“ವಿಜಯಮುಖಿ” ಕೃತಿ ಜನಾರ್ಪಣೆ 14ರಂದು

0
61

ಕಲಬುರಗಿ: ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರ ನಾಲ್ಕು ದಶಕಗಳ ಸಾಮಾಜಿಕ ಸೇವೆ ಪರಿಚಸುವ ವಿಜಯಮುಖಿ ಕೃತಿ ಜನಾರ್ಪಣೆ ಸಮಾರಂಭ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಜು. ೧೪ರಂದು ಬೆಳಗ್ಗೆ ೧೦ ಗಂಟೆಗೆ ಜರುಗಲಿದೆ ಎಂದು ತೇಗಲತಿಪ್ಪಿ ಗೆಳೆಯರ ಬಳಗದ ಪರಮೇಶ್ವರ ಶಟಕಾರ, ರವೀಂದ್ರ ಭಂಟನಳ್ಳಿ ತಿಳಿಸಿದ್ದಾರೆ.

Contact Your\'s Advertisement; 9902492681

ವಿಶ್ವಜ್ಯೋತಿ ಪ್ರತಿಷ್ಠಾನ, ವಚನ ಸಾಹಿತ್ಯ ಅಕಾಡೆಮಿಯಂತಹ ಸಾಂಸ್ಕೃತಿಕ ಸಂಘಟನೆಗಳನ್ನು ಹೆಗಲಿಗೇರಿಸಿಕೊಂಡು ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿರುವ ವಿಜಯಕುಮಾರ ತೇಗಲತಿಪ್ಪಿ ಅವರ ೪೦ನೇ ಜನುಮ ದಿನದ ಅಂಗವಾಗಿ ಈಗಾಗಲೇ ತಿಂಗಳ ಪರ್ಯಂತ ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ “ನಾಡಿನೋಡಾಟದಲ್ಲಿ ನಲ್ವತ್ತರ ನಡಿಗೆ” ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸದಾ ಕ್ರಿಯಾಶೀಲವಾಗಿರುವ ವಿಜಯಕುಮಾರ ತೇಗಲತಿಪ್ಪಿ ಅವರಿಗೆ ಇದೀಗ ಭರ್ತಿ ೪೦ರ ಪ್ರಾಯ. ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಜನಜಾಗೃತಿಗೆ ಕಾರಣರಾದ ಇವರನ್ನು ಕುರಿತು ಹಲವು ಸಾಹಿತಿಗಳು ಬರೆದ, ಲೇಖಕ ಜಗನ್ನಾಥ ತರನಳ್ಳಿ ಸಂಪಾದಕತ್ವದ “ವಿಜಯಮುಖಿ” ಕೃತಿಯನ್ನು ಹಾರಕೂಡ ಹಿರೇಮಠ ಸಂಸ್ಥಾನದ ಡಾ. ಚನ್ನವೀರ ಶಿವಾಚಾರ್ಯರು ಜನಾರ್ಪಣೆಗೊಳಿಸಲಿದ್ದಾರೆ.

ಬಸವಕಲ್ಯಾಣ ತಹಸೀಲ್ದಾರರಾದ ಸಾವಿತ್ರಿ ಶರಣರು ಸಲಗರ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಪತ್ರಕರ್ತ, ಲೇಖಕ ಶಿವರಂಜನ್ ಸತ್ಯಂಪೇಟೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಕಲ್ಯಾಣಕುಮಾರ ಶೀಲವಂತ, ರವೀಂದ್ರಕುಮಾರ ಭಂಟನಳ್ಳಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here