ಚಿಂಚೋಳಿ: ಚಿಂಚೋಳಿ ತಾಲೂಕಿನಲ್ಲಿ ವೀರಶೈವ ಸಮಾಜದ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಚಿಂಚೋಳಿ ಪಟ್ಟಣ ಮತ್ತು ಚಿಂಚೋಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವೀರಶೈವ ಸಮಾಜಕ್ಕೆ ರುದ್ರಭೂಮಿಗೆ ಸ್ಥಳ ನೀಡಬೇಕೆಂದು ಕಂದಾಯ ಸಚಿವರಾದ ಆರ್ ಅಶೋಕ್ ಗೆ ವೀರಶೈವ ಸಮಾಜದ ಚಿಂಚೋಳಿ ಘಟಕದ ಮುಖಂಡರು ಸಚಿವರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.
ತಾಲೂಕ ಗಡಿಕೇಶ್ವರ್ ಗ್ರಾಮಕ್ಕೆ ಸಚಿವರು ಭೇಟಿ ನೀಡಿದ ವೇಳೆಯಲ್ಲಿ ಸಮಜಾದ ಮುಖಂಡರು ರುದ್ರಭೂಮಿ ಸ್ಥಳವನ್ನು ಮಂಜೂರು ಮಾಡಬೇಕೆಂದು ಘಟಕದ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ವೀರಶೈವ ಸಮಾಜದ ಮುಖಂಡರಾದ ಆನಂದ್ ಹಿತ್ತಲ್, ಶಂಕರ ಶಿವಪುರಿ, ನಾಗರಾಜ ಸೀಳಿನ್, ನಾಗರಾಜ ಮಲಕೂಡ, ಕಾಶಿನಾಥ ಪಾಟೀಲ್, ಹಣಮಂತ ಕೋರೆ, ಅಂಬಾರಾವ ಕಲಬುರಗಿ ಸೇರಿದಂತೆ ಅನೇಕ ವೀರಶೈವ ಸಮಾಜದ ಮುಖಂಡರು ಇದ್ದರು