ಆಳಂದ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಸತತವಾಗಿ ಧಾರಾಕಾರ ಹಾಗೂ ಜಿಟಿ, ಜಿಟಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಸೇರಿದಂತೆ ವ್ಯಾಪಾರ ವೈಹಿವಾಟು ಒಳಗೊಂಡು ಜನ ಜೀವನ ಅಸ್ತವ್ಯವಸ್ಥವಾಗಿ ಹೈರಾಣಗೊಳಿಸಿದೆ.
ಸದ್ಯ ಅತಿಯಾದ ಮಳೆಗೆ ತೊಗರಿ, ಸೂರ್ಯಕಾಂತಿ ಬೆಳೆ ನೆಲಕ್ಕಚ್ಚಿ ಹಾನಿಯಾಗಿದ್ದು, ರಾಶಿಗೆ ಬಂದ ಸೋಯಾಭಿನ್ ಬೆಳೆ ಮಳೆಯಿಂದ ರಾಶಿಯಾಗದೆ ಹಾಳಾಗಿ ಹೋಗುತ್ತಿದ್ದು, ಇದರಿಂದ ರೈತ ಸಮೂಯದಲ್ಲಿ ಚಿಂತೆಗೀಡು ಮಾಡಿದೆ. ಮತ್ತೊಂದಡೆ ಕೃಷಿ, ಕಂದಾಯ ತೋಟಗಾರಿಕೆಯಿಂದ ಹಾನಿಯ ಸರ್ವೆ ಮುಂದುವರೆದಿದೆ.
ಹೊಲಗಳಲ್ಲಿ ಮಳೆ ನೀರು ಹರಿದು ನಡೆದಾಡಲು ಬಾರದಂತಾಗಿದೆ. ಮತ್ತೊಂದಡೆ ತೋಟಗಾರಿಕೆ ಕೈಗೆ ಬಂದ ತರಕಾರಿ ಬೆಳೆ ನೀರಿನಿಂದ ಕೊಳೆತು ನಷ್ಟವಾಗಿದೆ. ಕೈಗೆ ಬಂದ ಬೆಳೆ ರಕ್ಷಿಸಿಕೊಳ್ಳಲು ರೈತ ಸಮುದಾಯ ಮಳೆ ಇಂದಲ್ಲಾ ನಾಳೆ ಬಿಡುವ ನೀಡಬಹುದು ಎಂಬ ನಿರೀಕ್ಷೆ ಹುಸಿಗೊಳಿ ಅವರ ಗಾಯದ ಮೇಲೆ ಬರೆ ಎಳೆಯುತ್ತಿದೆ.
ಪಟ್ಟಣದಲ್ಲಿ ಮಳೆಯಿಂದ ವ್ಯಾಪಾರ ವೈಹಿವಾಟು ಹೊಡೆತಬಿದ್ದಿದೆ. ಬಸ್ ನಿಲ್ದಾಣ ಸೇರಿ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯದೆ ನಿಂತುಕೊಂಡು ಸಂಚಾರಕ್ಕೆ ಮರಗುವಂತಾಗಿದೆ. ಬಸ್ ನಿಲ್ದಾಣದಲ್ಲಿ ಮಳೆ ನೀರು ಹರಿದು ಹೋಗಲು ವೈಜ್ಞಾನಿಕ ವ್ಯವಸ್ಥೆ ಇಲ್ಲದೆ ಸದಾ ನೀರು ನಿಂತುಕೊಂಡ ಹೂಂಡಾವಾಗಿ ಮಾರ್ಪಟ್ಟು ಪ್ರಯಾಣಿಕರಿಗೆ ಹಾಗೂ ಬಸ್ ನಿಲ್ಲುಗಡೆಗೆ ತೊಂದರೆಗೆ ಪರಿಹಾರವಾಗುತ್ತಿಲ್ಲ. ಬಸ್ ನಿಲ್ದಾಣದಲ್ಲಿ ಮಳೆ ನಿಂತರು ದಿನವೀಡಿ ಸೋರುತ್ತಿದ್ದು ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲಾಗುತ್ತಿಲ್ಲ. ನೀರಿನ ಹರಿದಾಟದಿಂದ ಓಡಾಡಲು ಬಾರದೆ ಬೀಳತೊಡಗಿ ಜೀವ ಭಯದಲ್ಲಿ ವಯೋವೃದ್ಧರು ಮಕ್ಕಳಿಗೆ ಸಂಕಟವಾಗಿದೆ.
ಸೆ. ೨೮ರಂದು ಆಳಂದ ವಲಯ ೬೦ ಮಿ.ಮೀ, ನಿಂಬರಗಾ ೩೬ ಮಿ.ಮೀ, ಕೋರಳ್ಳಿ ೬೦ ಮಿ.ಮೀ, ಮಾದನಹಿಪ್ಪರಗಾ ೫೨ ಮಿ.ಮೀ, ಸರಸಂಬಾ ೬೩ ಮಿ.ಮೀ, ನರೋಣಾ ೫೦ ಮಿ.ಮೀ ಹಾಗೂ ಖಜೂರಿ ವಲಯಕ್ಕೆ ೮೮ ಮಿ.ಮೀ, ಮಳೆಯಾಗಿದೆ. ಸೆ. ೨೯ರಂದು ಆಳಂದ ವಲಯಕ್ಕೆ ೧೯.೨ ಮಿ.ಮೀ, ಸೆ. ೩೦ರಂದು ತಾಲೂಕಿನಲ್ಲಿ ಸಾಧಾರಣ ಮಳೆ ಸುರಿದಿದೆ. ಅ.೨ರಂದು ಆಳಂದ ವಲಯ ೧೦. ಮಿ.ಮೀ, ಕೋರಳ್ಳಿ ೩ ಮಿ.ಮೀ, ಮಾದನಹಿಪ್ಪರಗಾ ೫.೪ ಮಿ.ಮೀ, ನರೋಣಾ ೩೦ ಮಿ.ಮೀ, ಖಜೂರಿ ೮.೩ ಮಿ.ಮೀ ಮಳೆ ಸುರಿದಿದೆ. ಸೆ. ತಿಂಗಳ ಕಾಲ ಆಗಾಗ ಸುರಿದ ಮಳೆಯಿಂದ ಭೂಮಿಗೆ ಮಳೆ ನೀರು ಚಿಮ್ಮಿದ್ದು, ಇದರಿಂದ ಸಾಧಾರಣ ಮಳೆಯಾದರು ಸಹಿತ ಮತ್ತೆ ಕೃಷಿ ಚಟುವಟಿಕೆ ಕೈಗೊಳ್ಳಂದ ಪರಿಸ್ಥಿತಿ ನಿರ್ಮಾಣವಾಗಿ ರೈತರನ್ನು ಸಂಕಷ್ಟಕ್ಕೆ ದೊಡುತ್ತಿದೆ. ಅ. ೪ರಂದು ಆಳಂದ ಸೇರಿ ಹಲವಡೆ ಮಳೆ ಸುರಿದ ಹಿನ್ನೆಲೆಯಲ್ಲಿ ತೊಂದರೆ ಉಂಟಾಗಿದೆ.
ಸಂಚಾರಕ್ಕೆ ತೊಂದರೆ: ಸತತ ಮಳೆಯಿಂದಾಗಿ ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆಗಳು ತೆಗ್ಗು ದಿನ್ಯೆಗಳು ಬಿದ್ದು ವಾಹನ ಸಂಚಾರಕ್ಕೆ ಸಂಚಕಾರವಾಗಿದೆ. ಸಕ್ಕರೆ ಕಾರ್ಖಾನೆಯಿಂದ ಧಂಗಾಪೂರ, ಸಾಲೇಗಾಂವ, ಹೊನ್ನಳ್ಳಿ ಕಿಣ್ಣಿಸುಲ್ತಾನ, ಜಿಡಗಾ ನಿಂದ ಮಾದನಹಿಪ್ಪರಗಾ ಮಾರ್ಗದ ರಸ್ತೆಗಳ ಹದಗೆಟ್ಟು ಹೋಗಿವೆ. ಹೊಲ ಗದ್ದೆಗಳ ಸಂಪರ್ಕ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಆಗಿದೆ.
ಪಟ್ಟಣದ ತಹಸೀಲ್ದಾರ ಕಚೇರಿ, ಪುರಸಭೆ ಹಾಗೂ ನ್ಯಾಯಾಲಯ ಒಂದೇ ಕಾಡೆಕಾರ್ಯನಿರ್ವಹಿಸುತ್ತಿದ್ದರು ಸಹ ನ್ಯಾಯಾಲು ಮುಂಭಾಗದಲ್ಲಿ ಕೃಷಿ ಹೂಂಡವಾಗಿ ಮಳೆನೀರು ನಿಂತು ನ್ಯಾಯಾಲಯಕ್ಕೆ ಹೋಗಿ ಬರಲು ಕೊಳಚೆ ನೀರಿನಲ್ಲೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಸಂಬಂಧಿತ ಅಧಿಕಾರಿಗಳು ಇತ ಗಮನ ಹರಿಸಿ ನ್ಯಾಯಾಲಯ ಮುಂಭಾಗದಲ್ಲಿ ತಿಂಗಳಗಟ್ಟಲೆ ನಿಂತ ನೀರನ್ನು ತೆರವುಗೊಳಿಸುವುದು ಅಗತ್ಯವಾಗಿದೆ.
ಪಟ್ಟಣದ ತಡಕಲ್ ಮಾರ್ಗದ ಧಬೆ ಧಬೆ ಸೇತುವೆಯಲ್ಲಿ ಸ್ವಲ್ಪವೇ ಮಳೆ ಬಂದರು ಪದೇ ಪದೇ ರಸ್ತೆ ಸಂಚಾರ ಕಡಿತವಾಗಿ ಪ್ರಯಾಣಿಕರಿಗೆ ರಾತ್ರಿ ಹಗಲು ಎನ್ನದೆ ಸಂಚಾರ ಕಡಿತಗೊಳ್ಳುತ್ತಿದೆ. ಈ ಕುರಿತು ಸಂಬಂಧಿತ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.