ಕಲಬುರಗಿ: ನಗರದ ಕನ್ನಡ ಭವನದ ಸುವರ್ಣಾ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ಕಲಾ ಸಾಹಿತ್ಯ, ಸಂಸ್ಕೃತಿ ಸೇವಾ ಸಂಸ್ಥೆಯಿಂದ ಪಂಡಿತ ಡಾ. ಪುಟ್ಟರಾಜ್ ಗವಾಯಿಗಳ ೧೧ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಸಂಗೀತ ಸೌರಭ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಎಂ.ವೈ. ಪಾಟೀಲ್ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ಸಂಗೀತ, ಸಂಸ್ಕೃತಿ ಮತ್ತು ಯೋಗವು ಮುಂಚೂಣಿ ಸ್ಥಾನದಲ್ಲಿದ್ದು, ವಿವಿಧ ಕಲೆಗಳು ಒಂದು ನಾಡಿನ ಸಂಸ್ಕೃತಿ ಪ್ರತೀಕಗಳಾಗಿವೆ ಎಂದು ಹೇಳಿದರು. ಅನೇಕ ಸಂಗೀತ ಕಲಾವಿದರ ಬದುಕು ಅತಂತ್ರದಲ್ಲಿದ್ದು, ಸಿರಿವಂತ ಕಲಾವಿದರು ಯಾರೂ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕಲಾವಿದರನ್ನು ಆರ್ಥಿಕವಾಗಿ ಬಲಪಡಿಸಬೇಕು ಎಂದರು.
ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ್ ಮಾತನಾಡಿ, ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ನಿರ್ಮಿಸುವುದೇ ಅಭಿವೃದ್ಧಿಯಲ್ಲ, ಮಾನವನ ಅಭ್ಯುದಯವಾಗಬೇಕಾದರೆ ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಬೇಕು. ಈ ದಿಸೆಯಲ್ಲಿ ಸಂಗೀತದಿಂದ ಸಾಂಸ್ಕೃತಿಕ ಸಮಾಜ ನಿರ್ಮಿಸಿದರೆ ಆದರ್ಶ ಸಮಾಜ ಕಾಣಲು ಸಾಧ್ಯ ಪ್ರತಿಪಾದಿಸಿದರು.
ಮಾಜಿ ಎಂಎಲ್‌ಸಿ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಿವಶರಣಪ್ಪ ಕೋಬಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ, ಕಸಾಪ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ, ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಭದ್ರ ಸಿಂಪಿ ಮಾತನಾಡಿದರು.
ಪ್ರಥಮ ದರ್ಜೆ ಗುತ್ತೇದಾರ್ ಎಸ್. ವೈ. ಪಾಟೀಲ್, ಕಾಂಗ್ರೆಸ್ ಮುಖಂಡ ಲಕ್ಷ್ಮೀಪುತ್ರ ಜಮಾದಾರ್, ಸಂಸ್ಥೆಯ ಅಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ ವೇದಿಕೆ ಮೇಲಿದ್ದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಅಣ್ಣಾರಾವ್ ಶೆಳ್ಳಗಿ, ರೇವಣಸಿದ್ದಯ್ಯ ಸುಂಠನೂರ, ಸಿದ್ದಾರ್ಥ ಚಿಮ್ಮಾ ಇದ್ಲಾಯಿ, ಅಂಬಯ್ಯ ಗುತ್ತೇದಾರ್, ಸಿದ್ರಾಮಪ್ಪ ಆಲಗೂಡಕರ್ ಮತ್ತಿತರರಿದ್ದರು.
೪೦ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಂಗೀತ ಕ್ಷೇತ್ರದಲ್ಲಿ ಡಾ. ಸಿದ್ರಾಮಪ್ಪ ಪೊಲೀಸ್ ಪಾಟೀಲ್, ಜಡೇಶ ಹೂಗಾರ, ಗುರುಶಾಂತಯ್ಯ ಸ್ಥಾವರಮಠ, ಅಣ್ಣಾರಾವ್ ಶೆಳ್ಳಗಿ, ಡಾ. ರವಿಂದ್ರ ಕುಲಕರ್ಣಿ, ಗಂಗಾಧರ ಪಾಟೀಲ್, ಬಂಡಯ್ಯ ಸ್ವಾಮೀಜಿ, ಬಸಯ್ಯ ಗುತ್ತೇದಾರ್, ಸೈದಪ್ಪ ಸಪ್ಪನಗೊಳ, ವಿಶ್ವನಾಥ ತೊಟ್ನಳ್ಳಿ, ರಂಜಿತಾ ಮೇಲಕೇರಿ, ರಾಜಕುಮಾರ ತಳವಾರ, ಬಲಭೀಮ ನೇಲೋಗಿ, ಚಿತ್ರಕಲಾ ಕ್ಷೇತ್ರದಲ್ಲಿ ಮೀನಾಕ್ಷಿ ಶಾಬಾದಿ, ರಂಗಭೂಮಿಯಲ್ಲಿ ಸಂದೀಪ ಬಿ, ರಾಘವೇಂದ್ರ ಹಳ್ಳಿಪೇಟ, ಸಾಹಿತ್ಯದಲ್ಲಿ ಮಡಿವಾಳಪ್ಪ ನಾಗರಹಳ್ಳಿ, ಸಮಾಜಸೇವೆಯಲ್ಲಿ ದೇವಿಂದ್ರಪ್ಪ ಕೂಡಿ, ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ದೇವಿಂದ್ರಪ್ಪ ಆವಂಟಿ, ಮಲ್ಲಿಕಾರ್ಜುನ ವಿ.ಎನ್, ಭೀಮಾಶಂಕರ ಫಿರೋಜಾಬಾದ್, ರಾಜಕುಮಾರ ಉದನೂರ, ನ್ಯಾಯಂಗ ಕ್ಷೇತ್ರದಲ್ಲಿ ನ್ಯಾಯವಾದಿ ಪಿ.ಎಸ್. ಮಠ, ಶಿಕ್ಷಣ ಕ್ಷೇತ್ರದಲ್ಲಿ ಡಾ. ನಾಗಪ್ಪ ಗೋಗಿ, ಶ್ರೀನಿವಾಸ ನಾಲವಾರ, ಸುಮಂಗಲಾ, ಪ್ರಮೀಳಾ ಪಾಟೀಲ್, ಭಾರತಿ ಸಂಗನ್, ಅರ್ಜುನ ಹತ್ತಿ, ಮಾಯಾದೇವಿ ಕಲಶೆಟ್ಟಿ, ಶಿವಲೀಲಾ ಕಲಗುರ್ಕಿ, ಸಂತೋಷಕುಮಾರ ಕೋಬಾಳ, ರೋಹಿಣಿ ಮುಂಡೋಡಗಿ, ಶಾಂತಾಬಾಯಿ ಅರಣಕಲ್, ಜಯಶೀಲಾ ಸುದರ್ಶನ, ರೇಣುಕಾ ಎಸ್, ಸೂರ್ಯಕಾಂತ ಗೊಳರಗಿ, ರಜನಿ ಮಾನ್ವಿ ಅವರಿಗೆ ೨೦೨೧ನೇ ಸಾಲಿನ ರಾಜ್ಯಮಟ್ಟದ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.