ಜಿಇ ಕಾಲೋನಿಯ ಸಮಸ್ಯೆಗಳನ್ನು ಪರಿಶೀಲಿಸಿದ ಅಧಿಕಾರಿಗಳು

0
127

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರ ನಿರ್ದೇಶನ ಮೇರೆಗೆ ನಗರದ ಜಿಇ ಕಾಲೋನಿಗೆ ಶುಕ್ರವಾರ ಲೋಕೋಪಯೋಗಿ ಇಲಾಖೆಯ ಎಇ ಜಗನ್ನಾಥ, ಅಧಿಸೂಚಿತ ಕ್ಷೇತ್ರ ಸಮಿತಿಯ ಎಇ ಶಾಂತರೆಡ್ಡಿ ದಂಡಗುಲಕರ್ ಬೇಟಿ ನೀಡಿ ಕುಡಿಯುವ ನೀರು ಹಾಗೂ ಚರಂಡಿ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳ ಕುರಿತು ನಿವೃತ್ತ ನೌಕರರ ಸಂಘದವರ ಜತೆ ಚರ್ಚಿಸಿ,ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.

ಕಳೆದ ಮೂರು ದಿನಗಳ ಹಿಂದಷ್ಟೆ ನಿವೃತ್ತ ನೌಕರರ ಸಂಘದವರು ಜಿಇ ಕಾಲೋನಿಯಲ್ಲಿರುವ ಜನರು ಅಶುದ್ಧ ನೀರು ಕುಡಿಯುವಂತಾಗಿದೆ. ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕಾರ್ಖಾನೆಯಿಂದ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದು.ಆದ್ದರಿಂದ ಕುಡಿಯುವ ಶುದ್ಧ ನೀರು ಒದಗಿಸಿಲು ಶುದ್ಧಿಕರಣ ಘಟಕ, ಆಸ್ತಿ ತೆರಿಗೆ ಕಡಿಮೆ ಮಾಡಬೇಕು. ಚರಂಡಿ, ಬೀದಿ ದೀಪಗಳು ಹಾಗೂ ಕೊಳವೆ ಬಾವಿಗಳನ್ನು ತೋಡಿಸುವಂತೆ ನೀಡಿದ ಮನವಿ ನೀಡಿದ್ದರು.

Contact Your\'s Advertisement; 9902492681

ಮನವಿಗೆ ಸ್ಪಂದಿಸಿದ ಶಾಸಕ ಬಸವರಾಜ ಮತ್ತಿಮಡು ಅವರು ಜಿಇ ಕಾಲೋನಿಯ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿ.ಅದಕ್ಕೆ ಏನು ಕ್ರಮಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸಿಕೊಂಡು ಬರುವಂತೆ ಎಇ ಜಗನ್ನಾಥ ಅವರಿಗೆ ನಿರ್ದೇಶಿಸಿದ ಮೇರೆಗೆ ನಗರದ ಜಿಇ ಕಾಲೋನಿಯಲ್ಲಿರುವ ಅಪೂರ್ಣಗೊಂಡ ಕಾಮಗಾರಿಯನ್ನು ವೀಕ್ಷಿಸಿದರು.

ಅಲ್ಲದೇ ಶುದ್ಧಿಕರಣ ಘಟಕ ನಿರ್ಮಾಣ ಮಾಡಬಹುದು.ಅದಕ್ಕೆ ಸ್ಥಳವನ್ನು ಕಾರ್ಖಾನೆಯವರು ನೀಡಬೇಕು.ಅದಕ್ಕಾಗಿ ಕಾರ್ಖಾನೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಎಂದು ನಿವೃತ್ತ ನೌಕರ ಸಂಘದವರಿಗೆ ಎಇ ಜಗನ್ನಾಥ ತಿಳಿಸಿದರು.

ಜಿಇ ಕಾರ್ಖಾನೆಯವರ ಅಧಿಕಾರಿ ರಾಮಕೃಷ್ಣ ಅವರನ್ನು ಮಾತನಾಡಿದ ಸಂದರ್ಭದಲ್ಲಿ ಇದೊಂದು ಖಾಸಗಿ ಆಸ್ತಿ.ಇಲ್ಲಿ ಏನೇ ಕಾಮಗಾರಿ ಮಾಡಬೇಕಾದರೂ ಕಾರ್ಖಾನೆಯವರಿಗೆ ಮೊದಲು ಮನವಿ ಪತ್ರ ಸಲ್ಲಿಸಬೇಕು.ಅದಕ್ಕಾಗಿ ಮೊದಲು ನಿಮ್ಮ ಪ್ರಸ್ತಾಪ ನೀಡಿ. ಕಾರ್ಖಾನೆಯ ಮೇಲಾಧಿಕಾರಿಗಳ ಜತೆ ಮಾತನಾಡಿ ನಿರ್ಧಾರ ಕೈಗೊಳ್ಳಬಹುದು ಎಂದು ರಾಮಕೃಷ್ಣ ಹೇಳಿದರು.

ನಂತರ ಪರಿಶೀಲಿಸಿದ ಮಾಹಿತಿಯನ್ನು ಶಾಸಕರಿಗೆ ತಿಳಿಸಲಾಗುವುದು.ಅಲ್ಲದೇ ಶಾಸಕರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವರು ಎಂದು ಎಇ ಜಗನ್ನಾಥ ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ದೇವೆಂದ್ರ ಗಾಯಕವಾಡ, ನಾಗರಾಜ ಸಿಂಘೆ, ಶಾಂತಪ್ಪ ಬಸಪಟ್ಟಣ, ನಿಂಗಣ್ಣ ಹುಳಗೋಳಕರ್,ಸದಾನಂದ ಕುಂಬಾರ, ವೆಂಕಟೇಶ, ಅನೀಲ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here