ಶಹಾಬಾದ:ಡಾ.ಅಂಬೇಡ್ಕರ್ ಅವರ ಕನಸನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ಕಾನ್ಶಿರಾಮ್ ಯತ್ನಿಸಿದರು. ಅವರು ನಿಜಾರ್ಥದಲ್ಲಿ ಮೊಟ್ಟ ಮೊದಲ ದೇಶದ ಅಂಬೇಡ್ಕರ್ ವಾದಿ ಎಂದು ಬಿಎಸ್‌ಪಿ ಅಧ್ಯಕ್ಷ ಶಿವಶಾಲಕುಮಾರ ಪಟ್ಟಣಕರ್ ಹೇಳಿದರು.
ಅವರು ಬಹುಜನ ಸಮಾಜವಾದಿ ಪಕ್ಷದಿಂದ ಶನಿವಾರ ಹಮ್ಮಿಕೊಂಡಿದ್ದ ದಾದಾ ಸಾಹೇಬ್ ಕಾನ್ಶಿರಾಮ್ ಅವರ ೧೫ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಂಥ ದೇಶಕ್ಕೆ ದಲಿತರೊಬ್ಬರು ಪ್ರಧಾನಿಯಾಗಬೇಕು ಎನ್ನುವುದು ಕನಸಾಗಿತ್ತು. ಇನ್ನೂ ಹತ್ತೇ ವ? ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ ಅವರು ಬದುಕಿದ್ದರೆ ದೇಶಕ್ಕೆ ಮೊದಲ ದಲಿತ ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳು ಅವರಲ್ಲಿತ್ತು. ಬದುಕಿದ್ದರೆ ಇದು ಸಾಧ್ಯವಾಗುತ್ತಿತ್ತು. ಬಹುಜನ ಸಮಾಜ ಪಾರ್ಟಿ ಸಂಸ್ಥಾಪಕ ಅಧ್ಯಕ್ಷ ಕಾನ್ಶಿರಾಮ ಅವರು ಹೇಳಿದಂತೆ ಮಾತಿಗಿಂತ ಕೆಲಸ ಮಾಡಿ ತೋರಿಸಿ, ಆಗ ಆ ಕೆಲಸಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂಬ ಮಾತನ್ನು ನಾವೆಲ್ಲರೂ ಪಾಲಿಸಬೇಕೆಂದು ಹೇಳಿದರು.
ಬಿಎಸ್‌ಪಿ ಮುಖಂಡ ಗೋವಾ ಬಾಬು ಮಾತನಾಡಿ, ಬಹುಜನ ಸಮಾಜವಾದಿ ಪಕ್ಷವನ್ನು ಕಟ್ಟಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ತಂದಿದ್ದರು. ಅಲ್ಲದೇ ದೇಶದಲ್ಲೂ ಪಕ್ಷವನ್ನು ಸಂಘಟನೆ ಮಾಡಿದ್ದರು. ಇದರಿಂದಲೇ ಬಹುಜನರಿಗೂ ದೇಶದ ಹಲವು ಕಡೆ ಅಧಿಕಾರ ಸಿಗಲು ಈ ಪಕ್ಷವೂ ನೆರವು ನೀಡಿದೆ ಎಂದು ಹೇಳಿದರು.
ಮುಖಂಡರಾದ ಆಚಿಜನೇಯ ಕುಸಾಳೆ, ಪುನೀತ್ ಹಳ್ಳಿ, ಕಿರಣ ಜಡಗಿಕರ್, ಶಿವರಾಜ ಚಿಂಚೋಳಿ, ನಿತೀನ್, ಅಪ್ಪು ಇತರರು ಇದ್ದರು.