ಕಲಬುರಗಿ: ಇಲ್ಲಿನ ತಿಮ್ಮಾಪುರಿ ಚೌಕ್ ನಲ್ಲಿ ನಗರ ಸಂಚಾರಿ ಪೊಲೀಸ್ ಇಲಾಖೆಯಿಂದ ಸಂಚಾರಿ ನಿಯಮ ಪಾಲನೆಗೆ ಸಾರ್ವಜನಿಕರಿ ಮಾಹಿತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮನ ಜರುಗಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿ ಎಸಿಪಿ ವಿರೇಶ್ ಕರಡಿಗುಡ್ ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಸಂಚಾರಿ ನಿಯಮ ಪಾಲನೆಯಿಂದ ವಾಹನ ಸವಾರರು ತಮ್ಮ ಜೀವ ರಕ್ಷಿಸಿಕೊಳ್ಳುವುದರೊಂದಿಗೆ ಜನಸ್ನೇಹಿ ಸಂಚಾರ ಕಾಪಾಡಿ ಎಂದು ಕರೆ ನೀಡಿ, ಸಂಚಾರಿ ನಿಯಮ ಉಲ್ಲಂಘನೆಯಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತವೆ, ಸಾರ್ವಜನಿಕರ ಸ್ವಲ್ಪ ನಿಯಮಗಳ ಬಗ್ಗೆ ಕಾಳಜಿ ವಹಿಸದಿರುವುದರಿಂದ ಅಪಘಾತ ಸಂಭವಿಸಿ ನಂತರ ಪಚ್ಚಾತಾಪ ಪಡುವಂತಹ ಆಗಬಾರದೆಂದು ಅವರು ತಿಳಿಸಿದರು.
ಪ್ರತಿಯೊಬ್ಬ ವಾಹನ ಸವಾರರು ಸಂಚಾರಿ ನಿಯಮ ಪಾಲನೆಯಿಂದ ದಂಡ ಕಟ್ಟುವುದರಿಂದ ದುರುಉಳಿಯುದರ ಜೊತೆ ಹೆಮ್ಮೆಯಿಂದ ವಾಹನ ಓಡಿಸಬಹುದು, ಸಾವಿರ ಸಾವಿರ ಹಣ ಖರ್ಚು ಮಾಡಿ ಕೆಲವೇ ಹಣಕ್ಕಾಗಿ ಸಂಚಾರಿ ನಿಯಮ ಉಲ್ಲಂಘನೆಯಿಂದ ತಮ್ಮಗೆ ತಾವೇ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡದೇ ಸಂಚಾರಿ ನಿಯಮ ಪಾಲನೆಗೆ ಒತ್ತು ನೀಡಿ ಎಂದು ಸಾರ್ವಜನಿಕರಿಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ಸಂಚಾರಿ ನಿಯಮ ಉಲ್ಲಂಘನೆ ದರ ಪಟ್ಟಿಗಳ ಕರ ಪತ್ರ ಬಿಡುಗಡೆಗೊಳಿಸಿ ಹಂಚಲಾಯಿತು.
ಈ ಸಂದರ್ಭದಲ್ಲಿ ಸಂಚಾರಿ ಪಿಐ. ಮಹಾದೇವ ಪಂಚಮುಖಿ, ಮಹೇಶ್ ಗೌಡ ಪಾಟೀಲ್, ಪಿಎಸ್.ಐ ಹುಸೇನ್ ಬಾಷಾ, ಸಂಚಾರಿ ಪಿಎಸ್.ಐ ಭಾರತಿಬಾಯಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಮುಂತಾದವರು ಇದ್ದರು.