ಕಲಬುರಗಿ: ಕರ್ನಾಟಕ ಪ್ರಾದೇಶಿಕ ಕೋಲಿ ಸಮಾಜ ಕಬ್ಬಲಿಗ ಮೊಗವೀರ ,ಅಂಬಿಗ, ಬೆಸ್ತ ವಿವಿಧ ಪರ್ಯಾಯ ಪದಗಳು ಸಮಾಜದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ 17ರಂದು ನಡೆದ ಸಭೆಯಲ್ಲಿ ಗುರುನಾಥ ಭಗವಂತಪ್ಪ ಹೇರೂರು ರವರ ಸಮರ್ಪಣೆಯ ಭಾವನೆ ಹಾಗೂ ಸಂಘಟನಾತ್ಮಕ ರುಚಿ ಗಣನೆಗೆ ತೆಗೆದುಕೊಂಡು ಕಲ್ಯಾಣ ಕರ್ನಾಟಕ ವಿಭಾಗಿಯ ಪ್ರದೇಶ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ದತ್ತಾತ್ರೆಯ ರೆಡ್ಡಿ ,ಹೇರೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಜಶೇಖರ್ ತಲಾರಿ ಕೋಲಿ ಸಮಾಜದ ಯುವ ಮುಖಂಡರಾದ ಡಾ.ಸರ್ದಾರ್ ರಾಯಪ್ಪ ಸೊಪ್ಪಿ ಇತರರು ಇದ್ದರು.