ಮಹಾರಾಷ್ಟ್ರ ಮುಂಬೈ: ರಾಜ್ಯ ರಾಜಕೀಯದಲ್ಲಿ ಹಲವು ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದು, ಇದರ ಬೆನ್ನಲ್ಲೇ ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್ ನ ಟ್ರಬಲ್ ಶೂಟರ್, ಡಿಕೆ ಶಿವಕುಮಾರ್ ಮುಂಬೈನಲ್ಲಿದ್ದ ಅತೃಪ್ತ ಶಾಸಕರ ಹೊಟೇಲ್ ಗೆ ತೆರಳಿದಾಗ ಡಿಕೆಸಿ ಅವರ ಕಂಡ ಶಾಸಕರು ಅಲ್ಲಿಂದ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ಇಂದು ಬೆಳ್ಳಂ ಬೆಳಗ್ಗೆ ರಾಜ್ಯ ರಾಜಕೀಯ ರಾಜಕಾರಿಣಿಗಳ ಮಹಾರಾಷ್ಟ್ರ ಪ್ರದೇಶದ ಮುಂಬೈನಲ್ಲಿ ಹೈಡ್ರಾಮಾವೇ ನಡೆದಿದೆ.
ಅತೃಪ್ತ ಶಾಸಕರ ಮನವೊಲಿಸಲು ಡಿಕೆ ಶಿವಕುಮಾರ್ ಮುಂಬೈಗೆ ಎಂಟ್ರಿ ಕೊಟ್ಟಿದ್ದರು. ಆದರೆ ಶಾಸಕರು ಉಳಿದುಕೊಂಡಿದ್ದ ಹೊಟೇಲ್ ಗೇಟ್ ಬಳಿ ತಲುಪುತ್ತಿದ್ದಂತೆಯೇ ಮಹಾರಾಷ್ಟ್ರ ಪೊಲೀಸರು ಅವರನ್ನು ತಡೆದಿದು, ಹೊಟೇಲ್ ಒಳಗೆ ಬಿಡಲಿಲ್ಲ ಎಂದು ಕೇಳಿಬಂದಿತ್ತು. ತಾನು ಹೊಟೇಲ್ ರೂಂ ಬುಕ್ ಮಾಡಿದ್ದೇನೆ ಎಂದು ಹೇಳಿದರೂ ಪೊಲೀಸರು ಅವರನ್ನು ಹೊಟೇಲ್ ಪ್ರವೇಶಿಸಲು ಬಿಟ್ಟಿರಲಿಲ್ಲ.
ಆದರೆ ಹಠ ಬಿಡದ ಡಿಕೆಶಿ ಹೊಟೇಲ್ ಪ್ರವೇಶ ದ್ವಾರದ ಬಳಿಯೇ ನಿಂತುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಡಿಕೆಶಿಗೆ ಹೊಟೇಲ್ ಪ್ರವೇಶಿಸಲು ಅವಕಾಶ ನೀಡಲಾಗಿತ್ತು, ಆದರೆ ಡಿಕೆಶಿಗೆ ಹೊಟೇಲ್ ಪ್ರವೇಶಿಸಲು ನೀಡುವ ಮುನ್ನವೇ ಅತೃಪ್ತ ಶಾಸಕರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಡಿಕೆಶಿ ಭೇಟಿಯಿಂದ ಅತೃಪ್ತ ಶಾಸಕ ನಿರ್ಧಾರ ಬದಲಾಯಿಸುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎನ್ನಲಾಗುತ್ತಿದೆ.