ಕಲಬುರಗಿ: ಚಿಂಚೋಳಿ, ಸೇಡಂ ಹಾಗೂ ಕಾಳಗಿ ತಾಲ್ಲೂಕಿನಲ್ಲಿ ಸತತ ಎರಡು ದಿನಗಳಿಂದ ಲಘು ಭೂಕಂಪ ಆಗುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಮತ್ತು ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರು ವಿಪತ್ತು ಕಾರ್ಯನಿರ್ವಹಣದ ಆಯುಕ್ತರಾದ ಡಾ ಮನೋಜ್ ರಂಜನ್ ಅವರ ಜೊತೆ ಬೆಂಗಳೂರಿನಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದರು.
ಸಂಸದರ ಮತ್ತು ಶಾಸಕರ ಕೋರಿಕೆ ಮರಿಗೆ ಕೇಂದ್ರದ ತಂಡವನ್ನು ನವಂಬರ್ ಮೊದಲನೇ ವಾರದಲ್ಲಿ ಎರಡು ದಿವಸಗಳ ಕಾರ್ಯಾಗಾರ ಕಲಬುರಗಿಯಲ್ಲಿ ನಡೆಸುವ ಭರವಸೆ ನೀಡಿದ್ದಾರೆ.