ಕಲಬುರಗಿ: ನಗರದ ನಗರದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ (ಸಿಐಟಿಯು) ಹಾಗೂ ಕಲಬುರಗಿ,ಯಾದಗಿರಿ ಮತ್ತು ಬೀದರ ೩ ಜಿಲ್ಲೆಗಳ ಜಂಟಿಯಾಗಿ ಕಾಮ್ರೆಡ ಮಾರುತಿ ಮಾನಪಡೆ ರವರ ಮೊದಲ ವರ್ಷದ ಪುಣ್ಯಸ್ಮರಣೆ ನಿಮಿತ್ತ ಹುತಾತ್ಮ ದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಳಲಾಯತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿ ಜಿಲ್ಲಾ ಗ್ರಾಮ ಪಂಚಾಯತಿ ನೌಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ ಹರಸೂರ ರವರ ಅಧ್ಯಕ್ಷತೆ ವಹಿಸಿದರು.
ಸಭೆಗೆ ಮುಖ ಅತಿಥಿಗಳಾಗಿ ಆಗಮಿಸಿದ ರಾಜ್ಯ ಸಮಿತಿ ಉಪಾಧ್ಯಕ್ಷ ಕಾಮ್ರೆಡ ಬಿ.ಎಂ. ನಾಡಗೌಡರು ಅವರು ಮಾತನಾಡಿ
ಗ್ರಾ.ಪಂ.ನೌಕರರಿಗೆ ಮುಖಂಡರಲ್ಲದೇ, ರೈತರ ಬಗ್ಗೆ,ಕೂಲಿಕಾರರ ಬಗ್ಗೆ,ಬಡವರ ಬಗ್ಗೆ ಹೆಚ್ಚಿನ ಕಾಳಜಿ ಉಳ್ಳವರಾಗಿದ್ದರು. ಪಂಚಾಯತಿ ನೌಕರರಿಗೆ ಕನಿಷ್ಠ ವೇತನ ಕೊಡಿಸಲು ೨೦೦೯ ರಲ್ಲಿ ಲಾಟಿ ಏಟು ತಿಂದು ೧೯ ದಿನ ಜೈಲು ವಾಸ ಅನುಭವಿಸಿದರು.
ಬಡ್ತಿಗೆ ಸರಕಾರದಲ್ಲಿ ಅವಕಾಶ ಇಲ್ಲದಿದ್ದರೂ ಕೂಡ ಹೋರಾಟದ ಮೂಲಕ ಬಿಲ್ ಕಲೆಕ್ಟರ್ ಗಳಿಂದ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವರೆಗೆ ಬಡ್ತಿ ಮಾಡಿಸಲು ಸಂಘದ ರಾಜ್ಯ ಅಧ್ಯಕ್ಷರಾಗಿದ್ದ ಕಾಮ್ರೆಡ ಮಾರುತಿ ಮಾನಪಡೆ ರವರೆ ಕಾರಣ ಎಂದರು.ಈ ರೀತಿ ಸಭೆ-ಸಮಾರಂಭ ದಲ್ಲಿ ಮಾತನಾಡಿದರೆ ಅಗಲಿದ ನಾಯಕರಿಗೆ ಗೌರವ ಗೊಡುವುದು ಅಭಿಮಾನ ಅಲ್ಲ .ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು ಆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅವರಿಗೆ ನಾವು ಮುಂದೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದಿದ್ದೆ ಆದಲ್ಲಿ ಅವರ ಕನಸು ನನಸು ಮಾಡಲು ಎಲ್ಲರೂ ಒಗ್ಗಟ್ಟಾಗಿರೋಣ ಎಂದು ಕರೆ ಕೊಟ್ಟರು.
ನನ್ನನ್ನು ಪಂಚಾಯತ ನೌಕರರ ಸಂಘದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಮಾಡಿ ರಾಜ್ಯ ಮಟ್ಟದಲ್ಲಿ ಪರಿಚಯಿಸುವಂತೆ ಮಾಡಿದ್ದು ಮಾನಪಡೆ ರವರು ಮಾನಪಡೆ ರವರು ಗ್ರಾಮ ಪಂಚಾಯತಿ ನೌಕರರ ಬಗ್ಗೆ ಮಾಡಿದ ಹೋರಾಟದ ಬಗ್ಗೆ ಮಾತನಾಡಿದರು.
ರಾಜ್ಯ ಜಂಟಿ ಕಾರ್ಯದರ್ಶಿ ಶಿವಾನಂದ ಕವಲಗಾ ಬಿ ರವರು ಮಾತನಾಡಿ ನಾನು ೨೦೦೮ ರಿಂದ ಸಂಘದಲ್ಲಿ ಸಕ್ರಿಯವಾಗಿ ಸಂಘಟನೆಯಲ್ಲಿ ಭಾಗವಹಿಸುತ್ತಿದ್ದು ಮಾನಪಡೆ ರವರಿಂದ ಹಲವಾರು ಹೋರಾಟದ ಬಗ್ಗೆ ಮತ್ತು ಹೋರಾಟದಿಂದ ಗ್ರಾಮ ಪಂಚಾಯತಿ ನೌಕರರಿಗೆ ಆಗಿರುವ ಸೌಲಭ್ಯ ಮತ್ತು ನೌಕರರಿಗೆ ವೇತನ,ಬಡ್ತಿ,ನಿವೃತ್ತಿ ವೇತನ,ರಜೆ ಇನ್ನಿತರ ಸೌಲಭ್ಯಗಳನ್ನು ಸಂಘದ ರಾಜ್ಯ ಅಧ್ಯಕ್ಷರಾಗಿ ಕಾಮ್ರೆಡ ಮಾರುತಿ ಮಾನಪಡೆ ರವರು ಹಗಲಿರುಳು ಮಾಡಿದ ಪ್ರಯತ್ನವನ್ನು ತಿಳಿಸಿದರು.
ಅವರು ಅಗಲಿದ ನಂತರ ನಮಗೆ ಸಾಕಷ್ಟು ತೊಂದರೆ ಆದರೂ ಕೂಡ ಅವರು ಹಾಕಿಕೊಟ್ಟ ಮಾರ್ಗದಲ್ಲಿ ರಾಜ್ಯ ಸಮಿತಿ ಮೂಲಕ ಮಾಡಿದ ಹೋರಾಟದಿಂದ ನಾವು ಪಡೆದುಕೊಳ್ಳಲು ಸದಾ ಸಿದ್ದರಾಗಿರಲು ಕರೆ ಕೊಟ್ಟರು. ಅವರಿಂದ ಕಲಿತದ್ದು ಕೆಲವು ಮಾತ್ರ ಇನ್ನೂ ಕಲಿಯಬೇಕಾದದ್ದು ಸಾಕಷ್ಟು ಇತ್ತು ಆದರೆ ನಮ್ಮಿಂದ ಅಗಲಿ ಅನಾಥನ್ನಾಗಿ ಬಿಟ್ಟು ಹೋದರು ಎನ್ನುವಾಗ ಕಣ್ಣಂಚಿನಲ್ಲಿ ನೀರು ಬಂತು.ಕೊನೆ ದಿನಗಳಲ್ಲಿ ಒಂದು ವಾರದಿಂದ ತವರೂರು ಅಂಬಲಗಿ ಗ್ರಾಮಕ್ಕೆ ಹೋಗಲು ೧೫ ದಿನ ಪ್ರಯತ್ನ ಮಾಡಿದರೂ ಕೂಡ ಮಳೆ ಅವರನ್ನು ಹೋಗಲು ಬಿಡಲಿಲ್ಲ.
ಕೊನೆ ದಿನಗಳಲ್ಲಿ ತವರೂರಿಗೆ ಜೀವಂತವಾಗಿ ಹೋಗದೇ ಹುತಾತ್ತರಾಗಿ ತವರೂರಿಗೆ ಹೋಗಿರುವ ಪ್ರಸಂಗ ಕಣ್ಣೆದುರಿಗೆ ಕಂಡ ಪ್ರಸಂಗ ಕಾರ್ಯಕ್ರಮದಲ್ಲಿ ಕಣ್ಣೆದುರಿಗೆ ತಂದರು. ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳಾದ ಗಾಲಿಬಸಾಬ ಯಾದಗಿರಿ, ಪಾರ್ವತಿ ಕೆಲ್ಲೂರ, ಚಂದು ಸ್ವಾಮಿ ಬೀದರ, ಮಲ್ಲಣ್ಣ ಯಾದಗಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕಡಣಿ ಸ್ವಾಗತಿಸಿ ನಿರೂಪಿಸಿದರು, ಜೈಭೀಮ ನಂದೀಕೂರ ವಂದಿಸಿದರು.