ಕಲಬುರಗಿ; ೧೦೦ ಕೋಟಿಗೂ ಅಧಿಕ ಕೋವಿಡ್ ಲಸಿಕಾ ಡೋಸ್ ಗಳನ್ನೂ ನೀಡಿ ಭಾರತ ವಿಶ್ವ ದಾಖಲೆ ಮಾಡಿರುವ ಹಿನ್ನೆಲೆಯಲ್ಲಿ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನ ನಗರ ಆರೋಗ್ಯ ಕೇಂದ್ರ ಐ.ಸಿ.ಡಿ.ಎಸ್-ನಲ್ಲಿ ಈ ದೊಡ್ಡ ಲಸಿಕಾ ಅಭಿಯಾನಕ್ಕೆ ಶ್ರಮಿಸಿದ ವೈದ್ಯಕೀಯ ತಂಡಕ್ಕೆ, ಸ್ಟಾಫ್ ನರ್ಸಗಳಿಗೆ, ಆಶಾ ಕಾರ್ಯಕರ್ತರಿಗೆ ಎಲ್ಲಾ ಕೋವಿಡ್ ವಾರಿಯರ್ಸ್ಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ ಸದಸ್ಯ ಶಶೀಲ ನಮೋಶಿ, ಎಪಿ.ಎಂ.ಸಿ ಮಾಜಿ ಅಧ್ಯಕ್ಷ ಅಪ್ಪು ಕಣಕಿ, ಬಿಜೆಪಿ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ಬೇಳಮಗಿ, ಪಾಲಿಕೆ ಸದಸ್ಯ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ, ವೈದ್ಯಧಿಕಾರಿ ಡಾ.ವೀಣಾ ಕಾಳಪೂರೆ, ಅಶ್ವಕ್ ಪಟೇಲ್, ಅಮರೇಶ ಇಟ್ಟಗಿ, ಸಪ್ನಾ, ಶಿವಾನಂದ ಇದ್ದರು.