ಮಹಾನ ನಾಯಕರ ಜಾತ್ಯತೀತ ಸಮಾಜ ನಿರ್ಮಾಣ ಅವಶ್ಯ: ಶೀಲವಂತ

0
8

ಆಳಂದ: ಬುದ್ಧ, ಬಸವ, ಫುಲೆ, ಶಾಹು ಗಾಂಧೀಜಿ, ಡಾ| ಬಿ.ಆರ್. ಅಂಬೇಡ್ಕರ್ ಪೇರಿಯಾರ ರಾಮಸ್ವಾಮಿ, ನಾರಾಯಣ ಗುರುಗಳಂತ ಇನ್ನೂ ಅನೇಕ ಮಹಾನ ನಾಯಕರು ಕಂಡ ಜಾತ್ಯತೀತ ಸಮಾಜ ನಿರ್ಮಾಣದ ಕನಸು ನನಸಾಗಿಸಲು ಇಂದು ಸರ್ವರು ಪ್ರಯತ್ನಿಸಬೇಕಾಗಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ ಅವರು ಹೇಳಿದರು.

ತಾಲೂಕಿನ ನೆಲ್ಲೂರ ಗ್ರಾಮದಲ್ಲಿ ಸಂಸ್ಕಾರ ಪ್ರತಿಷ್ಠಾನ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಅಸ್ಪೃಶ್ಯತೆ ನಿರ್ಮೂಲನಾ ಕುರಿತಾದ ವಿಚಾರ ಸಂಕಿರಣ ಹಾಗೂ ಬೀದಿ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಮಾಜದಲ್ಲಿ ಜಾತಿಯತೆಯ ಅಸಮಾನತೆಯ ಬೇರುಗಳು ಕಿತ್ತೆಸೆದು ಭಾತೃತ್ವದ ನೆಲೆಯ ಸಮಾನತೆಯನ್ನು ಬೆಳೆಸಬೇಕು ಇಂದು ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡ ಸಮಾಜವನ್ನು ಸುಧಾರಿಸಲು ಮಹಾಪುರುಷರು ಸಾಕಷ್ಟು ರೀತಿಯಲ್ಲಿ ಶ್ರಮಿಸಿದರು ಸಹ ಇನ್ನೂ ಜಾತಿ ಆಳವಾಗಿಯೇ ಉಳಿದುಕೊಂಡಿದೆ. ಇದರಿಂದ ಸಮಾಜ ಮತ್ತು ದೇಶದ ಅಭಿವಿಷ್ಯ ಮಾರಕವಾಗಿದ್ದು, ಸಮೃದ್ಧಿ ಸಮಾಜಕ್ಕಾಗಿ ಜನರ ಮನೋಭಾವನೆ ನೀರಿನಂತೆ ಶುದ್ಧಿಕರಿಸಬೇಕಾಗಿದೆ. ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಬದುಕು ಸಾಗಿಸಲು ಸಂವಿಧಾನ ನಮಗೆಲ್ಲ ಹಕ್ಕು ಸವಲತ್ತುಗಳು ಒದಗಿಸಿದೆ. ಶೋಷಿತ ಸಮುದಾಯದ ಜನರು ಶಿಕ್ಷಣವಂತರಾಗಿ ವರ್ಗರಹಿತ ಮತ್ತು ಜಾತಿ ರಹಿತ ಸಮಾಜ ಕಟ್ಟಲು ಮುಂದಾಗಬೇಕು ಎಂದು ಅವರು ಒತ್ತಿ ಹೇಳಿದರು.

ಸಾಹಿತಿ ಧರ್ಮಣ್ಣ ಎಚ್ ಧನ್ನಿ ಉಪನ್ಯಾಸ ನೀಡಿ, ಡಾ| ಬಿ.ಆರ್. ಅಂಬೇಡ್ಕರವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದರೆ ನಾವು ಪ್ರಬುದ್ಧ ಭಾರತ ನಿರ್ಮಿಸಬಹುದಾಗಿದೆ. ಮಕ್ಕಳಿಗೆ ಭಾರತೀಯ ಸಂವಿಧಾನದ ಆಶಯಗಳನ್ನು ತಿಳಿಸಿ ಕೊಡಬೇಕಾಗಿದೆ. ಅದಕ್ಕಾಗಿ ಬುದ್ಧ ಬಸವ, ಡಾ| ಅಂಬೇಡ್ಕರರ ದಾರಿ ನಮ್ಮದಾಗಲಿ ಎಂದು ಹೇಳಿದರು.

ದಣ್ಣೂರ ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಭೀಮಶ್ಯಾ ಸಿಂಗೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂಸ್ಕಾರ ಪ್ರತಿಷ್ಠಾನದ ಅಧ್ಯಕ್ಷ ವಿಠ್ಠಲ ಚಿಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಓ ಮಲ್ಲಿಕಾರ್ಜುನ ಗಿರಿ, ಹಾಸ್ಟೇಲ್ ಮೇಲ್ವಿಚಾರಕ ರಮೇಶ ಕರಾಟಮಾಲ, ಸಂಗೀತ ಕಲಾವಿದ ಎಂ.ಎನ್. ಸುಗಂಧಿ ರಾಜಪೂರ ಅವರು ಮಾತನಾಡಿದರು.

ಗ್ರಾಮದ ಮುಖಂಡರಾದ ಕಲ್ಯಾಣಿ ಬಿರಾದಾರ, ಶ್ರೀಕಾಂತ ವಾಡಿ, ಪೀರಪ್ಪ ಹಾದಿಮನಿ, ಪೊಲೀಸ್ ಅಧಿಕಾರಿ ಈರಣ್ಣ, ಕಲಾವಿದರಾದ ಶಶಿಕಾಂತ ಕಾಂಬಳೆ ನಿರಗುಡಿ, ಗಂಗುಬಾಯಿ ಕೌಲಗಿ, ಪಿ.ಆರ್. ಪಾಂಡು, ಜಯಶ್ರೀ ಗುತ್ತೇದಾರ, ಮುತ್ತಣ್ಣ ಲಿಂಗಸೂರ, ಶಿಲ್ಪಾ ಕಲಬುರಗಿ, ಮಹೇಶ ಬಡರ್ಗೆ, ಅಂದಪ್ಪ ಡೋಣಿ, ಸತೀಶ ಕರಕಂಚಿ, ಶಿವಕುಮಾರ ಡೋಣಿ, ಭೀಮಶ್ಯಾ ಸಿಂಗೆ ಸೇರಿ ಅನೇಕ ಗಣ್ಯರು ಭಾಗವಹಿಸಿದರು. ನಂತರ ಓಂ ಸಾಯಿ ಜನಜಾಗೃತಿ ಕಲಾ ತಂಡದವರಿಂದ ಅಸ್ಪೃಶ್ಯತೆ ನಿರ್ಮೂಲನೆಯ ಬೀದಿ ನಾಟಕ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here