ಕಾಂಗ್ರೆಸ್, ಬಿಜೆಪಿ ಮುಖಂಡರು ಕೀಳುಮಟ್ಟದ ರಾಜಕಾರಣ ಮಾಡುವುದು ಬಿಡಿ: ಗುತ್ತೇದಾರ

1
793

ಸೇಡಂ : ಮುಧೋಳ ಯುವಕರ ಹಲ್ಲೆಯ ಘಟನೆಯನ್ನು ಮಾಜಿ ಸಚಿವ ಡಾ ಶರಣಪ್ರಕಾಶ ಪಾಟೀಲ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ತಮ್ಮ ಕೀಳುಮಟ್ಟದ ರಾಜಕಾರಣಕ್ಕೆ ಬಳಸಿಕೊಳ್ಳುತಿದ್ದಾರೆ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಮುಧೋಳ ಘಟನೆಯಲ್ಲಿ ಕಾಂಗ್ರೆಸ್ , ಬಿಜೆಪಿ ಪಕ್ಷದ ಮುಖಂಡರು ಮುಗ್ದ ಜನರಿಗೆ ರೋಚ್ಚಿಗೆಬ್ಬಿಸಿ ಕಾಂಗ್ರೆಸ್ ಪಕ್ಷದವರು ಮುಧೋಳ ದಲ್ಲಿ ಅಧಿಕಾರಿಯನ್ನು ಅಮಾನತ್ತು ಮಾಡಿ ಎಂದು ಪ್ರತಿಭಟನೆ ಮಾಡಿದರೆ, ಬಿಜೆಪಿ ಅವರು ಅಧಿಕಾರಿಯ ಅಮಾನತ್ತು ಆದೇಶ ರದ್ದು ಮಾಡಬೇಕು ಎಂದು ಪ್ರತಿಭಟನೆ ಮಾಡಿದಾರೆ.

Contact Your\'s Advertisement; 9902492681

ಆದರೆ ಯಾರೊಬ್ಬರು ಕೂಡಾ ಪಕ್ಷ ಭೇಧ ಮರೆತು ಆ ಎರಡು ಸಮುದಾಯದವರನ್ನ ಕರೆಸಿ ಸಭೆ ಮಾಡಿ ಇಬ್ಬರಿಗೂ ಸಮಾಧಾನ ಮಾಡುವ ಕೆಲಸ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರು ಮಾಡಿಲ್ಲಾ ಎಂದು ಕಿಡಿಕಾರಿದ್ರು, ಅಲ್ಲದೇ ತೀವ್ರ ಗಾಯಗೊಂಡು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಬಡ ಕುಟುಂಬದ ಆರ್ಥಿಕ ಪರಿಸ್ಥಿತಿ ಬಗ್ಗೆ ಯೋಚನೆ ಮಾಡದೆ ಬರೇ ಮುಗ್ದ ಜನರ ಜತೆ ತಮ್ಮ ಕೀಳುಮಟ್ಟದ ರಾಜಕಾರಣ ಮಾಡುತಿದ್ದಾರೆ ಎಂದು ಕೈ-ಕಮಲ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ರು.

ಜೊತೆಗೆ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಪೋಲಿಸ್ ಅಧಿಕಾರಿಗೆ ಪಕ್ಷದ ಕಾರ್ಯಕರ್ತರೊಂದಿಗೆ ಬೈದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿರುವ ಯುವಕನಿಗೆ ಹಾಗೂ ಆತನ ಕುಟುಂಬ ಸದಸ್ಯರಿಗೆ ಆಸ್ಪತ್ರೆಯಲ್ಲಿ ಭೇಟಿಯಾಗಿದೇನೆ, ವೈದ್ಯರಿಗೂ ಭೇಟಿಯಾಗಿ ಚಿಕಿತ್ಸೆಯ ಕುರಿತು ಚರ್ಚಿಸಿದೇನೆ ಜೋತೆಗೆ ಯುವಕನ ಚಿಕಿತ್ಸೆಗೆ ವಯಕ್ತಿಕ ಧನ ಸಹಾಯ ಮಾಡುವುದಾಗಿ ಕುಂಟುಬಸದಸ್ಯರಿಗೆ ತಿಳಿಸಿದೇನೆ ಎಂದು ಬಾಲರಾಜ್ ಗುತ್ತೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಸ್ವರ್ಥಕ್ಕಾಗಿ ಕಿಳುಮಟ್ಟದ ರಾಜಕಾರಣ ಮಾಡುವುದನ್ನು ಬೀಟ್ಟು ಆ ಬಡ ಕುಟುಂಬದ ಯುವಕನ ಚಿಕಿತ್ಸೆಗೆ ವಯಕ್ತಿಕ ಧನ ಸಹಾಯ ಮಾಡಿ ಆತನ ಜೀವ ಉಳಿಸಲು ಮುಂದಾಗಿ , ನಾನು ಕೂಡ ಆತನ ಚಿಕಿತ್ಸೆಗೆ ವಯಕ್ತಿಕ ಧನ ಸಹಾಯ ಮಾಡುತ್ತೇನೆ. -ಬಾಲರಾಜ್ ಗುತ್ತೇದಾರ, ಜೆಡಿಎಸ್ ಮಖಂಡರು ಸೇಡಂ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here