ಪಾಂಡು ನಾಯಕ (ಪಡ್ಡು ನಾಯಕ) ತಾಂಡದ ನೀರಿನ ಬವಣೆ ನಿವಾರಿಸಿದ ಜಲ ಜೀವನ ಮಿಷನ್

0
28

ಕಲಬುರಗಿ: ಜಿಲ್ಲೆಯ ಕಮಲಾಪೂರು ತಾಲೂಕಿನ ಕಲಮೂಡ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು ೬ ಗ್ರಾಮಗಳು ೯ ತಾಂಡಗಳು ಇದ್ದು, ೨೦೨೦-೨೧ನೇ ಸಾಲಿನಲ್ಲಿ ಸದರಿ ಗ್ರಾಮ ಪಂಚಾಯತ್ ನಲ್ಲಿ ೪ ಗ್ರಾಮ ಹಾಗೂ ೭ ತಾಂಡಗಳು ಸೇರಿ ಒಟ್ಟು ೧೧ ಯೋಜನೆಗಳನ್ನು ಜಲ ಜೀವನ ಮಿಷನ್‌ನಲ್ಲಿ ಆಯ್ಕೆಗೊಂಡಿದೆ. ಇದರಲ್ಲಿ ಪಾಂಡು ನಾಯಕ (ಪಡ್ಡು ನಾಯಕ ತಾಂಡ) ಗ್ರಾಮವು ೧೦೮ ಕುಟುಂಬಗಳಿದ್ದು, ಸದರಿ ತಾಂಡಕ್ಕೆ ಈ ಮೊದಲು ನೀರಿನ ಸಮಸ್ಯೆ ಸಾಕಷ್ಟು ಇದ್ದಿತು. ತಾಂಡದ ಜನರು ೧ ಕಿಲೋ ಮೀಟರ್ ಇರುವ ಬಾವಿಗೆ ಹೋಗಿ ನೀರನ್ನು ತರುವ ಪರಿಸ್ಥಿತಿ ಈ ಮೊದಲಿತ್ತು ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸದರಿ ತಾಂಡದಲ್ಲಿ ಜಲ ಜೀವನ ಮಿಷನ್ ಕುರಿತು ನಿರಂತರ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಗ್ರಾಮ ಪಂಚಾಯತ್ ಸದಸ್ಯರಿಗೆ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಯೋಜನೆಯಿಂದ ಸಿಗುವ ಸೌಲಭ್ಯಗಳ ಕುರಿತು ತಿಳಿಸಲಾಯಿತು.

ಜಲ ಜೀವನ ಮಿಷನ್ ಕೇಂದ್ರ ಪುರಸ್ಕೃತ ಯೋಜನೆ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಮನೆ-ಮೆನೆಗೆ ಕಾರ್ಯಾತ್ಮಕ ನಳ ಸಂಪರ್ಕ ನೀಡುವುದಾಗಿದ್ದು, ಈ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದ ಅನುದಾನ ಶೇ.೪೨.೫೦% ರಾಜ್ಯದ ಪಾಲು ಶೇ.೪೨.೫೦% ಗ್ರಾಮ ಪಂಚಾಯತ ವಂತಿಕೆ ಪಾಲು ಶೇ.೫% ಮತ್ತು ಸಮುದಾಯ ವಂತಿಕೆ (ಗ್ರಾಮಸ್ಥರಿಂದ) ಶೇ.೧೦% ( ಎಸ್ಸಿ/ಎಸ್ಟಿ ಗ್ರಾಮದಲ್ಲಿ ಶೇ.೫% ವಂತಿಕೆ) ಇವೆಲ್ಲಾ ಸೇರಿ ಒಟ್ಟು ಶೇ.೧೦೦% ರಷ್ಟು ಅನುದಾನ ಸದರಿ ಗ್ರಾಮಕ್ಕೆ ಬಿಡುಗಡೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಸಾರ್ವಜನಿಕ ವಂತಿಕೆ ಸಂಗ್ರಹಣೆಗಾಗಿ, ಪಂಡು ನಾಯಕ ತಾಂಡದಲ್ಲಿ ನಿರಂತರ ಸಭೆ ಜರುಗಿಸಿ, ಯೋಜನೆ ಬೇಕಾಗುವ ಸಮುದಾಯ ವಂತಿಕೆ ಶೇ.೫% ರಷ್ಟು ಸಂಗ್ರಹಣೆಗೆ ಪ್ರತಿಯೊಂದು ಮನೆಯಿಂದ ೭೫೦/-ರೂ.ಗಳನ್ನು ಹಾಕುವಂತೆ ತಾಂಡದ ಜನರಿಗೆ ತಿಳಿಸಿದಾಗ, ಮೊದಲು ನಾವು ಬಡವರು ಸಮುದಾಯ ವಂತಿಕೆ ನೀಡುವುದಿಲ್ಲವೆಂದು ಧ್ವನಿ ಎತ್ತಿದ್ದರು.

Contact Your\'s Advertisement; 9902492681

ತದನಂತರ ಸಾಕಷ್ಟು ಮನೆ-ಮೆನೆ ಭೇಟಿ ಮಾಡಿ ಮನವೊಲಿಕೆ ಮಾಡಿ, ಜಾಗೃತಿ ಮೂಡಿಸಲಾಯಿತು. ಪ್ರತಿ ಮನೆ-ಮೆನೆಗೂ ಪ್ರತಿಯೊಬ್ಬ ಸದಸ್ಯರಿಗೂ ೫೫ ಎಲ್.ಪಿ.ಸಿ.ಡಿ.ಯಂತೆ ಕುಡಿಯುವ ನೀರು ಬರುವುದಾಗಿ ಮನವೊಲಿಸಿದಾಗ, ೧೦೮ ಕುಟುಂಬಗಳು ೭೫೦/- ರೂಪಾಯಿ ನಂತೆ ಒಟ್ಟು ೮೧೦೦೦/- ರೂ.ಗಳನ್ನು ಸಮುದಾಯ ವಂತಿಕೆ ನೀಡಲಾಯಿತು. ತದನಂತರ ತಾಂಡದಲ್ಲಿ ಯೋಜನೆಯ ಕಾಮಗಾರಿ ಪ್ರಾರಂಭಗೊಂಡು ೪೦ ಲಕ್ಷದ ಮೊತ್ತದಲ್ಲಿ ಕೊಳವೆ ಬಾವಿ ನಿರ್ಮಿಸಿ, ರೈಸಿಂಗ್ ಮೈನ್ , ಹೆಚ್.ಡಿ.ಪಿ ಡಿಸ್ಟ್ರೀಬ್ಯೂಷನ್ ಪೈಪ್ ( ವಿತರಣಾ ಕೊಳವೆ), ೫೦ ಸಾವಿರ ಲೀಟರ್ ಓಹೆಚ್‌ಟಿ ನಿರ್ಮಾಣವಾಗಿದೆ, ಮತ್ತು ೧೦೮ ಕುಟುಂಬಗಳಿಗೆ ಮನೆ-ಮನೆಗೆ ಕಾರ್ಯಾತ್ಮಕ ಮನೆ ನಳ ಸಂಪರ್ಕ ನೀಡಲಾಗಿದೆ. ತಾಂಡದಲ್ಲಿ ಪ್ರಾಥಮಿಕ ಶಾಲೆ ಇದೆ ಹಾಗೂ ಒಂದು ಅಂಗನವಾಡಿ ಇದ್ದು ಇವುಗಳಿಗೂ ಸಹ ಕಾರ್ಯಾತ್ಮಕ ನಳ ಸಂಪರ್ಕ ನೀಡಲಾಗಿದೆ.

ತಾಂಡದಲ್ಲಿ ಅವರ ಭಾಷೆಯಲ್ಲಿ ಮನ ಒಲಿಸುವುದರಲ್ಲಿ ಕಲಮೂಡ್ ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ತುಕರಾಮ್ , ಹಾಗೂ ಮಹಾನಂದಾ ಕುಪೇಂದ್ರ, ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಅರವಿಂದ ಚವ್ಹಾಣ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಸಮ್ಮ ವೀರಣ್ಣ ಮಾಗಾ, ಉಪಾಧ್ಯಕ್ಷರಾದ ಶಾರದಾಬಾಯಿ ಸೋಮಲಾ ರವರ ಪಾತ್ರವು ಬಹಳಷ್ಟಿದೆ. ಹಾಗೂ ಸದರಿ ಯೋಜನೆ ಪ್ರಾರಂಭವಾದ ಮೇಲೆ ಕಲಬರುಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ದೀಲಿಶ್ ಶಶಿ, ಮತ್ತು ಜಿ.ಪಂ. ಉಪಕಾರ್ಯದರ್ಶಿಗಳಾದ ಎಂ.ಡಿ.ಇಸ್ಮಾಯಿಲ್ ಸರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಮಹ್ಮದ ಅಜೀಜುದ್ದೀನ್ ಕಲಬುರಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಬ್ದುಲ್ ಮನ್ನಾ ರವರ ನಿರಂತರ ವೀಕ್ಷಣೆ ಮಾಡಿದರು ಮತ್ತು ಪ್ರೋತ್ಸಾಹ ನೀಡಿದರು.

ಯೋಜನೆಗೆ ಅತ್ಯುತ್ತಮ ತಾಂತ್ರಿಕ ಕಾರ್ಯಮಾಡಿದ ಜೆಇ ರವರಾದ ರಾಜಕುಮಾರ ವಾಘಮೋರೆ ಹಾಗೂ ನಿರಂತರ ಸಭೆ ಕೈಗೊಳ್ಳುವ ಮೂಲಕ ಸದರಿ ತಾಂಡದ ಸಮುದಾಯ ವಂತಿಕೆ ಶೇ.೧೦೦% ರಷ್ಟು ಪೂರ್ಣಗೊಂಡು, ಯೋಜನೆಯು ಯಶಸ್ವಿಯಾಗಿದೆ. ಕಮಲಾಪೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಮಂಜುನಾಥ ರವರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಮುದಾಯ ವಂತಿಕೆ ಸಂಗ್ರಹಣೆ ಮಾಡುವುದಾಗಿ ಪಣ ತೊಟ್ಟಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರೊಂದಿಗೆ ಹಗಲಿರುಳು ಸಮುದಾಯ ವಂತಿಕೆ ಸಂಗ್ರಹಣೆಗೆ ಕಲಬುರಗಿ ಜಿಲ್ಲೆಯ ಜಲ ಜೀವನ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ ರಾಜು ಕಂಬಾಳಿಮಠ ಹಾಗೂ ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರಾದ ಶಿವಾನಂದ ಪವಾರ , ಶರಣಬಸವ ಮುಗಳಿ ಹಾಗೂ ಐ.ಎಸ್.ಐ ತಂಡದ ನಾಯಕರಾದ ಸಂತೋಷ ಮೂಲಗೆ, ಹೆಚ್.ಆರ್.ಡಿ. ಸಮಾಲೋಚಕ ಶ್ರವಣಕುಮಾರ ರವರ ಪಾತ್ರವು ಸಾಕಷ್ಟಿದೆ. ಪ್ರಸ್ತುತ ತಾಂಡದಲ್ಲಿ ಪ್ರತಿದಿನ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡುತ್ತಿರುವ ಮಹಿಳಾ ನೀರು ಘಂಟಿ ( ವ್ಯಾಟರ್ ಮ್ಯಾನ್) ಸಂಗೀತಾ ರವರನ್ನು ಸಹ ಮಾತನಾಡಿದಾಗ ಜಲ ಜೀವನ ಮಿಷನ್ ಯೋಜನೆಯಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ ಎಂದರು.

ತಾಂಡದ ಜನತೆ ತೋರಿಸುತ್ತಿರುವ ಕಾಳಜಿ ಮತ್ತು ನೀರು ಪೋಲಾಗಾದಂತೆ ಕ್ರಮ ವಹಿಸುತ್ತಿದ್ದಾರೆ ಮತ್ತು ಪ್ರಸ್ತುತ ತಾಂಡದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮದಡಿ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ ಮತ್ತು ಗ್ರಾಮದಲ್ಲಿ ಪ್ರತಿಯೊಂದು ಸರ್ಕಾರದಿಂದ ಬರುವ ಇತರೆ ಕಾರ್ಯಕ್ರಮಗಳಡಿ ಶೌಚಾಲಯ ನಿರ್ಮಾಣ , ಮಳೆ ನೀರು ಕೊಯ್ಲು, ಕೃಷಿಹೊಂಡ, ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿ ಮಾದರಿ ಗ್ರಾಮವನ್ನಾಗಿಸುವ ಕನಸ್ಸು ಎಲ್ಲರದಾಗಿದೆ.

ಪಡ್ಡು ನಾಯಕ ತಾಂಡದ ಕಾಮಗಾರಿ ಹಾಗೂ ಸಮುದಾಯ ವಂತಿಕೆ ಸಂಗ್ರಹಣೆ ಕುರಿತು ಬೀದರ ಜಿಲ್ಲೆಯ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಮತ್ತು ಸದಸ್ಯರು ಸದರಿ ತಾಂಡಕ್ಕೆ ಕ್ಷೇತ್ರ ಭೇಟಿ ನೀಡಿ, ಯೋಜನೆ ಬಗ್ಗೆ ತಿಳಿದುಕೊಂಡು ತಮ್ಮ ಗ್ರಾಮದಲ್ಲಿ ಇದೇ ತೆರನಾಗಿ ಸಮುದಾಯ ವಂತಿಕೆ ಸಂಗ್ರಹಣೆಗೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಪ್ರಸ್ತುತ ತಾಂಡದಲ್ಲಿ ಯಾರೆ ಬಂದು ಕೇಳಿದರು ಯೋಜನೆಗೆ ಯಶಸ್ವಿ ಕುರಿತು ಜನರು ಹೆಮ್ಮೆಯಿಂದ ಹೇಳುತ್ತಾರೆ.

ಡಾ.ರಾಜು ಕಂಬಾಳಿಮಠ
ಜಿಲ್ಲಾ ಯೋಜನಾ ವ್ಯವಸ್ಥಾಪಕರು
ಜಲ ಜೀವನ ಮಿಷನ್
ಜಿಲ್ಲಾ ಪಂಚಾಯತ್ ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here