ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಸದೃಢ : ಮತೀನ ಪಟೇಲ

0
15

ಅಫಜಲಪುರ: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚುತ್ತದೆ ಅಲ್ಲದೇ ಆರೋಗ್ಯ ಚೈತನ್ಯದಿಂದ ಕೂಡಿರುತ್ತದೆ ಯುವಕರು ಹೆಚ್ಚು ಹೆಚ್ಚು ಕ್ರೀಡೆಗಳನ್ನು ಆಡಬೇಕು ಎಂದು ಮಾಜಿ ಜಿಪಂ ಸದಸ್ಯ ಮತೀನ್ ಪಟೇಲ ಹೇಳಿದರು.

ಅಫಜಲಪುರ ಪಟ್ಟಣದ ಜೈ ಭೀಮ ಬಡವಾಣೆಯಲ್ಲಿ ಎಮ್.ಎ.ಪಿ. ಗ್ರೂಪ್ಸ್ ವತಿಯಿಂದ ಯುವಕರು ಹಮ್ಮಿಕೊಂಡ ತಾಲೂಕ ಮಟ್ಟದ ವಾಲಿಬಾಲ ಟೋರ್ನಾಮೆಂಟ್ ಕಾರ್ಯಕ್ರಮವನ್ನು ವಾಲಿಬಾಲ್ ಸರ್ವಿಸ್ ಮಾಡುವ ಮೂಲಕ ಕ್ರೀಡೆಗೆ ಚಾಲನೆ ನೀಡಿ ಮಾತನಾಡಿದ ಅವರು ಇಂತಹ ಆಟಗಳನ್ನು ಆಡುವುದರಿಂದ ಮನಸ್ಸು ಕೇಂದ್ರಿಕರಿಸುತ್ತದೆ ಆರೋಗ್ಯ ಉತ್ತಮವಾಗಿರುತ್ತದೆ ಹೀಗಾಗಿ ಯುವಕರು ಆಟಗಳನ್ನು ಆಡಬೇಕು ಮತ್ತು ತಾಲೂಕ ಮಟ್ಟ ದಿಂದ ಜಿಲ್ಲಾ ಹಾಗೂ ರಾಜ್ಯ , ರಾಷ್ಟ್ರ ಮಟ್ಟದವರಿಗೆ ಸ್ವರ್ದೆ ಮಾಡಿ ತಾಲೂಕಿನ ಹೆಸರು ತರಬೇಕು ಎಂದು ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು.

Contact Your\'s Advertisement; 9902492681

ಕ್ರೀಡೆಗಳು ಹಿಂದಿನಿಂದಲೂ ಇವೆ ಕ್ರೀಡೆಗೆ ಬಹು ದೊಡ್ಡ ಇತಿಹಾಸವಿದೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಕಡೆಮೆಯಾಗುತ್ತಿವೆ, ಯುವಕರು ಮೊಬೈಲ ಕ್ರೀಡೆಗಳಲ್ಲಿ ಮಗ್ನರಾಗುತ್ತಿದ್ದಾರೆ ಅದರಿಂದ ಹೊರಬಂದು ವಾಲಿಬಾಲ , ಕಬ್ಬಡಿ, ಕ್ರಿಕೆಟ್ ಅಂತಹ ಕ್ರೀಡೆಗಳು ಆಡಬೇಕು ಇದರಿಂದ ಸದೃಢ ದೇಹದಲ್ಲಿ ಸದೃಢ ಮನಸ್ಸು ಚಿಮ್ಮುತ್ತದೆ .-  ವಿಠಲ ನಾಟೀಕಾರ (ಅಧ್ಯಕ್ಷರು ಘತ್ತರಗಾ ಗ್ರಾಪಂ )

ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚು ಹೆಚ್ಚು ಮೊಬೈಲಗಳಲ್ಲಿ ದುಷ್ಚಟಗಳಲ್ಲಿ ತಲ್ಲೀನರಾಗುತ್ತಿದ್ದಾರೆ ಇದರಿಂದ ಆರೋಗ್ಯ ಸಮಾಜ ಕಟ್ಟಲು ಸಾಧ್ಯವಿಲ್ಲ ಅದರಿಂದ ಹೊರಬಂದು ಯುವಕರು ಹೊರಾಂಗಣ ಹಾಗೂ ಒಳಾಂಗಣ ಆಟಗಳನ್ನು ಆಡುವದರಿಂದ ಯುವಕರಲ್ಲಿ ಮಾನಿಸಿಕ ಸದೃಢ ಆಗುವದರೊಂದಿಗೆ ಆರೋಗ್ಯ ಸಮಾಜ ಕಟ್ಟುತ್ತಾರೆ.- ಲಚ್ಚಪ್ಪ ಜಮಾದಾರ ( ಅಧ್ಯಕ್ಷರು ದ್ರಾಕ್ಷಿ ಬೆಳೆಗಾರರ ಸಂಘ ಅಫಜಲಪುರ)

ಕಾರ್ಯಕ್ರಮದ ಅಧ್ಯಕ್ಷತೆ ವಿಠಲ ನಾಟೀಕಾರ ವಹಿಸಿದರು , ಪಂಚಶೀಲ ಧ್ವಜಾರೋಹಣವನ್ನು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಮಾಡಿದರು.

ನೀಲಿ ಧ್ವಜಾರೋಹಣ ಪುರಸಭೆ ಸದಸ್ಯ ಯಮನಪ್ಪ ಬಾಸಗಿ ನೆರವೇರಿಸಿದರು, ಕ್ರೀಡಾ ಧ್ವಜಾರೋಹಣ ಪರುಶರಾಮ ಕುರಮಲ್ ಅವರು ಮಾಡಿದರು,ನೇತೃತ್ವವನ್ನು ಮುಖಂಡ ಅಶೋಕ ಗುಡ್ಡಡಗಿ ವಹಿಸಿದರು, ಪೋಟೋ ಪೋಜೆ ಸುಧಾಕಾರ ಎಸ್.ಕೆ. ನೆರವೇರಿಸಿದರು.

ಮುಖಂಡರಾದ ನಾಗಪ್ಪ ಆರೇಕಾರ, ಶರಣು ಗುಡ್ಡಡಗಿ, ಶರಣು ಕೊಳಗೇರಿ, ಗೌತಮ ಸಕ್ಕರಗಿ, ಮಹಾನಿಂಗ ಅಂಗಡಿ, ಮಾಜೀದ ಪಟೇಲ, ರಾಜು ಆರೇಕಾರ, ಹಣಮಂತ ಚೌಡಾಪುರ, ಪವನ ಆರೇಕಾರ, ಶ್ರೀಶೈಲ ಕುಡಕಿ, ಶಿಕ್ಷಕ ಗುರುಪ್ಪ ಅಳಗಿ, ಚಂದ್ರಕಾಂತ ಹೊಸ್ಮನಿ, ಹುಚ್ಚಪ್ಪ ಬಂದರವಾಡ, ಸಚಿನ ಕೋಳಗೇರಿ, ರಮೇಶ ಸೂಲೆಕಾರ, ಗುರುಶಾಂತ ಅಳ್ಳಗಿ, ಸೈಬಣ್ಣ , ದೈಹಿಕ ಶಿಕ್ಷಕ ಅಂಬಣಾ ಕುದರಿ, ಶರಣು ಗುಡ್ಡಗಿ, ಸೇರಿದಂತೆ ಕ್ರೀಡಪಟುಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here