ಕಲಬುರಗಿ: ಇಂದು ನಗರದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಚೇರಿ ವತಿಯಿಂದ ವಿಜಿಲೆನ್ಸ್ ಅವೇರ್ನೆಸ್ ಸಪ್ತಾಹ ಪ್ರಯುಕ್ತ ಭ್ರಷ್ಟಾಚಾರ ಮುಕ್ತ ಸಮಾಜದೆಡೆಗೆ ನಮ್ಮ ನಡಿಗೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸೂಪರ ಮಾರ್ಕೆಟ್ ಶಾಖೆಯಿಂದ ಜಗತ ವ್ರತ್ತದ ವರೆಗೆ ಜಾಥಾ ನಡೆಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥರಾದ ಅರವಿಂದ ಹೆಗ್ಗಡೆಯವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಸಮಾಜದಲ್ಲಿ ಬೇರೂರಿರುವ ಈ ಭ್ರಷ್ಟಾಚಾರವನ್ನು ಹೊಡೆದೋಡಿಸಿ ಜವಾಬ್ದಾರಿಯುತವಾಗಿ ನಡೆದುಕೊಂಡಾಗ ಮಾತ್ರ ಸದೃಢ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪ ಪ್ರಾದೇಶಿಕ ಮುಖ್ಯಸ್ಥರಾದ ರಾಜಕುಮಾರ್, ಮುಖ್ಯ ವ್ಯವಸ್ಥಾಪಕರುಗಳಾದ ಎಸ್ ಪ್ರಶಾಂತ್, ಸುಧೀಂದ್ರ ಕಾರಂತ್, ಚಂದ್ರಶೇಖರ್, ಹಾಗೂ ನಿರ್ಮಲ್ ಬಾಬು, ನಗರದ ಎಲ್ಲಾ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಾದೇಶಿಕ ಜಾಗೃತಿ ದಳದ ಅಧಿಕಾರಿ ಅಬ್ದುಲ್ ಪಯಾಜ ರವರು ಸಹ ಉಪಸ್ಥಿತರಿದ್ದರು