ಕಲಬುರಗಿ: ಶಾಹಾಬಾದ ರಸ್ತೆಯಲ್ಲಿರುವ ಶ್ರೀಯಾನ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿಯಲ್ಲಿ ಶ್ರೀಯಾನ್ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯ ಪ್ರಾರಂಭೋತ್ಸವಕ್ಕೆ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮೂಡ ಅವರು ರಿಬ್ಬನ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಕ್ಷೇತ್ರ ಕೆಸರಟಗಿಯ ಶ್ರೀ ಭಾಗ್ಯವಂತಿ ವರಪುತ್ರಿಯಾದ ಶ್ರೀ ಶ್ರೀ ಮಾತಾ ಲತಾದೇವಿ, ಅಂಗವಿಕಲರ ಜಿಲ್ಲಾ ಕಲ್ಯಾಣಾಧಿಕಾರಿ ಸಾದಿಕ್ ಹುಸೇನಖಾನ್, ಮೀನಾಕ್ಷಮ್ಮ ಪಾಟೀಲ, ಶಾಮ ನಾಟೇಕಾರ, ದತ್ತು ಅಗರವಾಲ, ವೇಂಕಟೇಶ ದೇಶಪಾಂಡೆ, ಮಹಾನಂದ ಗಾಯಕವಾಡ, ಸಂಗಮ್ಮ ಗಾಯಕವಾಡ, ಹರಿಕೃಷ್ಣ ಜಾಲಹಳ್ಳಿ, ಶಾಲೆಯ ಅಧ್ಯಕ್ಷರಾದ ರಾಜು ಶಾಖಾಪೂರ, ಕಾರ್ಯದರ್ಶಿ ಜ್ಯೋತಿ ಶಾಖಾಪೂರ ಹಾಗೂ ಶಾಲೆಯ ಸಿಬಂದಿವರ್ಗದವರು ಮಕ್ಕಳು ಇದ್ದರು.