ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಹಾಗೂ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ, ಭಂಟನಳ್ಳಿ, ಕೊಡದೂರ, ಕೊರವಿ ಮುಂತಾದ 25 ಗ್ರಾಮಗಳಲ್ಲಿ ಭೂಕಂಪದ ಜನರು ಆತಂಕದಲ್ಲಿದರು ಜಿಲ್ಲಾ ಉಸ್ತುವಾರಿ ಸಚಿವರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಭಾರತ ಮುಕ್ತಿ ಮೋರ್ಚಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳಿಂದ ಎಡಬಿಡದೆ ಭೂಕಂಪನವಾಗುತ್ತಿರುವುದರಿಂದ ಮಕ್ಕಳು, ಪಾಲಕರು ಹಾಗೂ ವಯೋವೃದ್ದರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ಉಟ್ಟ ಬಟ್ಟೆಯಲ್ಲಿಯೇ ಗ್ರಾಮವನ್ನು ತೊರೆಯುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ ನೀರಾಣಿ ಸೌಜನ್ಯಕ್ಕಾದರೂ ಭೂಕಂಪ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡದೆ ನಿರ್ಲಕ್ಷ್ಯ ತೋರಿ ಸಚಿವ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಸಚಿವರ ಈ ಪರಿ ನಿರ್ಲಕ್ಷ್ಯದಿಂದ ಕಲಬುರಗಿ ಅಭಿವೃದ್ಧಿ ಹೇಗೆ ಸಾಧ್ಯವೇ? ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದ ಸಚಿವರು, ವಿರೋಧ ಪಕ್ಷದ ನಾಯಕರು ಮುಂತಾದ ಜನಪ್ರತಿನಿಧಿಗಳು ಭೂಕಂಪನ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳುವ ಕಾರ್ಯದಲ್ಲಿ ತೊಡಗಿದರೇ, ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯನ್ನು ಮರೆತು ಬಿಟ್ಟಿದ್ದಾರೆ ಎಂದು ಅವರು ಕೀಡಿಕಾರಿದ್ದಾರೆ.
ಕಲಬುರಗಿಗೆ ಉಸ್ತುವಾರಿ ಸಚಿವರು ಬಂದರೆ ಸಾರ್ವಜನಿಕ ಅಭಿವೃದ್ಧಿಯ ಹಿತದೃಷ್ಠಿಯಿಂದ ಕಪ್ಪು ಬಾವುಟ ಪ್ರದರ್ಶನ ಮಾಡಿ ಅವರ ನಿರ್ಲಕ್ಷ್ಯತನದ ಮೂಡಿಸಲಾಗುವುದೆಂದು ಮಾರುತಿ ಗಂಜಗಿರಿ ಪ್ರಕಟಣೆಯಲ್ಲಿ ಮೂಲಕ ಎಚ್ಚರಿಕೆ ನೀಡಿದ್ದಾರೆ.