಹುಡುಕುವುದು ಅವರ ಭೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಅಲ್ಲದೇ ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಸಂಘದ ಉದ್ದೇಶವೇ ಜ್ಞಾನ ಪ್ರಸಾರ, ತರಬೇತಿ ನೀಡುವುದರ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧಿಸುವುದಾಗಿದೆ ಅದರ ಮೂಲ ಉದ್ದೇಶವನ್ನು ಅರಿಯದ ಸಣ್ಣ ಮನಸ್ಸಿನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಹೀಗಾಗಿ ಅವರ ಮಾತಿಗೆ ಬೆಲೆ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here