ಕಲಬುರಗಿ: ಕಲಾವಿದ, ಸಾಹಿತಿ, ಧಾರಾವಾಹಿ ಕಲಾವಿದ ಮತ್ತು ಸಂಗೀತಗಾರ, ನವಕರ್ನಾಟಕ ಸಂಗೀತ ಪದವೀಧರರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಂಡಯ್ಯ ಸ್ವಾಮಿ ಹಿರೇಮಠ ಸುಂಟನೂರ ಅವರಿಗೆ ಕರ್ನಾಟಕ ಸಾಹಿತ್ಯ ಸಂಸ್ಕೃತಿ ಸೇವೆ ಸಂಸ್ಥೆ ವತಿಯಿಂದ ಸಂಗೀತ ಕ್ಷೇತ್ರಕ್ಕೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಫಜಲಪೂರ ಶಾಸಕ ಎಂ.ವೈ ಪಾಟೀಲ್, ಕಸಾಪ ತಾಲ್ಲೂಕು ಅಧ್ಯಕ್ಷರಾದ ವಿರೇಂದ್ರ ಸಿಂಪಿ ಸೇರಿದಂತೆ ಹಲವರು ಕಾಲವಿದರಿಗೆ ಸನ್ಮಾನಿಸಿದರು.