ಅಫಜಲಪುರ: ವಿಜಯ ದಶಮಿ ಅಜ್ಞಾನದ ಆಚರಣೆ, ಇದು ನಮಗೆ ಬೇಡ. ಜಾತಿವಾದಿಗಳು ಮತ್ತು ವೈದಿಕರು ಬಸವಾದಿ ಶರಣರನ್ನು ಕೊಲೆ ಮಾಡಿದ ದಿನವಿದು ಎಂದು ತಾಲೂಕ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಬಸಣ್ಣಾ ಗುಣಾರಿ ಹೇಳಿದರು.
ಅಫಜಲಪುರ ಪಟ್ಟಣದ ಬಸವ ಮಂಟಪದಲ್ಲಿ ಮರುಣಮಯವೇ ಮಹಾನವಮಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಹರಳಯ್ಯನ, ಮದವಯ್ಯ ಶೀಲವಂತರನ್ನು ಕಾಯಿಸಿದ ಸಲಾಕಿಯಿಂದ ಕಣ್ಣುಗಳು ಕೀಳಿಸಿ ಅನೆ ಕಾಲಿಗೆ ಕಟ್ಟಿ ಎಳೇ ಹೊಟ್ಟೆ ಶಿಕ್ಷೆಯನ್ನು ಮಾಡಿ ಜೀವ ತಗೆದ ದಿನವಿದು.ಆದರಿಂದ ಇಂದು ಮರುಣವೇ ಮಹಾನವಮಿ ಎಂದು ಬಸವ ಶರಣರು ಆಚರಣೆ ಮಾಡಬೇಕಾದದ್ದು ಎಂದು ಹೇಳಿದರು.
ಶರಣರ ಬಲಿದಾನ ದಿನವೇ ಮಹಾನವಮಿ ಧರ್ಮದ ಉಳಿವಿಗಾಗಿ ಪ್ರಾಣವನ್ನು ಮಾಡಿದ ಶರಣರ ವಿಜಯೋತ್ಸವನ್ನು ಆಚರಣೆ ಮಾಡುವುದು ಸೂಕ್ತ. – ಡಾ. ಸಿ ವಿ ಟಕ್ಕಳಕಿ ಅಫಜಲಪುರ.
ಕಾರ್ಯಕ್ರಮದಲ್ಲಿ ಶರಣ ಶ್ರೀಮಂತ ಬಿರೆದಾರ ಗುರು ಚಾಂದಕೋಟೆ ಮಾತನಾಡಿದರು. ಶರಣ ಚಿಂತಕ ಶರಣ ಅಮೃತರಾವ ಪಾಟೀಲ ಅವರು ಮಾತನಾಡಿ ಮರಣವೇ ಮಹಾನವಮಿ ಕುರಿತು ವಿಷೇಶ ಅನುಭಾವ ಗಳನ್ನು ನೀಡಿದರು.ಶರಣೆ ಸಹೋದರಿ ಶಾಂತಬಾಯಿ ಪಾಟೀಲ ಅವರ ಶರಣರ ವಚನ ದೊಂದಿಗೆ ಕಾರ್ಯಕ್ರಮ ಚಾಲನ ನೀಡಲಾಯಿತು.