ಮಹಿಷಾಸುರ ರಾಕ್ಷಸನಲ್ಲ, ರಕ್ಷಕ: ಕೋರಣೇಶ್ವರ ಶ್ರೀ

0
32

ಕಲಬುರಗಿ: ಅಜ್ಞಾನದ ಬೇಧಭಾವದಿಂದ ಬೇರೆಯವರನ್ನು ನಮ್ಮನ್ನು ಆಳುವಂತಾಗಿದೆ. ಜನರನ್ನು ಗುಲಾಮರನ್ನಾಗಿಸಲು ಚರಿತ್ರೆಯನ್ನು ಬದಲಿಸುವ ಕೆಲಸ ಮಾಡಲಾಗುತ್ತಿದೆ. ಮಹಾಪುರುಷರ ವಿಚಾರಗಳಲ್ಲಿ ಕಲಬೆರಕೆ ಮಾಡಿ ಸುಳ್ಳನ್ನು ಸೇರಿಸುವ ಕೆಲಸಗಳನ್ನು ಕೆಲವರು ಮಾಡುತ್ತಿದ್ದಾರೆ ಲಿಂಗಾಯತ ಮೋರ್ಚಾದ ಅಧ್ಯಕ್ಷ ಶ್ರೀ ಕೋರಣೇಶ್ವರ ಸ್ವಾಮೀಜಿ ನುಡಿದರು.

ಪ್ರಬುದ್ಧ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಹೀರಾಪುರ ಕ್ರಾಸ್ ಹತ್ತಿರ ಸಿದ್ಧಾರ್ಥ ನಗರದ ಶಾಖ್ಯಮುನಿ ಬುದ್ಧ ವಿಹಾರದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮಹಿಷ ದಸರಾ ೨೦೨೧ರ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬಹುಜನರ ಅಭಿಪ್ರಾಯಕ್ಕೆ ಮನ್ನಣಿ ನೀಡದೆ ವಂಚಿಸಲಾಗುತ್ತಿದೆ. ನಮ್ಮ ನಿಜವಾದ ಇತಿಹಾಸ ಜಗತ್ತಿಗೆ ತಿಳಿಸುವ ಕೆಲಸ ಮಾಡಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಉಪನ್ಯಾಸಕ ನಿಜಲಿಂಗ ದೊಡ್ಮನಿ, ಮಹಿಷಾಸುರ ಪ್ರಜಾಪ್ರಭುತ್ವದ ಬಹುದೊಡ್ಡ ನಾಯಕ. ಮಹಿಷಾಸುರ ಪ್ರಜಾಪ್ರಭುತ್ವದ ದೊರೆಯಾಗಿದ್ದ ಎಂಬುದನ್ನು ಅಶೋಕನ ಶಾಸನಗಳಲ್ಲಿ ಉಲ್ಲೇಖವಿದ್ದು, ಮೈಸೂರನ್ನು ಮಹಿಸೂರು, ಮಹಿಷ ಮಂಡಲ ಎಂದು ಕರೆಯಲಾಗುತ್ತಿತ್ತು ಎಂದು ಹೇಳಿದರು.

ಮೈಸೂರಿಗೆ ಮೂಲ ಹೆಸರು ಬಂದಿರುವುದೇ ಮಹಿಷಾಸುರನಿಂದ. ಪ್ರಾಚೀನ ಕಾಲದಲ್ಲಿ ಮೈಸೂರನ್ನು ಮಹಿಸೂರ ನಾಡು, ಮಹಿಷಾಪೂರ, ಮಹಿಷ ಮಂಡಲ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಅಶೋಕನ ಕಾಲದ ಶಾಸನಗಳಲ್ಲಿ ಮಹಿಷನ ಉಲ್ಲೇಖವಿದೆ. ಅಂದಿನ ಕಾಲದ ಶಾಸನಗಳಲ್ಲಿ ದಕ್ಷಿಣ ಭಾರತದ ಬೇರಾವ ರಾಜರ ಉಲ್ಲೇಖ ಸಿಗದಿರುವುದೇ ಮಹಿಷನ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಇದನ್ನು ಅರ್ಥ ಮಾಡಿಕೊಂಡವರಿಗೆ ಮಹಿಷ ಇಲ್ಲಿನ ಬಹುಮುಖ್ಯ ಸ್ಥಳೀಯರ ದೊರೆಯಾಗಿದ್ದ ಎನ್ನುವುದು ಅರ್ಥವಾಗುತ್ತದೆ.

ನಂತರ ಮಾತನಾಡಿದ  ಪತ್ರಕರ್ತ ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ, ವೈಚಾರಿಕ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಸವಣ್ಣನ ಕಲ್ಪನೆಯ ಸಮಾಜ, ಬುದ್ಧ, ಡಾ. ಅಂಬೇಡ್ಕರ್ ಅವರ ಕನಸು ನನಸು ಮಾಡಬೇಕಾದರೆ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು.

ಮಹಿಷ ದಸರಾ ಉತ್ಸವ-೨೦೨೧ರ ಬಹಿರಂಗ ಸಭೆಯ ಸಾನಿಧ್ಯವನ್ನು ವಿಜಯಪುರದ ಬೋಧಿಪ್ರಗ್ಯ ಭಂತೇಜಿ ವಹಿಸಿದ್ದರು. ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಆಯುಷ್ಮಾನ ಬಿ.ಬಿ ರಾಂಪೂರೆ ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದರು.

ಡಾ.ಅಂಬೇಡ್ಕರ್ ೧೩೦ನೇ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಔರಾದಕರ ಅವರು ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಮುಖಂಡ ದಿಲೀಪ ಆರ್ ಪಾಟೀಲ, ಲಿಂಗಾಯತ ಸಮುದಾಯದ ಮುಖಂಡ ಶರಣು ಪಪ್ಪಾ, ದಲಿತ ಮುಖಂಡರಾದ ಶಾಮ ನಾಟೀಕಾರ, ನ್ಯಾಯವಾದಿ ಸಯ್ಯದ ಮಜರ ಹುಸೇನ,  ಅಖಿಲ ಕರ್ನಾಟಕ ಟೋಕರೆ ಮತ್ತು ಕೋಲಿ, ಕಬ್ಬಲಿಗ ಸುಧಾರಣಾ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಹಣಮಂತ ಕೋಸಗಿ, ಡಾ.ಮನೋಜ ಗಂಗಾ, ಡಾ.ಅಶೋಕ ದೊಡ್ಮನಿ, ಡಾ.ಮಲ್ಲೇಶಿ ಸಜ್ಜನ, ಡಾ.ಪ್ರಶಾಂತ ಕಾಂಬಳೆ, ಪತ್ರಕರ್ತ ದೇವೀಂದ್ರ ಹೆಚ್ ಕಪನೂರ, ಶಿವಶರಣಪ್ಪ ಮೈತ್ರೆ, ಲಿಂಗರಾಜ ಕಣ್ಣಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ವಿಶಾಲ ನವರಂಗ, ರಾಜೀವ ಜಾನೆ, ಸಚೀನ ಶಿರವಾಳ ಹಾಗೂ ಮುಖಂಡರಾದ ಅಲ್ಲಮಪ್ರಭು ನಿಂಬರ್ಗಾ, ಗುರಣ್ಣ ಐನಾಪುರ, ರಾಘವೇಂಧ್ರ ಫರತಾಬಾದ, ಡಾ. ಅನೀಲ ಟೆಂಗಳಿ, ಹಣಮಂತ ಬೋದನಕರ, ವಿಠ್ಠಲ್ ವಗ್ಗನ, ಸಿದ್ಧಾರ್ಥ ಪಟ್ಟೇದಾರ, ನಾಗೇಶ ಕೊಳ್ಳಿ, ಮಲ್ಲಿಕಾರ್ಜುನ ಕೆರಮಗಿ, ಹಣಮಂತ್ರಾಯ ದೊಡ್ಡಮನಿ, ಗೌತಮ ಗಾಯಕವಾಡ, ಸಿದ್ದಾರೂಢ ಖಜೂರಿ, ಭೀಮರಾಯ ನಗನೂರ, ಲಕ್ಷ್ಮೀಕಾಂತ ಕಾಂಬಳೆ, ವಿ.ಆರ್ ಚಾಂಬಾಳ, ರಾಜು ಶಿಲ್ಪಿ, ಶ್ರೀಮಂತ ಧನ್ನಾಕರ, ಪ್ರಭಾಕರ ಸಾಗರ, ರವಿ ಕುಳಗೇರಿ ಸಂಗು ಕಟ್ಟಿ ಸಂಗಾವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here