ಕಲಬುರಗಿಗೆ ಮಂಜೂರಾದ ರಾಜ್ಯ-ಕೇಂದ್ರ ಸರಕಾರಗಳ ಯೋಜನೆಗಳನ್ನು ಕೈಬಿಡುತ್ತಿರುದು ಖಂಡಿಸಿ ಖರ್ಗೆಯವರಿಗೆ ಪತ್ರ

0
22

ಕಲಬುರಗಿ : ತಮ್ಮ ಅವಧಿಯಲ್ಲಿ ಕಲಬುರಗಿ ಜಿಲ್ಲೆಗೆ ಮಂಜೂರಾಗಿರುವ, ಹಲವು ಯೋಜನೆಗಳನ್ನು ಕೇಂದ್ರ ಹಾಗು ರಾಜ್ಯ ಸರಕಾರಗಳು ಬೇರೆ ಜಿಲ್ಲೆಗಳಿಗೆ ಸ್ಥಳಾಂತರ ಮಾಡುತ್ತಿದ್ದು ಹಾಗೂ ಕೆಲವನ್ನು ರದ್ದು ಮಾಡುತ್ತಿದ್ದಾರೆ. ೨೦೧೪ ರಲ್ಲಿ ಘೋಷಣೆಯಾಗಿದ್ದ, ರೇಲ್ವೆ ವಿಭಾಗ ಕುಂಟು ನೆಪಹೇಳಿ ಕೇಂದ್ರದ ಬಿ.ಜೆ.ಪಿ ಸರಕಾರ ರದ್ದು ಮಾಡಿದೆ, ಅದೇ ರೀತಿ ಇ.ಎಸ್.ಐ ಆಸ್ಪತ್ರೆಯನ್ನ, ಎಮ್ಸ ಆಗಿ ಮಾಡುತ್ತೇನೆಂದು ವಾಗ್ದಾನ ನೀಡಿದ ಸರಕಾರಗಳು ಈಗ ಏಕಾಏಕಿ, ಹುಬ್ಬಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಟೇಕ್ಟಟೈಲ್ ಪಾರ್ಕ, ತೋಗರಿ ಪಾರ್ಕ, ಸೇಂಟರ್ ಆಫ್ ಎಕ್ಸಲೆನ್ಸ್ ನಂತಹ ಮಹತ್ವದ ಯೋಜನೆಗಳು ಕೈಬಿಟ್ಟು ಹೋಗುತ್ತಿವೆ, ಇದರಿಂದ ಈ ಭಾಗದ ಪ್ರಗತಿಗೆ ಭಾರಿ ಪೆಟ್ಟು ಬಿದ್ದಿದೆ. ಇವನೆಲ್ಲ ಇಲ್ಲಿಗೆ ಮಂಜೂರು ಮಾಡುವಂತೆ ತಾವೆ ಮುಂಚುಣಿಯಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಶಿಫಾರಸ್ಸು ಮಾಡಿ ಸದರಿ ಕೈಬಿಟ್ಟು ಹೋಗುತ್ತಿರುವ ಯೋಜನೆಗಳನ್ನು ನಮ್ಮ ಜಿಲ್ಲೆಗೆ ಮರಳಿ ತರಲು ತಮ್ಮಿಂದ ಮಾತ್ರ ಸಾಧ್ಯ ಎಂದು ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ ನೀಡಲಾಯಿತು.

ತಕ್ಷಣ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಿ ಯಾವುದೇ ಕಾರಣಕ್ಕೂ ಏಮ್ಸ, ರೆಲ್ವೆ ವಿಭಾಗ, ಸೆಂಟರ್ ಆಫ್ ಎಕ್ಸಿಲೆನ್ಸ್. ಬೀದರ- ಬಳ್ಳಾರಿ ಕಲ್ಯಾಣ ಪಥ ಹೆದ್ದಾರಿ ಹಾಗೂ ಕಲಬುರಗಿ ನಗರದ ಎರಡನೇ ವರ್ತುಲ ರಸ್ತೆ ಸದರಿ ಯೋಜನೆಗಳನ್ನು ಕಲಬುರಗಿಗೆ ಮಂಜೂರು ಮಾಡಲು ತಾವು ಮುತುವರ್ಜಿ ವಹಿಸಬೇಕೆಂದು, ನಮ್ಮಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಸಮಸ್ತ ಕಲಬುರಗಿ ಜಿಲ್ಲೆಯ ಜನತೆಯ ಪರವಾಗಿ ವಿನಂತಿಸಿಕೊಳ್ಳುತ್ತೇವೆ.

Contact Your\'s Advertisement; 9902492681

ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ. ಎಸ್. ನಡಗೇರಿ, ಜಿಲ್ಲಾಧ್ಯಕ್ಷರಾದ ಬಾಬು ಮದನಕರ್, ಜಿಲ್ಲಾ ಉಪಾಧ್ಯಕ್ಷರಾದ ಅನೀಲ ಕಪನೂರ, ಸಂಘಟಕರಾದ ಗೌತಮ್ ಕರಿಕಲ್, ಸಾಗರ ಪಾಟೀಲ್, ಉದಯಕುಮಾರ ಡಿ.ಕೆ, ಮಹೇಶ ಪಾಟೀಲ್, ಸೂರ್ಯಪ್ರಕಾಶ ಚಾಳಿ, ಸಿದ್ದಲಿಂಗ ಉಪ್ಪಾರ, ನಾಗರಾಜ ಡೊಂಗರಗಾಂವ, ದೇವುದೋರೆ, ಕುಶಾಲ ಕಪನೂರ ಇನ್ನಿತರರು ಇದ್ದರು ಎಂದು ನಮ್ಮಕಲ್ಯಾಣ ನಾಡು ವಿಕಾಸ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಣ್ಣ ನಡಗೇರಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here