ಐಎಸ್ ಟಿಇ ಖಜಾಂಚಿ  ಯಾಗಿ ಡಾ. ಮಲಶೆಟ್ಟಿ ಆಯ್ಕೆ

0
13

ಕಲಬುರಗಿ: ರಾಷ್ಟ್ರೀಯ ಸಂಸ್ಥೆಯಾಗಿರುವ ಇಂಡಿಯನ್  ಸೋಸೈಟಿ  ಆಫ್ ಟೆಕ್ನಿಕಲ್ ಎಜುಕೇಶನ್ (ಐ.ಎಸ್.ಟಿ.ಇ) ಖಜಾಂಚಿ ಯಾಗಿ ಕಲಬುರಗಿಯವರಾದ ಡಾ. ಎಸ್ .ಜಿ. ಮಲಶೆಟ್ಟಿ ಆಯ್ಕೆಯಾಗಿದ್ದಾರೆ. ರಾಯಚೂರಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ಎಲ್.ಎನ್ ಕಾಲೇಜಿನಲ್ಲಿ ೩೫ ವರ್ಷ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಡಾ. ಎಸ್.ಜಿ.ಮಲಶೆಟ್ಟಿ  ಅವರ ಆಯ್ಕೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆಸಂತಸವಾಗಿದೆ.

ಮುಂಬಯಿಯಲ್ಲಿನಡೆದ ಕಾರ್ಯ ಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಪ್ರತಾಪಸಿಂಹ ದೇಸಾಯಿ ಅವರು ಡಾ. ಮಲಶೆಟ್ಟಿಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಸನ್ಮಾನಿಸಿದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ ಠಾಕ್ರೆ, ಪಂಜಾಬ್ ತಾಂತ್ರಿಕ ವಿಶ್ವ ವಿಸ್ಯಾಲಯದ ಕುಲಪತಿ ಡಾ.ಬೂಟಾಸಿಂಗ್ ಸೇರಿ ಗಣ್ಯರ ಸಮ್ಮುಖದಲ್ಲಿ ಅವರನ್ನು ಸನ್ಮಾನಿಸಲಾಯಿತು.

Contact Your\'s Advertisement; 9902492681

ರಾಜ್ಯದಿಂದ ಡಾ. ಮಲಶೆಟ್ಟಿ ಒಬ್ಬರಿಗೆ ಸಮಿತಿಯಲ್ಲಿ ಅವಕಾಸ ಸಕ್ಕಿದೆ.  ಇತ್ತಿಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಅವರು ಖಜಾಂಚಿ ಯಾಗಿ ಆಯ್ಕೆ ಯಾಗಿದ್ದಾರೆ.  ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆತರು ವಿಷಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here