ಭಾಲ್ಕಿ: ಕರಡ್ಯಾಳದ ಶ್ರೀ ಚನ್ನಬಸವೇಶ್ವರಗುರುಕುಲದಅನುಭವ ಮಂಟಪ ಸಭಾಭವನದಲ್ಲಿಆಯೋಜಿಸಲಾದಗುರುಕುಲ ಸೌರಭ ಹಾಗೂ “ಮಹರ್ಷಿ” ಗ್ರಂಥ ಲೋಕಾರ್ಪಣೆ ಸಮಾರಂಭದ ದಿವ್ಯ ಸನ್ನಿಧಾನ ವಹಿಸಿರುವ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮಹರ್ಷಿಗ್ರಂಥದ ಲೇಖಕರಾದ ಸಿದ್ಧರಾಮೇಶ್ವರ ವಾಲೆ ಅವರಚಿಕ್ಕ ವಯಸ್ಸಿನಲ್ಲಿಯ ಪ್ರತಿಭೆಯನ್ನು ಪ್ರಶಂಸಿದರು.
ಸಿದ್ಧರಾಮೇಶ ವಾಲೆ ಚನ್ನಬಸವೇಶ್ವರಗುರುಕುಲ ವಿಜ್ಞಾನ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಯಾಗಿ ಪಿ.ಯು.ಸಿ ದ್ವಿತೀಯ ವರ್ಷದಲ್ಲಿಓದುತ್ತಿದ್ದಾನೆ. ಅವನು ತಮ್ಮ ಶಿಕ್ಷಣ ಇಂಗ್ಲೀಷ ಮಾಧ್ಯಮದಲ್ಲಿ ನಡೆಸಿದರು ಕನ್ನಡದಲ್ಲಿ ಇಳಿ ವಯಸ್ಸಿನಲ್ಲಿಯೇ ಪುಸ್ತಕ ಬರೆದಿರುವುದು ನಿಜಕ್ಕುಅಭಿನಂದನಿಯ. ಅವರತಂದೆಯಾದ ಸಂಗಮೇಶ ವಾಲೆ ಹಾಗೂ ತಾಯಿಯವರಾದ ಮನಿಷ ವಾಲೆಯವರು ಮಗನ ಪ್ರತಿಭೆಯನ್ನು ಪ್ರೋತ್ಸಾಹಿಸಿ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ಎಂದು ಪೂಜ್ಯ ಶ್ರೀಗಳು ನುಡಿದರು. ಸಮಾರಂಭದ ದಿವ್ಯ ನೇತೃತ್ವವನ್ನು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ವಹಿಸಿದ್ದರು.
ಸಮಾರಂಭದಉದ್ಘಾಟನೆಯನ್ನು ನೆರವೆರಿಸಿದ ಶರಣ ಶ್ರೀ ಬಾಬು ವಾಲಿಯವರು ಸಿದ್ಧರಾಮೇಶ್ವರರ ಪ್ರತಿಭೆಗೆ ಮೆಚ್ಚುಗೆಯನ್ನು ವ್ಯೆಕ್ತ ಪಡಿಸಿ ಅವನ ಮುಂದಿನ ಜೀವನ ಭವ್ಯವಾಗಲಿ ಎಂದು ಹಾರೈಸಿದರು. ಗ್ರಂಥ ಲೋಕಾರ್ಪಣೆ ಮಾಡಿರುವಯು. ಪಿ. ಎಸ್. ಇ ಯಲ್ಲಿ 270 ನೇ ರ್ಯಾಂಕ್ ಪಡೆದ ಮಹಮ್ಮದ್ ಹಾರಿಸ್‍ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರಿಕ್ಷೆಯ ಭಯ ಪಡದೆ ನಿರಂತರ ಸಾಧನೆಯಿಂದ ನಾವು ನಮ್ಮಗುರಿ ಮುಟ್ಟಲ್ಲಿಕ್ಕೆ ಶ್ರಮಿಸುತ್ತಿರುವಾಗ ನಮ್ಮ ಯಶಸ್ಸಿಗೆ ಯಾರುಅಡ್ಡಿಯಾಗಲು ಸಾಧ್ಯವಿಲ್ಲ. ನಮ್ಮ ನಿರಂತರ ಶ್ರಮ, ನಮೃತೆ, ಗುರು ಹಿರಿಯರಲ್ಲಿಗೌರವ, ಸತತವಾದಅಧ್ಯಯನ ಶಿಲತೆ ಇದ್ದರೆ ನಾವು ನಮ್ಮಗುರಿಖಂಡಿತವಾಗಿತಲುಪುತ್ತೇವೆಎಂದು ಸ್ಪೂರ್ತಿದಾಯಕದ ಮಾತುಗಳಾಡಿದರು.
ಕಾರ್ಯಕ್ರಮದಲ್ಲಿ ವಿರಣ್ಣಕುಂಬಾರ, ಮಹಮ್ಮದ್ ನಯುಮೊದ್ದಿನ್ ಮತ್ತುಕುಲಕರ್ಣಿ ಅತಿಥಿಗಳಾಗಿ ಉಪಸ್ಥಿತರಾಗಿದ್ದರು. ಸಮಾರಂಭದಅಧ್ಯಕ್ಷತೆಯನ್ನು ಮೋಹನರೆಡ್ಡಿಯವರು ವಹಿಸಿಕೊಂಡಿದ್ದರು. ಬಸವರಾಜ ಮೋಳಕಿರೆ ಪ್ರಾಸ್ತಾವಿಕ ಮಾತನಾಡಿದರು. ದಿವ್ಯರಾಣಿಯವರು ವಚನ ಪ್ರಾರ್ಥನೆ ನಡೆಸಿದರು. ಭಕ್ತಿಜುಮ್ಮಾ ಸ್ವಾಗತಿಸಿದರು. ಸಂಜನಾ ಮಲ್ಲಪ್ಪ ನಿರುಪಿಸಿದರು. ನಾಗಬಿಂದು ಶರಣು ಸಮರ್ಪಣೆ ಮಾಡಿದರು.