’ಡಾ ಅಂಬೇಡ್ಕರರ ಕನಸಿನ ಭಾರತ ನಿರ್ಮಾಣವಾಗಬೇಕು’: ಧಮ್ಮ ಚಕ್ರ ಪ್ರವರ್ತನ ದಿನಾಚರಣೆ

0
16

ಕಲಬುರಗಿ: ಜಾತಿ ರಹಿತ ವರ್ಗರಹಿತ ಸಮಾಜ ಕಟ್ಟುವ ಮೂಲಕ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರು ಕಟ್ಟ ಬಯಸಿದ ಕನಸಿನ ಪ್ರಬುದ್ಧ ಭಾರತ ನಿರ್ಮಾಣವಾಗಬೇಕು ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಡಾ ಸದಾನಂದ ಪೆರ್ಲ ಹೇಳಿದರು.

ನಗರದ ನಾಗಮಾಣಿಕ್ಯ ಎಂ ಎಸ್, ಡ್ಲ್ಯೂ ಕಾಲೇಜಿನಲ್ಲಿ ದೇವಿಂದ್ರಪ್ಪ ಜಿಸಿ ಸಂಗೀತ, ಸಾಹಿತ್ಯ ಕಲಾ ಸಂಸ್ಥೆ ಆಯೋಜಿಸಿದ ೬೫ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ ನಿಮಿತ್ತ ಆಯೋಜಿಸಿದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸತ್ಯವನ್ನು ಬಯಸಿ ಹುಡುಕಾಟದಲ್ಲಿ ತೊಡಗಿದ ಬುದ್ಧನ ಆದರ್ಶಗಳು ಅಳವಡಿಸಿಕೊಂಡು ಭೌದ್ಧ ಧರ್ಮ ಸೌಕರಿಸಿದ ಡಾ ಅಂಬೇಡ್ಕರವರು ಸಂವಿಧಾನದಡಿ ಎಲ್ಲರಿಗೂ ಸಮಾನತೆಯ ಬದುಕು ಕಟ್ಟಿ ಕೊಟ್ಟಿದ್ದಾರೆ. ಇಂದು ಅಂಬೇಡ್ಕರವರು ಇಲ್ಲದ ಭಾರತ ಶೂನ್ಯ. ಸಶಕ್ತ ಸಮಾಜ ನಿರ್ಮಿಸಲು ಬುದ್ಧ ಬಸವ, ಡಾ, ನಾರಾಯಣ ಗುರುಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಮುನ್ನಡೆಯಬೇಕಾಗಿದೆ. ಆ ಮೂಲಕ ಸಮ ಸಮಾಜ ನಿರ್ಮಿಸಲು ಸಾಹಿತ್ಯ ಪರಿವರ್ತನೆ ತರಲಿ ಎಂದರು.

ಕವಿಗೋಷ್ಠಿ ಉದ್ಘಾಟಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ ರಮೇಶ ಲಂಡನಕರ ಅವರು, ವೈಜ್ಞಾನಿಕ ಮತ್ತು ಮಾನಮವೀಯ ನೆಲೆಯಲ್ಲಿ ರೂಪಿತಗೊಂಡ ಭೌದ್ಧ ಧರ್ಮವನ್ನು ಡಾ ಅಂಬೇಡ್ಕರವರು ಸ್ವೀಕರಿಸುವ ಮೂಲಕ ಮತ್ತೇ ಭಾರತದಲ್ಲಿ ನೆಲೆಯೂರಲು ಕಾರಣವಾಗಿದೆ. ಬುದ್ಧನ ಪ್ರಜ್ಞೆ ಶೀಲ ಕರುಣೆ, ಶಾಂತಿಯ ಮೌಲ್ಯಗಳ ಪಾಲನೆಯಾಗಬೇಕು. ಅಂಬೇಡ್ಕರವರ ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವದ ವಿಚಾರಗಳು ಆದರ್ಶವಾಗಬೇಕು. ಈ ದಿಸೆಯಲ್ಲಿ ಕವಿ ಕಾವ್ಯ ಬೆಳಕು ಚೆಲ್ಲಲಿ ಎಂದರು.

ಸಾಹಿತಿ ಧರ್ಮಣ್ಣ ಎಚ್ ಧನ್ನಿ, ನಿವೃತ್ತ ಪ್ರಾಚಾರ್ಯ ಈಶ್ವರ ಇಂಗಿನ, ಪ್ರಾಂಶುಪಾಲ ಮಹೇಶಕುಮಾರ ಮಾಡಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಲಿಂಗ ಮಾಹೂರ ಹಾಗೂ ತಂಡದವರಿಂದ ಪ್ರಾರ್ಥನೆ ಗೀತೆ ನಡೆಯಿತು. ಒಟ್ಟು ೧೬ ಜನ ಕವಿಗಳು ಭಾಗವಹಿಸಿ ಸ್ವರಚಿತ ಕವನಗಳ ವಾಚನ ಮಾಡಿದರು.

ಕವಿಗೋಷ್ಠಿಯಲ್ಲಿ ವಿ ಆರ್ ಚಾಂಬಾಳ, ರೇಣುಕಾ ಶ್ರೀಕಾಂತ, ಎಂ ಎನ್ ಸುಗಂಧಿ, ಎಂಪಿ ಪ್ರಕಾಶ ಸರಸಂಬಿ, ಎಂಬಿ ನಿಂಗಪ್ಪ, ಶರಣರೆಡ್ಡಿ ಎಸ್ ಕೋಡ್ಲಾ, ಡಾ ರಾಜಶೇಖರ ಮಾಂಗ, ಕವಿತಾ ರಾಠೋಡ, ಸಿದ್ದರಾಮ ಸರಸಂಬಿ, ಸಂಗಮ್ಮ ಧಮ್ಮೂರಕರ, ಕಾಶೀನಾಥ ಮುಖರ್ಜಿ, ಸಾವಿತ್ರಿ ಉದಯಕರ್, ವಿಜಯಲಕ್ಷ್ಮೀ ಗುತ್ತೇದಾರ, ಶಿವಶಂಕರ ಬಿಳಾಲಕರ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here