ಆಳಂದ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸುವ ಮೊದಲು ದರ ನಿಗದಿಪಡಿಸಬೇಕು ಹಾಗೂ ಕಳೆದ ಸಾಲಿನ ಬಾಕಿ ಪ್ರತಿಟನ್ ಕಬ್ಬಿಗೆ 200 ರೂಪಾಯಿ ಬಿಲ್ ಪಾವತಿಸಬೇಕು ಎಂದು ತಾಲೂಕಿನ ಭೂಸನೂರ ಹತ್ತಿರದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಮುಂದೆ ಕಬ್ಬು ಬೆಳೆಗಾರರು ಸಾಮೂಹಿಕವಾಗಿ ಪ್ರತಿಭಟನಾ ಧರಣಿ ಪ್ರಾರಂಭಿಸಿ ಸೋಮವಾರ ಒತ್ತಾಯಿಸಿದರು.
ಕಾರ್ಖಾನೆಯ ಆಡಳಿತ ಮಂಡಳಿಗೆ ಹಲವು ಬಾರಿ ಲಿಖಿತ ಹಾಗೂ ಮೌಖಿಕವಾಗಿ ಕೇಳಿಕೊಂಡರು ಸ್ಪಂದಿಸುತ್ತಿಲ್ಲ. ಮತ್ತು ಹಳೆಯ ಪ್ರತಿಟನ್ ಕಬ್ಬಿನ 200 ರೂಪಾಯಿ ಬಿಲ್ ಪಾವತಿಯೂ ಮಾಡುತ್ತಿಲ್ಲ. ದರ ನಿಗದಿ ಪಡಿಸದೆ ಹಂಗಾಮಿನಲ್ಲಿ ಕಾರ್ಖಾನೆ ಆರಂಭಕ್ಕೆ ಬಿಡುವುದಿಲ್ಲ ಎಂದು ರೈತ ಮುಖಂಡ ಕಲ್ಯಾಣಿ ಜಮಾದಾರ ಅವರು ಹೇಳಿದರು.
ಬಿಲ್ ಕೇಳಲು ಹೋದ ರೈತರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ದರ ನಿಗದಿಪಡಿಸಿದಂತೆ ಬಿಲ್ ಪಾವತಿಸಲಾಗಿದೆ. ಆದರೆ ಎನ್‍ಎಸ್‍ಎಲ್‍ನಲ್ಲಿ ಮಾತ್ರ ದರ ನಿಗದಿ ಪಡಿಸುತ್ತಿಲ್ಲ ಹಾಗೂ ನೆರೆಯ ಸಕ್ಕರೆ ಕಾರ್ಖಾನೆಗಳು ನೀಡುವ ದರವು ಸಕಾಲಕ್ಕೆ ಕೊಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಪ್ರಸಕ್ತ ಹಂಗಾಮಿನಲ್ಲಿನ ನುರಿಸುವ ಪ್ರತಿಟನ್ ಕಬ್ಬಿನ ದರ ಘೋಷಣೆ ಮಾಡಬೇಕು ಹಾಗೂ ಬಾಕಿ ಪ್ರತಿಟನ್ ಕಬ್ಬಿನ 200 ರೂಪಾಯಿ ರೈತರ ಖಾತೆಗೆ ತಕ್ಷವೇ ಜಮಾಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾರ್ಖಾನೆ ಮುಂದೆ ಆರಂಭಿಸಿದ ಪ್ರತಿಭಟನಾ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದು ಅವರು ಪ್ರಕಟಿಸಿದರು.
ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು ಅವರು ಬೆಲೆ ನಂತರ ಘೋಷಣೆ ಮಾಡಲಾಗುವುದು ಮತ್ತು ಪ್ರತಿಟನ್ ಕಬ್ಬಿಗೆ 100 ರೂಪಾಯಿ ಡಿಸೆಂಬರ್ ತಿಂಗಳಲ್ಲಿ ನೀಡಲಾಗುವುದು ಎಂದು ಹೇಳಿದರು.
ಇದಕ್ಕೆ ತೃಪ್ತರಾಗದ ಧರಣಿ ನಿರತ ಮುಖಂಡರು, 100 ರೂಪಾಯಿ ಆದರು ನಾಳೆಯಿಂದಲೇ ಪಾವತಿಸಬೇಕು. ಇನ್ನೂಳಿದ ನೂರು ನಂತರ ಕೊಡಿ ಎಂದು ಆಗ್ರಹಿಸಿದ್ದಾರು, ಉಪಾಧ್ಯಕ್ಷರು 100 ಮಾತ್ರ ಡಿಸೆಂಬರನಲ್ಲಿ ಪಾವತಿಸಲಾಗುವುದು ಇನ್ನೂ 100 ರೂಪಾಯಿ ನೀಡಲಾಗದು ಎಂದು ಹೇಳಿದ್ದರಿಂದ ಕುಪಿತಗೊಂಡ ಮುಖಂಡಿದ್ದಾರೆ. ಇದರಿಂದಾಗಿ ಕಾರ್ಖಾನೆ ಮತ್ತು ಧರಣಿ ನಿರತರ ನಡುವೆ ನಡೆದ ಸಂದಾನ ವಿಫವಾಗಿ ಧರಣಿ ಮುಂದುವರೆದಿದೆ.
ಈ ನಡುವೆ ತಹಸೀಲ್ದಾರರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆ ಆಲಿಸಿದ ಅವರು ಕಾರ್ಖಾನೆ ಮತ್ತು ರೈತರ ನಡುವೆ ನಡೆಸಿದ ಸಂದಾನ ವಿಫಲವಾಯಿತು.
ಕನಸೇ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಮತ್ತು ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಅವರು ಧರಣಿಗೆ ಬೆಂಬಲಿಸಿ ಮಾತನಾಡಿದರು.
ಕಬ್ಬು ಬೆಳೆಗಾರ ಸಂತೋಷ ಕಲಶೆಟ್ಟಿ, ಕಲ್ಯಾಣರಾವ್ ವಿ. ಪಾಟೀಲ, ಹಣಮಂತರಾಯ ಮೈನಾಳ, ಶ್ರೀಶೈಲ ಯಂಕಂಚಿ, ರಾಜಶೇಖರ ಜೇವರ್ಗಿ, ಶಾಂತಮಲ್ಲಪ್ಪ ನೆಲ್ಲೂರ, ಜಲಾಲಿ ಶೇಖ, ಮಹಾಂತಪ್ಪ ಗೊಬ್ಬರ, ಕಾಂತಪ್ಪ ಕೊತಲಿ, ಮೈನೋದ್ದೀನ ಜವಳಿ, ಸೀತಾರಾಮ ರಾಠೋಡ ಸೇರಿ ಭೂಸನೂರ, ಕೊರಳ್ಳಿ, ಧಂಗಾಪೂರ ಜವಳಿ ಡಿ, ಗ್ರಾಮಗಳ ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.