ಶಹಾಬಾದ: ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದ್ದು, ಅದರ ಸಂಪೂರ್ನ ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಘದ ಅಧ್ಯಕ್ಷ ರವೀಂದ್ರ ನರೋಣಿ ಹೇಳಿದರು.
ಅವರು ಬುಧವಾರ ಮರತೂರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಆಯೋಜಿಸಲಾದ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮರತೂರ ಗ್ರಾಮದ ಸುಮಾರು ೨೨೩ ರೈತರಿಗೆ ೬೨,೮೨,೦೦೦ ರೂ. ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಇದರಿಂದ ಅನುಕೂಲವಾಗುತ್ತಿದೆ. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜ ಪಾಟೀಲ ಹೆರೂರ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಅಜೀತ ಪಾಟೀಲ ಅವಎಲ್ಲ ಸಹಕಾರದಿಂದ ಈ ಬಾರಿ ಹೊಸ ಸಾಲ ವಿತರಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.ಅಲ್ಲದೇ ಸರಿಯಾದ ಸಮಯಕ್ಕೆ ಮರುಪಾವತಿ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಕರಬಸಪ್ಪ ರಾಯನಾಡ, ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ಬುಕ್ಕನ್, ಗ್ರಾಪಂ ಅಧ್ಯಕ್ಷ ಗುರುನಾಥ ಕಂಬಾನೂರ, ನಿರ್ದೇಶಕ ಗುಂಡಪ್ಪ ಕಂಬಾರ, ಸಿದ್ದಲಿಂಗ ಪೂಜಾರಿ, ಮಲ್ಲಣ್ಣ ಅಣಕಲ್ ಸೇರಿದಂತೆ ಅನೇಕರು ಇದ್ದರು.