ಮಾಜಿ ಪ್ರಧಾನಿ ದೇವೆಗೌಡರ ನೇತೃತ್ವದಲ್ಲಿ ಶೀಘ್ರದಲ್ಲೇ ಹೋರಾಟ

0
24

ಅಫಜಲಪುರ: ತಾಲೂಕಿನ ಸೊನ್ನ ಗ್ರಾಮದಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಬ್ಯಾರೇಜ್ ೧೯೯೨ ರಲ್ಲಿ ೯೪ ಕೋಟಿ ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಇಲ್ಲಿಯವರಿಗೆ ೯೦೫ ಕೋಟಿ ಖರ್ಚು ಆದರೂ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿದಿಲ್ಲ ಎಂದು ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ ಆರೋಪಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶನಿವಾರದಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರ ಎಚ್ ಡಿ.ದೇವಗೌಡವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಭೀಮಾ ಏತ ನೀರಾವರಿ ಯೋಜನೆಗೆ ಆದ್ಯತೆ ನೀಡಿ ಪ್ರಥಮ ಭಾರಿಗೆ ಅನುದಾನ ಬಿಡುಗಡೆ ಮಾಡಿದರು.

Contact Your\'s Advertisement; 9902492681

ಆದರೆ ಅವರ ನಿರೀಕ್ಷಿಗೆ ತಕ್ಕಂತೆ ಈ ಭಾಗದಲ್ಲಿ ಜನ ಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಹಾಗೂ ರಾಜ್ಯ ಸರಕಾರ ನಿರ್ಲಕ್ಷ್ಯದಿಂದ ಈ ಭಾಗದಲ್ಲಿ ಸಮರ್ಪಕವಾಗಿ ನೀರಾವರಿ ಬಳಕೆ ಮಾಡಿಕೊಳ್ಳಲು ಆಗಿಲ್ಲ ಹೀಗಾಗಿ ಮಾಜಿ ಪ್ರಧಾನಿ ದೇವಗೌಡರನ್ನು ಶೀಘ್ರದಲ್ಲೇ ತಾಲೂಕಿಗೆ ಕರೆಸಿ ಸಾವಿರಾರು ರೈತರನ್ನಿ ಸೇರಿಸಿ ಬೃಹತ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಚಾವತ್ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರು ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ೩೬ ಸಾವಿರ ಹೆಕ್ಟರ್ ಬೆಳೆ ಹಾನಿಯಾಗಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಸರ್ವೆ ಮಾಡುತ್ತಿದ್ದಾರೆ. ಸರ್ವೆ ಮುಗಿದ ಕೂಡಲೇ ರೈತರಿಗೆ ಪರಿಹಾರ ನೀಡಬೇಕು.

ಕಳೆದ ವರ್ಷ ೮ ಸಾವಿರ ಹೆಕ್ಟರ್ ಬೆಳೆ ಹಾನಿಯಾಗಿತ್ತು. ಕಳೆದ ವರ್ಷದ ಬೆಳೆ ಹಾನಿಯ ಪರಿಹಾರವನ್ನು ಸಹ
ನೀಡಿಲ್ಲ.

ಇನ್ನೂ ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರವಾಗಬೇಕಾಗಿದೆ. ಅದು ಸಮರ್ಪಕವಾಗಿ ಆಗಿಲ್ಲ ಸರ್ಕಾರ, ಜನಪ್ರತಿನಿಧಿಗಳು ಮುತುವರ್ಜಿ ತೋರಿಸಿ ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಎರಡು ಕಬ್ಬಿನ ಕಾರ್ಖಾನೆಗಳಿವೆ. ಹೀಗಾಗಿ ಕಬ್ಬಿಗೆ ಪ್ರತಿ ಟನ್‌ಗೆ ೩೫೦೦ ರೂಪಾಯಿ ದರ ನಿಗದಿ ಮಾಡಬೇಕು. ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್‌ಆರ್‌ಪಿ ದರದಂತೆ ಕಬ್ಬಿಗೆ ಬೆಲೆ ನೀಡಬೇಕು.-ಜಮೀಲಗೌಂಡಿ ( ಅಧ್ಯಕ್ಷರು ಜೆಡಿಎಸ್ ಅಫಜಲಪುರ)

ಸೊನ್ನ ಬ್ಯಾರೇಜ್‌ನಿಂದ ಬಳೂಂಡಗಿ ಹಾಗೂ ಅಳ್ಳಗಿ(ಬಿ) ಮುಖ್ಯ ಕಾಲುವೆಗಳಿಗೆ ಸರಿಯಾಗಿ ನೀರು ಹರಿದಿಲ್ಲ. ಇನ್ನೂ ಉಪ ಕಾಲುವೆಗಳು ಹಾಗೂ ರೈತರ ಹೊಲಗಳಿಗೆ ನೀರು ಹರಿದಿದೆ ಎನ್ನುವುದು ಶುದ್ದ ಸುಳ್ಳು., ಈಗ ಹೊಸದಾಗಿ ಬಂದರವಾಡ ಬಳಿ ಬ್ಯಾರೇಜ್ ನಿರ್ಮಾಣವಾದರೆ ೨೫ ಗ್ರಾಮಗಳ ೪೦ ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ.- ಶಿವಕುಮಾರ ನಾಟೀಕಾರ ( ಜೆಡಿಎಸ್ ಮುಖಂಡ ಹಾಗೂ ಹೋರಾಟಗಾರರು ಅಫಜಲಪುರ)

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಜಮೀಲ ಗೌಂಡಿ, ಮುಖಂಡರಾದ ಮಲ್ಲಿಕಾರ್ಜುನ ಸಿಂಗೆ, ಶಂಕರಗೌಡ ಪಾಟೀಲ್, ಅಮರಸಿಂಗ್ ರಜಪೂತ, ಅಮೂಲ ಮೋರೆ, ಅಶೋಕ ದೊಡ್ಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here