ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಬಿ.ಎ. & ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿಯ ಜಂಟಿ ನಿರ್ದೆಶಕರಾದ ಪ್ರೊ. ಸಿ.ಎಸ್. ಸಾಲಿಮಠ ಮಾತನಾಡುತ್ತ ವಿದ್ಯಾರ್ಥಿಗಳ ಜೀವನದಲ್ಲಿ ನಂಬಿಕೆ ಹಾಗೂ ಭರವಸೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಯು ತನ್ನ ಪ್ರಯತ್ನದ ಮೇಲೆ ನಂಬಿಕೆ ಇಟ್ಟು ಸಕಾರಾತ್ಮಕವಾಗಿ ತನ್ನ ಪ್ರಯತ್ನವನ್ನು ಮುಂದುವರೆಸಿದರೆ ಆತನು ತನ್ನ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ. ಡಾ. ಅಂಬೇಡ್ಕರ ಕಲಾ & ವಾಣಿಜ್ಯ ಮಹಾವಿದ್ಯಾಲಯ ಕಲಬುರಗಿ ನಗರದಲ್ಲಿ ಪ್ರತಿಷ್ಠಿತ ಮಹಾವಿದ್ಯಾಲಯವಾಗಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸುವುದರೊಂದಿಗೆ, ಕಾಲೇಜಿಗೆ ಕೀರ್ತಿಯನ್ನು ತರಬೇಕೆಂದು ನುಡಿದರು.
ಇನ್ನೊರ್ವ ಅತಿಥಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಎಮ್. ಬಿ. ನಗರ ಪೊಲೀಸ ಠಾಣೆಯ ಸರ್ಕಲ್ ಇನ್ಸ್‌ಪೇಕ್ಟರ್ ಚಂದ್ರಶೇಖರ ತಿಗಡಿ ಅವರು ಮಾತನಾಡುತ್ತಾಶ ವಿದ್ಯಾಭ್ಯಾಸಕ್ಕೆ ಆರ್ಥಿಕ ಅಡಿ ತಡೆಯು ಮುಖ್ಯವಾಗುವುದಿಲ್ಲ. ವಿದ್ಯಾರ್ಥಿಗಳ ಸತತ ಪ್ರಯತ್ನ ಮಾಡುವ ಮುಖಾಂತರ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಡಾ. ನಿರ್ಮಲಾ ಸಿರಗಾಪೂರ ರವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಕಠಿಣ ಪರಿಶ್ರಮ ಮಾಡಬೇಕು ಇದಕ್ಕೆ ಬೇರೆ ಯಾವುದೇ ಅನ್ಯಮಾರ್ಗವಿಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿ ಪ್ರಾಂಶುಪಾಲರಾದ ಪ್ರೊ. ಗೀರಿಶ ಮೀಶಿ ಮಾತನಾಡುತ್ತಾ ವಿದ್ಯಾರ್ಥಿಗಳ ಜೀವನದಲ್ಲಿ ಉನ್ನತ ಗುರಿಯನ್ನು ಇಟ್ಟುಕೊಂಡು ಆ ಗುರಿಯತ್ತ ಸತತ ಪ್ರಯತ್ನ ಮಾಡುತ್ತ ತಮ್ಮ ಗುರಿಯನ್ನು ತಲುಪಿ ತಂದೆ ತಾಯಿಗಳ ಹಾಗೂ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ಉಪದೇಶಿಸಿದರು.
ಈ ಕಾರ್ಯಾಕ್ರಮವನ್ನು ಡಾ. ಗಾಂಧೀಜಿ ಮೋಳಕೇರೆ ನಿರ್ವಹಣೆ ಮಾಡಿದರು ಪ್ರೊ. ಸಿದ್ದಪ್ಪ ಕಾಂತಾ, ಆನಂದರಾಜ ಪಾಟೀಲ, ಪ್ರೊ. ವಸಂತ ನಾಸಿ ಹಾಗೂ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ಶರಣಪ್ಪ ಕಟ್ಟಿ ರವರು ವಂದಿಸಿದರು.