ಜೇವರ್ಗಿ: ನಮ್ಮ ರಾಜ್ಯದಲ್ಲಿ ಕನ್ನಡದ,ಭಾಷೆ ,ನೆಲ ,ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಮಕ್ಕಳನ್ನು ಕಡ್ಡಾಯವಾಗಿ ಒಂದರಿಂದ ಹತ್ತನೇ ತರಗತಿಯವರೆಗೂ ಕನ್ನಡದಲ್ಲಿ ಶಿಕ್ಷಣ ಕೊಡಿಸಬೇಕು.ಮತ್ತು ಕನ್ನಡ ಸಾಹಿತ್ಯ ಪರಂಪರೆ ಉಳಿಸಿ-ಬೆಳೆಸಿ ,ಮುಂದಿನ ಜನಾಂಗಕ್ಕೆ ತಲುಪುವಂತಾಗಲಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರು ಆದ ಮಾತಾ ಮಂಜಮ್ಮ ಜೋಗತಿ ತಿಳಿಸಿದರು.
ಬಸವ ಭೂಷಣ ಸಾಂಸ್ಕೃತಿಕ ವೇದಿಕೆ ಜೇವರ್ಗಿ ಅಡಿಯಲ್ಲಿ ಸದಾನಂದ್ ಪಾಟೀಲ್ ಅವರು ಬರೆದ ಬ್ಯೂಟಿಫುಲ್ ಲೈಫ್ ಹಾಗೂ ಸಾಧಿಸಿದವರ ಸಾಧನೆ ಕಥೆಗಳು ಎನ್ನುವ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಇಲ್ಲಿನ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಡಾ .ಶಿವಾನಂದ ಮಹಾಸ್ವಾಮಿಗಳು, ವಿರಕ್ತಮಠ ಸೊನ್ನ, ಹಾಗೂ ಪೂಜ್ಯ ಶ್ರೀ ಚನ್ನಬಸವ ಸ್ವಾಮೀಜಿ ಅಥಣಿ ವಹಿಸಿದ್ದರು. ದೊಡ್ಡಪ್ಪಗೌಡ ಪಾಟೀಲ ನರಿಬೋಳ್ ಮಾಜಿ ಶಾಸಕರು ಆಸೆಯ ನುಡಿಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇದಾರ ಲಿಂಗಯ್ಯ ಹಿರೇಮಠ್ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷರು ವಹಿಸಿದ್ದರು. ಪುಸ್ತಕದ ಕುರಿತು ಪರಿಚಯ ಹಾಗೂ ಸಂಕ್ಷಿಪ್ತ ವಿಶ್ಲೇಷಣೆಯನ್ನು ಮೈಪಾಲ್ ರೆಡ್ಡಿ ಮನ್ನೂರ ಪತ್ರಕರ್ತರು ಹಾಗೂ ಲೇಖಕರು ವಿವರವಾಗಿ ನೀಡಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿದ್ದಲಿಂಗ ರಂಗಣ್ಣನವರು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ, ಸೇರಿದಂತೆ ಹಿರಿಯ ಮುಖಂಡರಾದ ರಾಜಶೇಖರ್ ಸಿರಿ ,ಶಿವನಗೌಡ ಪಾಟೀಲ ಅಧ್ಯಕ್ಷರು ಕಾಸಪ ಜೇವರ್ಗಿ ಹಾಗೂ ಶರಣಬಸವ ಕಲ್ಲಾ ಬಸವ ಕೇಂದ್ರ ಜೇವರ್ಗಿ ಅಧ್ಯಕ್ಷರು ವಹಿಸಿದ್ದರು.
ಕಾರ್ಯಕ್ರಮದ ಸಂಗೀತ ಸೇವೆಯನ್ನು ಕಲಾರತ್ನ ಶಿವರುದ್ರಯ್ಯ ಗೌಡಗಾವ್ ಸಲ್ಲಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು.