ಆಳಂದ: ನ.1 ರಂದು ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಳಸಂಗಿ ಅವರು, ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಕನ್ನಡ ನಾಡಿಗೆ ಕಿರ್ತಿ ಹೆಚ್ಚಿಸಿದೆ. ನಾಡಿನ ನೆಲ, ಜಲ, ಭಾಷೆ ಹಾಗೂ ಸಾಹಿತ್ಯ ಉಳಿಸಿ ಬೆಳೆಸಲು ಕನ್ನಡಿಗರಾದ ನಾವು ಮುಂದಾಗಬೇಕಾಗಿದೆ. ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರತಿಯೊಬ್ಬರು ಸಹಕಾರ, ಸಲಹೆ ನೀಡಬೇಕು ಎಂದರು. ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ನಾಟೀಕಾರ, ನಿಂಬರ್ಗಾ ಘಟಕ ಅಧ್ಯಕ್ಷ ಶ್ರೀಶೈಲ್ ನಿಗಶೆಟ್ಟಿ, ವಿದ್ಯಾರ್ಥಿ ಘಟಕ ಅಧ್ಯಕ್ಷ ಈರಣ್ಣ ಶರಣ, ಉಪಾಧ್ಯಕ್ಷ ಮಹಾದೇವ ಮೀಟೆಕಾರ, ರೈತ ಘಟಕ ಅಧ್ಯಕ್ಷ ಧರ್ಮರಾಯ ವಗ್ಧರ್ಗಿ, ಪ್ರವೀಣ ಮೀಟೆಕಾರ, ಕಾರ್ಯದರ್ಶಿಗಳಾದ ಸಚಿನ ಶೀಲವಂತ, ಅನೀಲ ನಾಗೂರ, ಸಾಗರ ದುರ್ಗದ, ರಾಜಕುಮಾರ ಮಡಿವಾಳ, ಕ್ಷೇಮಲಿಂಗ ಕಂಭಾರ, ಶರಣು ಹಳಿಮನಿ, ಮಡಿವಾಳಪ್ಪ ಮಡಿವಾಳ ಉಪಸ್ಥಿತರಿದ್ದರು.