ಆಳಂದನಲ್ಲೂ ಸಮತಾ ಸೇನೆ ಕಾರ್ಯಾಲಯ ಉದ್ಘಾಟನೆ

0
17

ಆಳಂದ: ಪಟ್ಟಣದಲ್ಲಿ ಬೋಧಿ ಸತ್ವ ಸಮಾಜ ಪರಿವರ್ತನಾ ಸಮಿತಿ ಕರ್ನಾಟಕ ತಾಲೂಕು ಶಾಖೆಯ ಸಮತಾ ಸೇನೆ ಕಾರ್ಯಾಲಯವನ್ನು ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ಅವರು ಉದ್ಘಾಟಿಸಸಿದರು.

ಬಳಿಕ ಮಾತನಾಡಿದ ಅವರು, ಬುದ್ಧ ಬಸವ ಮತ್ತು ಡಾ| ಬಾಬಾಸಾಬೇಹ ಅಂಬೇಡ್ಕರ್ ಅವರ ತತ್ವಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಈ ಕಾರ್ಯವನ್ನು ನಿರಂತರವಾಗಿ ಮುನ್ನೆಡೆಸಿಕೊಂಡು ಹೋಗಲು ಸಮತಾ ಸೇನೆಯಂತ ಸಮಿತಿಯ ಕಾರ್ಯಗತ ಮಾಡಲು ಮುಂದಾಗಿದ್ದು ಇದಕ್ಕೆ ಸರ್ವರು ಕೈಜೋಡಿಸಬೇಕು ಎಂದು ಅವರು ಹೇಳಿದರು.

Contact Your\'s Advertisement; 9902492681

ಸಾನ್ನಿಧ್ಯ ವಹಿಸಿದ್ದ ದ್ಯಾನಭೂಮಿ ಬುದ್ಧ ವಿವಾಹರ ಬೆಳಮಗಿಯ ಸಂಸ್ಥಾಪಕ ಬಂತೇ ಅಮರಜ್ಯೋತಿ ಅವರು ಮಾತನಾಡಿ, ಬುದ್ಧ, ಶರಣರ, ಸಂತರ ನಾಡು, ಜಗತ್ತಿಗೆ ಶಾಂತಿ ಸಂದೇಶ ಬೋಧಿಸಿದ ಬುದ್ಧರ ನಾಡು ಇಂದು ಅವರ ವಿಚಾರಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ದೇಶ ಭ್ರಷ್ಟಾಚಾರದಲ್ಲಿ ತೊಡಗಿದೆ. ಪ್ರತಿಯೊಂದ ಗ್ರಾಮದಲ್ಲಿ ಸನ್ಮಾರ್ಗದಿಂದ ಸಾಗದೆ ದುಶ್ಚಟಗಳ ಮಾರುಹೋಗಿ ಅತ್ಯಾಚಾರ ಅನ್ಯಾಯದಿಂದ ಪರಿಸ್ಥಿತಿ ಸಾಗಿದೆ. ಇದನ್ನು ಹೋಗಲಾಡಿಸಲು ಪ್ರತಿ ಗ್ರಾಮದಲ್ಲೂ ಬೌದ್ಧಾಚಾರಿಗಳು ಪ್ರತಿ ಮನೆಯಲ್ಲೂ ಡಾ| ಅಂಬೇಡ್ಕರ್ ಅನುಯಾಯಿಗಳು ಸಿದ್ಧಗೊಂಡಾಗ ಮಾತ್ರ ಸಾಮಾಜ ಶಾಂತಿ ಮತ್ತು ಪ್ರೀತಿಯಿಂದಾಗರಲು ಸಾಧ್ಯವಿದೆ ಎಂದು ಅವರು ಉಪದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಮುಖಂಡ ದಯಾನಂದ ಶೇರಿಕಾರ, ತುಕಾರಾಮ ಕೊಡಲಂಗರಗಾ, ಚಂದ್ರಕಾಂತ ದಣ್ಣೂರ, ರಾಜಶೇಖರ ನಿಂಬರಗಾ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಮಹೇಶ ಕಾಂಬಳೆ, ನಾಗೇಂದ್ರ ಬಾವಿಮನಿ, ಡಾ| ಅವಿನಾಶ ದೇವನೂರ, ಅಮೃತಬಾವಿಮನಿ, ಸೂರ್ಯಕಾಂತ ಜಿಡಗಾ, ಸೇನೆಯ ತಾಲೂಕು ಅಧ್ಯಕ್ಷ ವಿಠ್ಠಲ ಕೋಣೆಕರ್, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಾವಿಮನಿ ಮತ್ತಿತರು ಉಪಸ್ಥಿತರಿದ್ದರು. ಸೋಮಶೇಖರ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here